ಮೂಲಸೌಕರ್ಯ ಕ್ಷೇತ್ರದ ಪುರಸ್ಕಾರಕ್ಕೆ ಸಾಣೂರು ಗ್ರಾಪಂ ಆಯ್ಕೆಯಾಗಿದ್ದು, 25 ಲಕ್ಷ ರೂ. ಬಹುವಾನ ಪಡೆದಿದೆ. ಉಡುಪಿ ಜಿಪಂ ಯೋಜನಾಧಿಕಾರಿ ಉದಯ ಕುವಾರ್ ಶೆಟ್ಟಿ, ಜಿಪಂ ಮುಖ್ಯ ಲೆಕ್ಕಾಧಿಕಾರಿ ನಿಶ್ಚಿತ್ ಹೆಗ್ಡೆ, ಎಸ್‌ಡಿಜಿ ಯೋಜನಾಧಿಕಾರಿ ಅನಿಲ್ ಶೆಟ್ಟಿ, ಕಾಪು ತಾಪಂ ಇಒ ವಿಜಯ್, ಪಿಡಿಒ ವಿಶ್ವನಾಥ್ ಪ್ರಶಸ್ತಿ ಸ್ವೀಕರಿಸಿದರು. ಕೇಂದ್ರ ಪಂಚಾಯತ್‌ರಾಜ್ ರಾಜ್ಯ ಸಚಿವ ಪ್ರೊ.ಎಸ್.ಪಿ.ಸಿಂಗ್ ಬೇಲ್, ಅಧಿಕಾರಿಗಳು ಉಪಸ್ಥಿತರಿದ್ದರು.