ದೇಸೀಯ ಕಲೆಗಳ ರಕ್ಷಣೆ ನಮ್ಮ ಜವಾಬ್ದಾರಿ

ಗೋವಾದಲ್ಲಿ ಆಯೋಜಿಸಿದ್ದ ಕಾವಿ ಕಲೆಯ ಪ್ರದರ್ಶನವನ್ನು ಉದ್ಘಾಟಿಸಿದ ವಿದ್ಯಾಧೀಶ ಶ್ರೀಗಳು ಚಿತ್ರಗಳನ್ನು ವೀಕ್ಷಿಸಿದರು. ಡಾ. ಜನಾರ್ದನ್​ ರಾವ್​ ಹಾವಂಜೆ, ವಿಕ್ರಮ ಭಟ್​ ಇತರರಿದ್ದರು.
ಗೋವಾದಲ್ಲಿ ಆಯೋಜಿಸಿದ್ದ ಕಾವಿ ಕಲೆಯ ಪ್ರದರ್ಶನವನ್ನು ಉದ್ಘಾಟಿಸಿದ ವಿದ್ಯಾಧೀಶ ಶ್ರೀಗಳು ಚಿತ್ರಗಳನ್ನು ವೀಕ್ಷಿಸಿದರು. ಡಾ. ಜನಾರ್ದನ್​ ರಾವ್​ ಹಾವಂಜೆ, ವಿಕ್ರಮ ಭಟ್​ ಇತರರಿದ್ದರು.
Published on

* ಪರ್ತಗಾಳಿ ಮಠದ ವಿದ್ಯಾಧೀಶ ಶ್ರೀ ಆಶೀರ್ವಚನ

* ಗೋವಾದಲ್ಲಿ ಕಾವಿ ಆರ್ಟ್​ ಏಕವ್ಯಕ್ತಿ ಪ್ರದರ್ಶನ ಉದ್ಘಾಟನೆ

ಉಡುಪಿ: ಕಾವಿ ಕಲೆಯು ದೇಸೀಯ ಚಿತ್ರಕಲಾ ಪದ್ಧತಿಯಾಗಿದೆ. ರಾಜ್ಯದ ಕೊಂಕಣ, ಕರಾವಳಿಯ ತೀರ ಪ್ರದೇಶದಲ್ಲಿರುವ ದೇವಾಲಯಗಳಲ್ಲಿ ಈ ಕಲೆಯ ವೈಭವ ಕಾಣಸಿಗುತ್ತದೆ. ನಮ್ಮ ಮಠದ ಗೋಡೆಗಳ ಮೇಲೂ ಈ ಕಲೆಯನ್ನು ಚಿತ್ರಿಸಲಾಗಿದೆ. ದೇಸೀಯ ಕಲೆಗಳ ರಕ್ಷಣೆ ನಮ್ಮ ಜವಾಬ್ದಾರಿ ಎಂದು ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ್​ ನುಡಿದರು.
ಗೋವಾದ ಕಾಣ್​ಕೋಣ್​ನ ಶ್ರೀಮಠದಲ್ಲಿರುವ ಇಂದಿರಾ ಕಾಂತ ಭವನ ಗ್ಯಾಲರಿಯಲ್ಲಿ ಉಡುಪಿಯ ಖ್ಯಾತ ಕಾವಿ ಕಲಾವಿದ ಡಾ. ಜನಾರ್ದನ್​ ರಾವ್​ ಹಾವಂಜೆ ಅವರು ಆಯೋಜಿಸಿದ್ದ 'ರೇಖಾ ರೂಪಂ' ಕಾವಿ ಕಲೆಯ ಏಕವ್ಯಕ್ತಿ ಪ್ರದರ್ಶನ ಉದ್ಘಾಟಿಸಿ ಆಶೀರ್ವಚನ ನೀಡಿದರು.

