ದೇಗುಲ ವ್ಯವಸ್ಥಾಪನಾ ಸಮಿತಿಗೆ ಬೇಡ ಅನ್ಯ ಗ್ರಾಮದವರು

ಬೆಳ್ಳರ್ಪಾಡಿ ಶ್ರೀಮಹಾವಿಷ್ಣುಮೂರ್ತಿ ದೇವಸ್ಥಾನದ ನೂತನ ವ್ಯವಸ್ಥಾಪನಾ ಸಮಿತಿಯ ಆಯ್ಕೆ ತಡೆ ಹಿಡಿಯುವಂತೆ ಆಗ್ರಹಿಸಿ ಗ್ರಾಮಸ್ಥರು ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಅವರಿಗೆ ಮನವಿ ಸಲ್ಲಿಸಿದರು. ಬಿ.ಶಿವರಾಮ ಶೆಟ್ಟಿ, ವಿಜೇತಕುಮಾರ್​, ರಮೇಶ್​ ಸಾಲ್ಯಾನ್​, ಲಕ್ಷ್ಮೀನಾರಾಯಣ ಭಟ್​, ರೋಹಿತ್​ ಶೆಟ್ಟಿ, ಸತೀಶ್​ ಶೆಟ್ಟಿ, ರಾಧಾಕೃಷ್ಣ ಪ್ರಭು, ಸದಾಶಿವ ಸಾಲ್ಯಾನ್​, ಜಯಲಕ್ಷ್ಮೀ ಸೇರಿಗಾರ್​, ಪೂರ್ಣಿಮಾ ಶೆಟ್ಟಿ ಇದ್ದರು.
ಬೆಳ್ಳರ್ಪಾಡಿ ಶ್ರೀಮಹಾವಿಷ್ಣುಮೂರ್ತಿ ದೇವಸ್ಥಾನದ ನೂತನ ವ್ಯವಸ್ಥಾಪನಾ ಸಮಿತಿಯ ಆಯ್ಕೆ ತಡೆ ಹಿಡಿಯುವಂತೆ ಆಗ್ರಹಿಸಿ ಗ್ರಾಮಸ್ಥರು ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಅವರಿಗೆ ಮನವಿ ಸಲ್ಲಿಸಿದರು. ಬಿ.ಶಿವರಾಮ ಶೆಟ್ಟಿ, ವಿಜೇತಕುಮಾರ್​, ರಮೇಶ್​ ಸಾಲ್ಯಾನ್​, ಲಕ್ಷ್ಮೀನಾರಾಯಣ ಭಟ್​, ರೋಹಿತ್​ ಶೆಟ್ಟಿ, ಸತೀಶ್​ ಶೆಟ್ಟಿ, ರಾಧಾಕೃಷ್ಣ ಪ್ರಭು, ಸದಾಶಿವ ಸಾಲ್ಯಾನ್​, ಜಯಲಕ್ಷ್ಮೀ ಸೇರಿಗಾರ್​, ಪೂರ್ಣಿಮಾ ಶೆಟ್ಟಿ ಇದ್ದರು.
Published on

* ಬೆಳ್ಳರ್ಪಾಡಿ ಗ್ರಾಮದ ಬಿ.ಶಿವರಾಮ ಶೆಟ್ಟಿ ಆಗ್ರಹ 

* ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತರಿಗೆ ಮನವಿ

ಉಡುಪಿ: ಬೆಳ್ಳರ್ಪಾಡಿಯ ಶ್ರೀಮಹಾವಿಷ್ಣುಮೂರ್ತಿ ದೇವಸ್ಥಾನಕ್ಕೆ ಗ್ರಾಮದ ಭಕ್ತರನ್ನು ಹೊರತುಪಡಿಸಿ ಅನ್ಯಗ್ರಾಮದ ವ್ಯಕ್ತಿಗಳಿಗೆ ಯಾವುದೇ ಕಾರಣಕ್ಕೂ ವ್ಯವಸ್ಥಾಪನಾ ಸಮಿತಿಯ ಸದಸ್ಯರಾಗಲು ಅವಕಾಶ ನೀಡಬಾರದು ಎಂದು ಗ್ರಾಮದ ಪ್ರಮುಖ ಬಿ.ಶಿವರಾಮ ಶೆಟ್ಟಿ ಜಿಲ್ಲಾಡಳಿತಕ್ಕೆ ಆಗ್ರಹಿಸಿದರು.
ಪ್ರಚಾರದ ಕೊರತೆ ಎಂಬ ಕಾರಣ ಮುಂದಿಟ್ಟು ಪ್ರಸ್ತುತ ಸಮಿತಿ ವಜಾ ಮಾಡಿರುವುದನ್ನು ವಿರೋಧಿಸಿ ಗ್ರಾಮಸ್ಥರ ನಿಯೋಗದೊಂದಿಗೆ ಉಡುಪಿ ಜಿಲ್ಲಾ ಹಿಂದು ಧಾರ್ಮಿಕ ಸಂಸ್ಥೆ ಮತ್ತು ಧರ್ಮಾದಾಯ ದತ್ತಿ ಇಲಾಖೆಯ ಸಹಾಯಕ ಆಯುಕ್ತರೂ ಆದ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಅವರಿಗೆ ಮನವಿ ನೀಡಿ ಒತ್ತಾಯಿಸಿದರು.

