ಮಹಾಭಾರತ ಅರಿತು ಬಾಳಿದರೆ ಜೀವನ ಸಾರ್ಥಕ

ಉಡುಪಿ ಬಾರ್ಕೂರಿನ ಭಂಡಾರಕೇರಿ ಮಠದಲ್ಲಿ ವಿದ್ಯೇಶ ತೀರ್ಥರು 18 ವಿದ್ವಾಂಸರಿಗೆ "ಜಯಶ್ರೀ ಕಂಬುಕಂಠ' ಪ್ರಶಸ್ತಿ ನೀಡಿ ಗೌರವಿಸಿದರು. ಕೆ.ಇ. ದೇವನಾಥನ್​, ಡಾ. ಬಿ.ಗೋಪಾಲ್​ ಆಚಾರ್ಯ, ನರಹರಿ ಆಚಾರ್ಯ, ವೆಂಕಟೇಶ್​ ಆಚಾರ್ಯ ಇತರರು ಇದ್ದರು.
ಉಡುಪಿ ಬಾರ್ಕೂರಿನ ಭಂಡಾರಕೇರಿ ಮಠದಲ್ಲಿ ವಿದ್ಯೇಶ ತೀರ್ಥರು 18 ವಿದ್ವಾಂಸರಿಗೆ "ಜಯಶ್ರೀ ಕಂಬುಕಂಠ' ಪ್ರಶಸ್ತಿ ನೀಡಿ ಗೌರವಿಸಿದರು. ಕೆ.ಇ. ದೇವನಾಥನ್​, ಡಾ. ಬಿ.ಗೋಪಾಲ್​ ಆಚಾರ್ಯ, ನರಹರಿ ಆಚಾರ್ಯ, ವೆಂಕಟೇಶ್​ ಆಚಾರ್ಯ ಇತರರು ಇದ್ದರು.
Published on

* ವಿದ್ಯೇಶ ತೀರ್ಥ ಶ್ರೀಪಾದರ ಆಶೀರ್ವಚನ

* ಭಂಡಾರಕೇರಿ ಮಠದಲ್ಲಿ ವಿದ್ಯಾಮಾನ್ಯರ ಪೀಠಾರೋಹಣ ಶತಮಾನೋತ್ಸವ

ಉಡುಪಿ: ವೇದಗಳಲ್ಲಿನ ಅನೇಕ ಸಂಗತಿಗಳನ್ನು ಮಹಾಭಾರತ ನಿರೂಪಿಸಿದೆ. ಪಾಂಡವರು ಮಾನವೀಯ ಮೌಲ್ಯಗಳ ಪ್ರತಿರೂಪವಾಗಿದ್ದಾರೆ. ಶ್ರೀಕೃಷ್ಣನು ಸರಳವಾಗಿ ಬದುಕಿ ಸವೋರ್ತ್ತಮ ಎನಿಸಿದ್ದಾನೆ. ಅಸುರೀ ಶಕ್ತಿಗಳ ವಿರುದ್ಧ ದೈವೀಶಕ್ತಿ ವಿಜಯ ಸಾಧಿಸಿದ್ದಕ್ಕೆ ಮಹಾಭಾರತ ಅತಿ ದೊಡ್ಡ ಉದಾಹರಣೆ. ಮಹಾಭಾರತದ ಸಂದೇಶ ಅರಿತು ಬಾಳಿದರೆ ಜೀವನ ಸಾರ್ಥಕವಾಗುತ್ತದೆ. ಆಚಾರ್ಯ ಮಧ್ವರು ಸಮರ್ಥವಾಗಿ ತಾತ್ಪರ್ಯ ನಿರ್ಣಯ ರಚಿಸಿ ನಮ್ಮೆನ್ನೆಲ್ಲ ಉದ್ಧರಿಸಿದ್ದಾರೆ ಎಂದು ಭಂಡಾರಕೇರಿ ಮಠದ ವಿದ್ಯೇಶ ತೀರ್ಥ ಶ್ರೀಪಾದರು ನುಡಿದರು.
ಉಡುಪಿ ಬಾರ್ಕೂರಿನ ಭಂಡಾರಕೇರಿ ಮಠದಲ್ಲಿ 47ನೇ ಚಾತುರ್ಮಾಸ್ಯ ಹಾಗೂ ವಿದ್ಯಾಮಾನ್ಯ ತೀರ್ಥ ಶ್ರೀಪಾದರ ಪೀಠಾರೋಹಣ ಶತಮಾನೋತ್ಸವದ ಸಂಭ್ರಮಾಚರಣೆಯಲ್ಲಿ ಆಶೀರ್ವಚನ ನೀಡಿದರು.

