ನಾಗಾರಾಧನೆಯಿಂದ ಗ್ರಾಮ ಸುಭಿಕ್ಷೆ

 ಚೆಲ್ಲೆಮಕ್ಕಿ ನಾಗಬನದ ಪುನರ್ ನಿರ್ವಾಣ ಜೀರ್ಣೋದ್ಧಾರ, ವರ್ಧಂತ್ಯುತ್ಸವ 17ನೇ ವರ್ಷೋತ್ಸವದ ಆಮಂತ್ರಣ ಪತ್ರಿಕೆಯನ್ನು ಡಾ.ವಿದ್ವಾನ್ ವಿಜಯ್ ಮಂಜರ್ ಬಿಡುಗಡೆಗೊಳಿಸಿದರು. ಭವ್ಯ ವಿಜಯ ಮಂಜರ್, ಗಣೇಶ್ ಪೂಜಾರಿ ಪಾಂಡೇಶ್ವರ ಇತರರಿದ್ದರು.
ಚೆಲ್ಲೆಮಕ್ಕಿ ನಾಗಬನದ ಪುನರ್ ನಿರ್ವಾಣ ಜೀರ್ಣೋದ್ಧಾರ, ವರ್ಧಂತ್ಯುತ್ಸವ 17ನೇ ವರ್ಷೋತ್ಸವದ ಆಮಂತ್ರಣ ಪತ್ರಿಕೆಯನ್ನು ಡಾ.ವಿದ್ವಾನ್ ವಿಜಯ್ ಮಂಜರ್ ಬಿಡುಗಡೆಗೊಳಿಸಿದರು. ಭವ್ಯ ವಿಜಯ ಮಂಜರ್, ಗಣೇಶ್ ಪೂಜಾರಿ ಪಾಂಡೇಶ್ವರ ಇತರರಿದ್ದರು.
Published on
ವಿಜಯವಾಣಿ ಸುದ್ದಿಜಾಲ ಕೋಟ
ನಾಗಬನಗಳು ಪರಿಸರ ಸಂರಕಣೆ ಜತೆಗೆ ಗ್ರಾಮದ ಸುಭಿಕ್ಷೆಯ ಪ್ರತೀಕವಾಗಿದೆ ಎಂದು ಪಾಂಡೇಶ್ವರ ಯೋಗ ಗುರುಕುಲದ ಮುಖ್ಯಸ್ಥ ಡಾ.ವಿದ್ವಾನ್ ವಿಜಯ್ ಮಂಜರ್ ಹೇಳಿದರು.
ಸಾಸ್ತಾನದ ಚೆಲ್ಲೆಮಕ್ಕಿ ನಾಗಬನದ ಪುನರ್ ನಿರ್ವಾಣ ಜೀರ್ಣೋದ್ಧಾರ, ವರ್ಧಂತ್ಯುತ್ಸವ 17ನೇ ವರ್ಷೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದರು.
ಹಿಂದೂ ಧಾರ್ಮಿಕ ಆಚರಣೆೆಗಳು ಧರ್ಮದ ತಳಹದಿ ಗಟ್ಟಿಗೊಳಿಸುತ್ತಿದ್ದು, ಇದಕ್ಕೆ ನಾಗಾರಾಧನೆ ಕೂಡಾ ಹೊರತಾಗಿಲ. ಪ್ರತಿಯೊಬ್ಬರಲ್ಲೂ ಧಾರ್ಮಿಕ ಜಾಗೃತಿ ಗಟ್ಟಿಗೊಳ್ಳಲಿ ಹಬ್ಬಹರಿದಿನಗಳು ಮನುಕುಲದ ಸಮೃದ್ಧಿ ಜೀವನಕ್ಕೆ ನಾಂದಿಯಾಗಲಿ ಎಂದರು.
ಅಂತಾರಾಷ್ಟ್ರೀಯಮಟ್ಟದಲ್ಲಿ ಅಂದ ಮಕ್ಕಳಿಗೆ ಶೈಕ್ಷಣಿಕ ಗುರು ಜತೆಗೆ ಯೋಗ ಗುರುಕುಲದ ವಿದ್ಯಾರ್ಥಿ ಯುಮಿ ಕೆನೇಕು ಸೇರಿದಂತೆ ಇತರರನ್ನು ಅಭಿನಂದಿಸಲಾಯಿತು.
ಪಾಂಡೇಶ್ವರ ಯೋಗ ಗುರುಕುಲದ ಭವ್ಯ ವಿಜಯ ಮಂಜರ್, ಸಾಸ್ತಾನ ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ಗಣೇಶ್ ಪೂಜಾರಿ ಪಾಂಡೇಶ್ವರ, ಐರೋಡಿ ಹಂಗಾರಕಟ್ಟೆ ವಾಬುಕಳ ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ಆನಂದ್ ಗಾಣಿಗ, ಚೆಲ್ಲೆಮಕ್ಕಿ ನಾಗಬನದ ಪ್ರಮುಖರಾದ ದಿನಕರ ವಿ.ರಾವ್, ಪರಮೇಶ್ವರ ಗಾಣಿಗ, ಸುರೇಶ್ ಗಾಣಿಗ, ಶೀನ ನಾಯಕ್, ವಿವೇಕ, ರಾವೇಂದ್ರ ಸೇರ್ವೆಗಾರ, ಕಮಿಟಿ ಪದಾಧಿಕಾರಿಗಳು, ಸರ್ವ ಸದಸ್ಯರು, ಧರ್ಮಸ್ಥಳ ಗ್ರಾವಾಭಿವೃದ್ಧಿ ಯೋಜನೆಯ ಮಹಿಳಾ ಸದಸ್ಯರು, ಯೋಗ ಗುರುಕುಲದ ವಿದೇಶಿ ಯೋಗ ಬಂಧುಗಳು ಉಪಸ್ಥಿತರಿದ್ದರು. ನಾಗಬನದ ಸಂಕ್ರಾತಿ ಉತ್ಸವದ ಅಂಗವಾಗಿ ಅಜಿತ್ ತುಂಗ ಧಾರ್ಮಿಕ ಕಾರ್ಯ ನೆರವೇರಿಸಿದರು. ನಾಗಬನದ ಪ್ರಮುಖರಾದ ಗಣೇಶ್ ಜಿ. ಕಾರ್ಯಕ್ರಮ ನಿರ್ವಹಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net