ವಿನೀತ್ ಕುಮಾರ್, ದಿಶಾಲಿ ಪೂಜಾರಿ ಅತ್ಯುತ್ತಮ ನಟ-ನಟಿ

ಕೋಸ್ಟಲ್ ಫಿಲಂ ಅವಾರ್ಡ್ಸ್ ಉದ್ಘಾಟಿಸಲಾಯಿತು. ಸ್ಯಾಂಡೀಸ್ ಸಂಸ್ಥೆ ಸ್ಥಾಪಕಾಧ್ಯಕ್ಷ ಸಂದೇಶ್ ರಾಜ್ ಬಂಗೇರ, ಶರ್ಮಿಳಾ ಅಮೀನ್, ವಿನೀತ್ ಕುಮಾರ್ ಮೊದಲಾದವರಿದ್ದರು.
ಕೋಸ್ಟಲ್ ಫಿಲಂ ಅವಾರ್ಡ್ಸ್ ಉದ್ಘಾಟಿಸಲಾಯಿತು. ಸ್ಯಾಂಡೀಸ್ ಸಂಸ್ಥೆ ಸ್ಥಾಪಕಾಧ್ಯಕ್ಷ ಸಂದೇಶ್ ರಾಜ್ ಬಂಗೇರ, ಶರ್ಮಿಳಾ ಅಮೀನ್, ವಿನೀತ್ ಕುಮಾರ್ ಮೊದಲಾದವರಿದ್ದರು.
Published on
ವಿಜಯವಾಣಿ ಸುದ್ದಿಜಾಲ ಮೂಲ್ಕಿ
ತುಳುಚಿತ್ರರಂಗದ 5ನೇ ವರ್ಷದ ಕೋಸ್ಟಲ್ ಫಿಲ್ಮ್ ಅವಾರ್ಡ್ಸ್-2026 ಸಮಾರಂಭ ಮೂಲ್ಕಿಯ ಕೋಲ್ನಾಡ್ ಸುಂದರರಾಮ ಶೆಟ್ಟಿ ಕನ್ವೆನ್ಶನ್ ಸೆಂಟರ್‌ನಲ್ಲಿ ಸ್ಯಾಂಡೀಸ್ ಕಂಪನಿ, ಸಿನಿ ಗ್ಯಾಲಕ್ಸಿ ಅಸ್ತ್ರ ಗ್ರೂಪ್ ಸಹಕಾರದಲ್ಲಿ ಅದ್ದೂರಿಯಾಗಿ ಜರುಗಿತು.

ಪ್ರಶಸ್ತಿ ಪುರಸ್ಕಾರ

ತುಳು ಸಿನಿಮಾ ಕ್ಷೇತ್ರದ 2025ರ ಅತ್ಯುತ್ತಮ ಕಲಾವಿದರು, ತಂತ್ರಜ್ಞರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಮೇಳೈಸಿದವು. ರಂಗಭೂಮಿ, ಸಿನಿಮಾ ಕಲಾವಿದೆ ಸರೋಜಿನಿ ಎಸ್.ಶೆಟ್ಟಿ ಅವರಿಗೆ ಜೀವಮಾನದ ಸಾಧಕಿ ಪುರಸ್ಕಾರ, ಡಾ.ದೇವದಾಸ್ ಕಾಪಿಕಾಡ್ ಅವರಿಗೆ ವರ್ಸಟೈಲ್ ಆಕ್ಟರ್ ಅವಾರ್ಡ್ ನೀಡಲಾಯಿತು. ನೆತ್ತೆರೆಕೆರೆ ಚಿತ್ರ ಗರಿಷ್ಠ ಪ್ರಶಸ್ತಿಗಳನ್ನು ಬಾಚಿಕೊಂಡಿತು.