18 ವಿದ್ವಾಂಸರಿಗೆ 'ಜಯಶ್ರೀ ಕಂಬುಕಂಠ' ಪ್ರಶಸ್ತಿ 

ಮಠದಲ್ಲಿ 9 ದಿನಗಳ ಕಾಲ ಮಹಾಭಾರತ ತಾತ್ಪರ್ಯ ನಿರ್ಣಯ ಪಾರಾಯಣ ಮಾಡಿದ ನಾಡಿನ ಖ್ಯಾತ ವಿದ್ವಾಂಸರಾದ ಡಾ. ಬಿ. ಗೋಪಾಲ ಆಚಾರ್ಯ, ನರಹರಿ ಆಚಾರ್ಯ, ಗುರುಪವನ್​ ಆಚಾರ್ಯ, ಅಜಿತ್​ ಆಚಾರ್ಯ, ಗುರುರಾಜ ಆಚಾರ್ಯ ಕುಲಕರ್ಣಿ, ಸುಧೀಂದ್ರ ಆಚಾರ್ಯ, ಸಂಜೀವ್​ ಆಚಾರ್ಯ, ಗುರುರಾಜ ಆಚಾರ್ಯ ಕಲ್ಕೂರ, ಸುಶೀಲೇಂದ್ರ ಆಚಾರ್ಯ ಗೊಗ್ಗಿ, ಫಣಿರಾಜ ಆಚಾರ್ಯ, ಗುರುಮೂರ್ತಿ ಆಚಾರ್ಯ ಬೆಂಗಳೂರು, ಅನಂತ ಆಚಾರ್ಯ ದಿದ್ದಿಗಿ ಹೈದರಾಬಾದ್​,  ಬಿ.ಆರ್​. ವೆಂಕಟೇಶ್​ ಆಚಾರ್ಯ ಧಾರವಾಡ, ಭೀಮಸೇನ ಆಚಾರ್ಯ, ವೇದವ್ಯಾಸ ಆಚಾರ್ಯ ಜೋಷಿ ಮಂತ್ರಾಲಯ, ರಾಘವೇಂದ್ರ ಆಚಾರ್ಯ ಚೆನ್ನೈ, ನರಸಿಂಹ ಆಚಾರ್ಯ ಗೋಠೆ ಕೊಯಂಬತ್ತೂರು, ಅನಿಲ್​ ಆಚಾರ್ಯ ದೇಸಾಯಿ ರಾಯಚೂರು ಅವರಿಗೆ ಜಯಶ್ರೀ ಕಂಬುಕಂಠ ಪ್ರಶಸ್ತಿ ನೀಡಿ ಶ್ರೀಗಳು ಗೌರವಿಸಿದರು.
"

ವಿದ್ಯೇಶ ತೀರ್ಥರು ಭಂಡಾರಕೇರಿಯಂಥ ಕುಗ್ರಾಮದಲ್ಲಿ ಚಾತುರ್ಮಾಸ್ಯ ನಿರತರಾಗಿದ್ದರೂ ವಿಶೇಷ ಕಾರ್ಯಕ್ರಮ ರೂಪಿಸಿದ್ದಾರೆ. ಪಾರಾಯಣ, ಪ್ರವಚನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ದೊಡ್ಡ ಸಂದೇಶವನ್ನೇ ನೀಡುತ್ತಿದ್ದಾರೆ. ಬದುಕು ಮೌಲಿಕವಾಗಬೇಕಾದರೆ ಗುರುವಿನ ಅನುಸರಣೆ ಬಹಳ ಮುಖ್ಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net