ರಾಮಾಯಣ, ದಶಾವತಾರ ಚಿತ್ರ

ಇತ್ತೀಚಿಗೆ ನವೀಕರಣಗೊಂಡು ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆಗೊಂಡ ನಮ್ಮ ಪರ್ತಗಾಳಿ ಶ್ರೀ ಕ್ಷೇತ್ರದಲ್ಲಿಯೂ ಕಾವಿ ಕಲೆಯ ಮೂಲ ಪದ್ಧತಿಯಂತೆ ಚಿತ್ರಗಳನ್ನು ಮರು ನಿರ್ಮಿಸಲಾಗಿದೆ. ಡಾ. ಹಾವಂಜೆ ಅವರು ಸಂಪೂರ್ಣ ರಾಮಾಯಣದ ಮತ್ತು ದಶಾವತಾರದ ಚಿತ್ರಗಳನ್ನು ಇಲ್ಲಿ ನಿರ್ಮಿಸಿದ್ದಾರೆ. ಅವರ ಕರಕಮಲದಲ್ಲಿ ಕಾವಿ ಕಲೆಯ ಇನಷ್ಟು ಕಲಾಕೃತಿಗಳು ಮೂಡಿಬರಲಿ ಎಂದು ಹಾರೈಸಿದರು.
ಮಠದ ಪುರೋಹಿತ ವಿಕ್ರಮ ಭಟ್​ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.
ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಆಯೋಜಿಸಿರುವ ಕಲಾ ಪ್ರದರ್ಶನದಲ್ಲಿ 45 ಕೃತಿಗಳಿವೆ. ವಿವಿಧ ದೇವಿ, ಗಣಪತಿಯ ರೂಪಗಳು, ಶ್ರೀರಾಮ ದರ್ಶನಂ, ಕಾಮಧೇನು, ಅನ್ನಪೂರ್ಣ, ಶ್ರೀ ವಿಠ್ಠಲ ತ್ರಯರು, ದಶಾವತಾರ, ಮಂಡಲ ವಿನ್ಯಾಸ ಮೊದಲಾದ ಕಾವಿ ಚಿತ್ರಗಳು ಪ್ರದರ್ಶನದಲ್ಲಿದ್ದು, ಆ.18ರ ತನಕ ಇರಲಿದೆ.
"

ಕಾವಿ ಕಲೆಯು ಸುಮಾರು 13ನೇ ಶತಮಾನದಲ್ಲಿದ್ದ ದೇಸೀಯ ಕಲೆಯಾಗಿದೆ. ಅಳಿವಿನಂಚಿನಲ್ಲಿದ್ದ ಈ ಕಲೆಯನ್ನು ಉಳಿಸಲು 23 ವರ್ಷದಿಂದ ಸತತ ಸಂಶೋಧನೆ, ಅಧ್ಯಯನ, ಸಂರಕ್ಷಣಾ ಕಾರ್ಯ ಮಾಡುತ್ತಿದ್ದೇನೆ. ಕಲಾಕೃತಿಗಳ ರಚನೆಯನ್ನು ಇಂದಿನ ಪೀಳಿಗೆಗೂ ಕಲಿಸಿಕೊಡಲಾಗುತ್ತಿದೆ. ಪರ್ತಗಾಳಿ ಶ್ರೀಗಳು ತಮ್ಮ ಮಠದಲ್ಲಿ ಕಾವಿ ಚಿತ್ರಕಲೆಯ ರಚನೆಗೆ ನನಗೆ ಅವಕಾಶ ಕೊಟ್ಟಿರುವುದು ಇನ್ನಷ್ಟು ಕಲಿಯುವಂತಾಗಿದ್ದು ನನ್ನ ಭಾಗ್ಯವೇ ಸರಿ.

— ಡಾ. ಜನಾರ್ದನ್​ ರಾವ್​ ಹಾವಂಜೆ. ಖ್ಯಾತ ಕಾವಿ ಕಲಾವಿದ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net