ಪ್ರಶಸ್ತಿ ಪುರಸ್ಕೃತರು

ಅತ್ಯುತ್ತಮ ನಟ- ವಿನೀತ್ ಕುಮಾರ್ (ಮಿಡ್ಲ್ ಕ್ಲಾಸ್ ಫ್ಯಾಮಿಲಿ), ಅತ್ಯುತ್ತಮ ನಟಿ-ದಿಶಾಲಿ ಪೂಜಾರಿ (ನೆತ್ತೆರೆಕೆರೆ), ಅತ್ಯುತ್ತಮ ಪರಿಣಾಮಕಾರಿ ಚಿತ್ರ-ಪಿದಾಯಿ, ಅತ್ಯುತ್ತಮ ಬಾಲ ಕಲಾವಿದರು: ನಟ- ಅಕ್ಷರ್ ಜೆ.ಶೆಟ್ಟಿ (ಜೈ), ನಟಿ- ಲಕ್ಷ ಲಂಚುಲಾಲ್(ಮೀರಾ), ಅತ್ಯುತ್ತಮ ಪೋಷಕ ನಟಿ- ರೂಪಾಶ್ರೀ ವರ್ಕಾಡಿ(ಮಿಡಲ್ ಕ್ಲಾಸ್ ್ಯಾಮಿಲಿ), ಅತ್ಯುತ್ತಮ ಪೋಷಕ ನಟ- ನವೀನ್ ಡಿ.ಪಡೀಲ್(ಜೈ), ಅತ್ಯುತ್ತಮ ಹಾಸ್ಯ ಕಲಾವಿದ-ಅರವಿಂದ್ ಬೋಳಾರ್(ಜೈ), ಅತ್ಯುತ್ತಮ ನಿರ್ದೇಶಕ- ಸಂತೋಷ್ ಮಾಡ(ಪಿದಾಯಿ), ಯೂತ್ ಐಕಾನ್ ಮೇಲ್-ಸ್ವರಾಜ್ ಶೆಟ್ಟಿ, ಫಿಮೇಲ್-ಸಮತಾ ಅಮೀನ್.
ಅತ್ಯುತ್ತಮ ಹಿನ್ನೆಲೆ ಸಂಗೀತ-ಕಾರ್ತಿಕ್ ಮೂಲ್ಕಿ(ನೆತ್ತರ್‌ಕೆರೆ), ಅತ್ಯುತ್ತಮ ಕಥೆ-ರಾಹುಲ್ ಅಮೀನ್(ಮಿಡ್ಲ್ ಕ್ಲಾಸ್ ್ಯಾಮಿಲಿ), ಸಂಗೀತ ನಿರ್ದೇಶನ-ಲಿಖಿತ್ ಪ್ರಸಾದ್(ಧರ್ಮ ಚಾವಡಿ), ಚೊಚ್ಚಲ ಚಿತ್ರದ ಅತ್ಯುತ್ತಮ ನಟ ಅಶ್ವಥ್(ಮೀರಾ), ನಟಿ- ಧನ್ಯ ಪೂಜಾರಿ(ಧರ್ಮಚಾವಡಿ), ಚೊಚ್ಚಲ ಚಿತ್ರದ ಅತ್ಯುತ್ತಮ ನಿದೇರ್ಶಕ-ಸ್ವರಾಜ್ ಶೆಟ್ಟಿ(ನೆತ್ತರ್‌ಕೆರೆ) ಛಾಯಾಗ್ರಹಣ-ಉದಯ ಬಲ್ಲಾಳ್(ನೆತ್ತೆರ್‌ಕೆರೆ), ಪಬ್ಲಿಸಿಟಿ ಡಿಸೈನ್-ದೇವಿ ರೈ(ನೆತ್ತೆರ್‌ಕೆರೆ), ಚಿತ್ರಕಥೆ-ರೂಪೇಶ್ ಶೆಟ್ಟಿ(ಜೈ), ಸಂಭಾಷಣೆ-ಪ್ರಸನ್ನ ಶೆಟ್ಟಿ ಬೈಲೂರು(ಜೈ), ಸಾಹಿತ್ಯ-ಅರುಣ್ ಉಳ್ಳಾಲ(ನೆತ್ತರ್‌ಕೆರೆ), ಅತ್ಯುತ್ತಮ ಸಂಕಲನ-ಗಣೇಶ್ ನೀರ್ಚಾಲು(ನೆತ್ತರ್‌ಕೆರೆ), ಕಲೆ-ವಿಪಿನ್, ಸಾಹಸ-ಮಾದ(ನೆತ್ತರ್‌ಕೆರೆ) ನೃತ್ಯ ಸಂಯೋಜನೆ-ನವೀನ್ ಶೆಟ್ಟಿ ಆರ್ಯನ್(ಮಿಡಲ್ ಕ್ಲಾಸ್ ್ಯಾಮಿಲಿ). ಪ್ಲೇ ಬ್ಯಾಕ್ ಸಿಂಗರ್ ಪುರುಷ -ನಿಹಾಲ್ ತೌರೋ(ಪಿಲಿಪಂಜ), ಪ್ಲೇ ಬ್ಯಾಕ್ ಗಾಯಕಿ ಸ್ತ್ರೀ-ವೈಕುಂಬ್ ವಿಜಯಲಕ್ಷ್ಮೀ(ನೆತ್ತರ್‌ಕೆರೆ), ಖಳ ಪಾತ್ರ: ರಾಜದೀಪಕ್ ಶೆಟ್ಟಿ(ಜೈ),_ ಅತ್ಯುತ್ತಮ ಜನಪ್ರಿಯ ಚಿತ್ರ: (ಮಿಡ್ಲ್ ಕ್ಲಾಸ್ ್ಯಾಮಿಲಿ), ಅತ್ಯುತ್ತಮ ಸಾಮಾಜಿಕ ಪ್ರಭಾವದ ಚಿತ್ರ: (ಮೀರಾ), ಅತ್ಯುತ್ತಮ ಚಿತ್ರ: (ಜೈ).