ಜಾತ್ರೆಗೆ ಗ್ರಾಮಸ್ಥರ ಆರ್ಥಿಕ ಸಹಕಾರ

ದೇವಸ್ಥಾನವು 1,300 ವರ್ಷಗಳಷ್ಟು ಪುರಾತನವಾಗಿದೆ. ಗ್ರಾಮದ ಭಕ್ತಾಭಿಮಾನಿಗಳ ಸಹಕಾರದಿಂದಲೇ ದೇವಾಲಯದ ಜೀರ್ಣೋದ್ಧಾರ ಹಾಗೂ ಪೂಜಾವಿಧಿ, ಜಾತ್ರಾ ಮಹೋತ್ಸವ ಸೇರಿದಂತೆ ಇತರೆಲ್ಲ ಧಾರ್ಮಿಕ ಕಾರ್ಯ ನಡೆದು ಬರುತ್ತಿದೆ. ಪ್ರತಿವರ್ಷದ ಜಾತ್ರೆ ತಗಲುವ ವೆಚ್ಚ ದೇವಸ್ಥಾನದ ಆದಾಯ ಸಾಲುತ್ತಿಲ್ಲ. ಹೀಗಾಗಿ ಗ್ರಾಮಸ್ಥರೇ ಹಣ ಸಂಗ್ರಹಿಸಿ, ಜಾತ್ರೆ ನಡೆಸಲು ಕೊರತೆಯಾಗುವ ಮೊತ್ತವನ್ನು ಇಂದಿಗೂ ದೇಣಿಗೆ ನೀಡಿ ಸಹಕರಿಸುತ್ತಿದ್ದಾರೆ ಎಂದರು.

ಧಾರ್ಮಿಕ ಭಾವನೆಗೆ ಘಾಸಿ

ಪ್ರಸ್ತುತ ಸಮಿತಿ ವಜಾ ಮಾಡಿ ಬೆಳ್ಳರ್ಪಾಡಿ ಗ್ರಾಮಕ್ಕೆ ಸಂಬಂಧಿಸದೇ ಇರುವ ಕೆಲವು ವ್ಯಕ್ತಿಗಳನ್ನೊಳಗೊಂಡ ಹೊಸ ಸಮಿತಿ ರಚಿಸಿ ಇಲಾಖಾ ಅನುಮೋದನೆಗೆ ಕಳುಹಿಸಲಾಗಿದೆ. ಆದರೆ, ಈ ಸಮಿತಿಯು ಗ್ರಾಮಸ್ಥರು, ಭಕ್ತರ ಸಮ್ಮುಖದಲ್ಲಿ ರಚನೆಯಾಗಿಲ್ಲ. ಬೇರೆ ಗ್ರಾಮದಿಂದ ಬಂದ ವ್ಯಕ್ತಿಗಳು ತಮ್ಮ ಪಾರುಪತ್ಯ ಇಲ್ಲಿ ಸ್ಥಾಪಿಸಲು ಯತ್ನಿಸಿದ್ದು, ಈ ಸಮಿತಿಯ ಬಗ್ಗೆ ಗ್ರಾಮದ ಯಾರಿಗೂ ಸಮಾಧಾನ ಇಲ್ಲ. ಇದು ಗ್ರಾಮಸ್ಥರ ಧಾರ್ಮಿಕ ಭಾವನೆಗೆ ಘಾಸಿ ತಂದಿದೆ ಎಂದರು. 

ಗ್ರಾಮಸ್ಥರಿಂದ ಮನವಿ ಸಲ್ಲಿಕೆ

ಹೊಸ ಸಮಿತಿ ಅಸ್ತಿತ್ವಕ್ಕೆ ಬಂದಿರುವುದು ದೇವಾಲಯದ ಅರ್ಚಕರು ಮತ್ತು ಸೇವಾ ಸಿಬ್ಬಂದಿ ವರ್ಗಕ್ಕೆ ಅಸಮಾಧಾನ ತಂದಿದೆ. ಹಾಗಾಗಿ ಯಾವುದೇ ಕಾರಣಕ್ಕೂ ಬೆಳ್ಳರ್ಪಾಡಿ ಗ್ರಾಮದವರನ್ನು ಹೊರತುಪಡಿಸಿ ಅನ್ಯ ಗ್ರಾಮದವರಿಗೆ ವ್ಯವಸ್ಥಾಪನಾ ಸಮಿತಿಯ ಸದಸ್ಯರಾಗಲು ಅವಕಾಶ ನೀಡಬಾರದು. ಗ್ರಾಮಸ್ಥರನ್ನೊಳಗೊಂಡ ಸಮಿತಿಯೇ ಆಡಳಿತ ನಡೆಸುವಂತಾಗಬೇಕು. ಇಲಾಖಾ ಅಧಿಕಾರಿಗಳು ಗ್ರಾಮಕ್ಕೆ ಆಗಮಿಸಿ ಸ್ಥಳೀಯರ ಅಭಿಪ್ರಾಯ ಸಂಗ್ರಹಿಸಿ ಸಮಿತಿ ರಚಿಸಬೇಕು ಎಂದು ಲಿಖಿತ ಮನವಿ ಸಮರ್ಪಿಸಲಾಯಿತು.
ಗ್ರಾಮದ ಪ್ರಮುಖರಾದ ವಿಜೇತಕುಮಾರ್​, ರಮೇಶ್​ ಸಾಲ್ಯಾನ್​, ಲಕ್ಷ್ಮೀನಾರಾಯಣ ಭಟ್​, ರೋಹಿತ್​ ಶೆಟ್ಟಿ, ಸತೀಶ್​ ಶೆಟ್ಟಿ, ರಾಧಾಕೃಷ್ಣ ಪ್ರಭು, ಸದಾಶಿವ ಸಾಲ್ಯಾನ್​, ಜಯಲಕ್ಷ್ಮೀ ಸೇರಿಗಾರ್​, ಪೂರ್ಣಿಮಾ ಶೆಟ್ಟಿ ಇತರರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net