ಮುಂಬಯಿಯ ಮನೋರೋಗಿ ತಾಯಿ-ಮಗುವನ್ನು ರಕ್ಷಿಸಿ ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ ವಿಶು ಶೆಟ್ಟಿ. ಪೊಲೀಸ್ ಸಿಬ್ಬಂದಿ ದೀಪಾ ಶೆಟ್ಟಿ ಇದ್ದರು.
Published on:
Copied
Follow Us
* ಸಮಾಜ ಸೇವಕ ವಿಶು ಶೆಟ್ಟಿ ರಕ್ಷಣೆ
* ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ
* ಸೂಕ್ತ ಕ್ರಮಕ್ಕೆ ಆಗ್ರಹ
ಉಡುಪಿ: ವಾರದ ಹಿಂದೆ ಮುಂಬಯಿ ಮೂಲದ ಮನೋರೋಗಿ ತಾಯಿ ಹಾಗೂ 5 ವರ್ಷದ ಮಗುವನ್ನು ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ ರಕ್ಷಿಸಿ, ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಇದೀಗ ಬಾಲಕಿಯ ಭವಿಷ್ಯ ಹಾಗೂ ಜೀವನದ ಕುರಿತಾಗಿ ಮಕ್ಕಳ ಕಲ್ಯಾಣ ಇಲಾಖೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ವಿಶು ಶೆಟ್ಟಿ ಆಗ್ರಹಿಸಿದ್ದಾರೆ.
ಮಹಿಳೆಯ ಪತಿ ಹಾಗೂ ಸಂಬಂಧಿಕರು ಸಂಪರ್ಕಕ್ಕೆ ಲಭಿಸಿದ್ದು, ಕರೆದುಕೊಂಡು ಹೋಗಲು ಬರುವುದಾಗಿ ತಿಳಿಸಿದ್ದಾರೆ. ಆದರೆ, ಮಗುವಿನ ತಂದೆ ಸೂಕ್ತ ಕಾಳಜಿ ವಹಿಸುವ ಲಕ್ಷಣವಿಲ್ಲ. ಮುಂಬಯಿಗೆ ಕರೆದುಕೊಂಡು ಹೋಗಿ ತಾಯಿ&ಮಗುವಿಗೆ ಪುನ; ಇದೇ ಪರಿಸ್ಥಿತಿ ಎದುರಾದರೆ ಬಾಲಕಿಯ ಬದುಕು ದುರಂತವಾಗುವುದು ಖಂಡಿತ.
ಮಹಿಳೆಗೆ ದೀರ್ಘಕಾಲದ ಚಿಕಿತ್ಸೆಯ ಅಗತ್ಯತೆಯಿದೆ ಎಂದು ವೈದ್ಯರೂ ತಿಳಿಸಿದ್ದಾರೆ. ಹೀಗಾಗಿ ಈ ಬಗ್ಗೆ ಉಡುಪಿಯ ಮಕ್ಕಳ ಹಿತಾಸಕ್ತಿಯ ಪರ ಇರುವ ಇಲಾಖೆ ಸೂಕ್ತ ಕಾನೂನು ಕ್ರಮ ಕೈಗೊಂಡು, ಮುಂಬಯಿಯಲ್ಲಿರುವ ಮಕ್ಕಳ ಕಲ್ಯಾಣ ಇಲಾಖೆಗೆ ಸರಿಯಾದ ಮಾಹಿತಿ ನೀಡಬೇಕು. ಬಾಲಕಿಯ ಬದುಕು ದುಸ್ತರವಾಗದಂತೆ ನೋಡಿಕೊಳ್ಳಬೇಕು ಎಂದು ವಿನಂತಿಸಿದ್ದಾರೆ.
ಬಾಲಕಿಯ ತಂದೆಯ ನಡೆ-ನುಡಿ ನೋಡಿದರೆ ಹೆಂಡತಿ, ಮಗುವಿನ ಮೇಲೆ ಕಾಳಜಿ ಇರುವಂತೆ ಕಾಣುತ್ತಿಲ್ಲ. ಇತ್ತೀಚೆಗೆ ದೇಶದಲ್ಲಿ ಮಕ್ಕಳು ಕಾಣೆಯಾಗಿ ಪತ್ತೆಯಾಗದೆ ಇರುವುದಕ್ಕೆ ಇಂತಹ ದುರಂತವೂ ಒಂದು ಕಾರಣವಾಗಿದೆ. ಮನೋರೋಗಿ ಮಹಿಳೆ ತನಗೆ ಇನ್ನೂ ಮೂವರು ಮಕ್ಕಳಿರುವುದಾಗಿ ತಿಳಿಸಿದ್ದಾರೆ. ಅವರ ರಕ್ಷಣೆ ಹಾಗೂ ಪ್ರಸ್ತುತ ಅಸಹಾಯಕ ಸ್ಥಿತಿಯಲ್ಲಿರುವ ತಾಯಿ-ಮಗುವಿನ ಆರೈಕೆಗೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವಂತೆ ವಿಶು ಶೆಟ್ಟಿ ಒತ್ತಾಯಿಸಿದ್ದಾರೆ.