ಮಾನವ ಸಂಪನ್ಮೂಲ ತರಬೇತಿದಾರ ಶ್ರೀನಾಥ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ವಿಶೇಷ ಅತಿಥಿಯಾಗಿದ್ದರು. ಸಿನಿಮಾ ನಿರ್ದೇಶಕ ವಿಜಯಕುಮಾರ್ ಕೊಡಿಯಾಲ್‌ಬೈಲ್, ಅಸ್ತ್ರ ಸಂಸ್ಥೆಯ ಲಂಚುಲಾಲ್ ಎ.ಎಸ್. ಮಾತನಾಡಿದರು. ತುಳು ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಆರ್.ಧನರಾಜ್, ಜಾನಪದ ಪರಿಷತ್ ಅಧ್ಯಕ್ಷ ಪಮ್ಮಿ ಕೊಡಿಯಾಲ್‌ಬೈಲ್ ಉಪಸ್ಥಿತರಿದ್ದರು.
ಸ್ಯಾಂಡೀಸ್ ಸಂಸ್ಥೆ ಸ್ಥಾಪಕಾಧ್ಯಕ್ಷ ಸಂದೇಶ್ ರಾಜ್ ಬಂಗೇರ ಅತಿಥಿಗಳನ್ನು ಗೌರವಿಸಿದರು. ಶರ್ಮಿಳಾ ಅಮೀನ್, ವಿನೀತ್ ಕುಮಾರ್ ನಿರೂಪಿಸಿದರು. ತುಳು ಚಿತ್ರರಂಗದ ದಿಗ್ಗಜ ಕಲಾವಿದರು, ನಿರ್ಮಾಪಕರು, ತಂತ್ರಜ್ಞರು, ಹಿರಿಯ, ಕಿರಿಯ ನಟ-ನಟಿಯರು ಮತ್ತಿತರ ಗಣ್ಯರು ಭಾಗವಹಿಸಿದ್ದರು. ತುಳು ಚಿತ್ರರಂಗದ ನಟ ನಟಿಯರಿಂದ, ಮತ್ತು ಸಿಸಿಲಿಂಗ್ ಗಾಯ್ಸ ತಂಡದಿಂದ ನೃತ್ಯ, ರಸಮಂಜರಿ, ಕಾಮಿಡಿ ಕಾರ್ಯಕ್ರಮ ನಡೆಯಿತು. 2025ರಲ್ಲಿ ತೆರೆ ಕಂಡಿರುವ ಒಟ್ಟು 8 ಸಿನಿಮಾಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದವು. ಲ್ೈ ಟೈಮ್ ಅಚೀವ್‌ಮೆಂಟ್ ಅವಾರ್ಡ್, ವರ್ಸಟೈಲ್ ಆಕ್ಟರ್ ಅವಾರ್ಡ್ ಸೇರಿ ಒಟ್ಟು 30 ವಿಭಾಗಗಳಲ್ಲಿ ಸ್ಪರ್ಧೆ ನಡೆದಿತ್ತು.

ತುಳು ಸಿನಿಮಾ ಬೆಳವಣಿಗೆಗೆ ಕೋಸ್ಟಲ್ ಫಿಲ್ಮ್ ಅವಾರ್ಡ್ ಪ್ರೇರಣೆಯಾಗಿದೆ. ಕೋಸ್ಟಲ್ ಫಿಲ್ಮ್‌ಂ ಅವಾರ್ಡ್ ಕಾರ್ಯಕ್ರಮದಲ್ಲಿ ಎಲ್ಲ ಕಲಾವಿದರು, ತಂತ್ರಜ್ಞರು ಭಾಗವಹಿಸಿದಾಗ ಸಮಾರಂಭಕ್ಕೊಂದು ಮೆರುಗು ಬರುತ್ತದೆ.

— ಗುರುಕಿರಣ್, ಸಂಗೀತ ನಿರ್ದೇಶಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net