ಶಂಕರನಾರಾಯಣ ದೇಗುಲದ ಮೇಲುಸ್ತುವಾರಿ ನಾಪತ್ತೆ

ನಾಪತ್ತೆಯಾಗಿರುವ ಉಡುಪಿ ತಾಲೂಕಿನ ಕೊಡವೂರು ಗ್ರಾಮದ ಶ್ರೀ ಶಂಕರನಾರಾಯಣ ದೇವಸ್ಥಾನದ ತಾತ್ಕಾಲಿಕ ಮೇಲುಸ್ತುವಾರಿ ವೆಂಕಟಕೃಷ್ಣ.
ನಾಪತ್ತೆಯಾಗಿರುವ ಉಡುಪಿ ತಾಲೂಕಿನ ಕೊಡವೂರು ಗ್ರಾಮದ ಶ್ರೀ ಶಂಕರನಾರಾಯಣ ದೇವಸ್ಥಾನದ ತಾತ್ಕಾಲಿಕ ಮೇಲುಸ್ತುವಾರಿ ವೆಂಕಟಕೃಷ್ಣ.
Published on

* ಕೆರೆಕಟ್ಟೆ ದೇವಸ್ಥಾನದಿಂದ ಹೊರಟಿದ್ದ ವೆಂಕಟಕೃಷ್ಣ

ಉಡುಪಿ: ತಾಲೂಕಿನ ಕೊಡವೂರು ಗ್ರಾಮದ ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ತಾತ್ಕಾಲಿಕ ಮೇಲುಸ್ತುವಾರಿ ಆಗಿದ್ದ ವೆಂಕಟಕೃಷ್ಣ (49) ಎಂಬವರು ನಿಗೂಢವಾಗಿ ನಾಪತ್ತೆಯಾಗಿದ್ದಾರೆ.
ಕಳೆದ ತಿಂಗಳು ದೇವಸ್ಥಾನದಲ್ಲಿ ನಡೆದಿದ್ದ ಮಹಾರುದ್ರಯಾಗದ ಸಂದರ್ಭದಲ್ಲಿ ಪೌರೋಹಿತ್ಯಕ್ಕೆ ಸಂಬಂಧಿಸಿದಂತೆ ಮೇಲ್ವಚಾರಣೆ ಹಾಗೂ ಉಸ್ತುವಾರಿಯಾಗಿ ಆಗಿ ವೆಂಕಟಕೃಷ್ಣ ಕೆಲಸ ನಿಭಾಯಿಸಿದ್ದರು.
ವ್ಯಕ್ತಿ ನಾಪತ್ತೆಯಾಗಿರುವ ಕುರಿತು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಪ್ರಕಾಶ್​ ಜಿ. ಅವರು ಮಲ್ಪೆ ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ. ಜೂ.12ರಂದು ಬೆಳಗ್ಗೆ 8 ಗಂಟೆಗೆ ವೆಂಕಟಕೃಷ್ಣ ಅವರು ಕೊಡವೂರು ಕೆರೆಕಟ್ಟೆ ಗಣಪತಿ ದೇವಸ್ಥಾನದಿಂದ ಹೊರಟಿದ್ದರು. ಬಳಿಕ ಅವರು ಶಂಕರನಾರಾಯಣ ದೇವಸ್ಥಾನಕ್ಕೂ ಬಾರದೆ, ತನ್ನ ಮನೆಗೂ ಮರುಳದೆ ನಾಪತ್ತೆಯಾಗಿದ್ದಾರೆ. 
ಬಂಧು-ಮಿತ್ರರು ಹಾಗೂ ಪರಿಚಿತರ ಮನೆಗಳಲ್ಲಿ ಹುಡುಕಾಟ ನಡೆಸಿದರೂ ಅವರು ಪತ್ತೆಯಾಗಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ. ಮಲ್ಪೆ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net