ಎಂಎಸ್ಎಂಇ ಬೆಂಗಳೂರು ಡಿಎಫ್ಒ ನಿರ್ದೇಶಕ ದೇವರಾಜ್ ಕೆ. ಮಾತನಾಡಿ, ದೇಶದ ಉತ್ಪಾದನಾ ಕ್ಷೇತ್ರದಲ್ಲಿ ಎಂಎಸ್ಎಂಇ ಕೊಡುಗೆ ಪಾಲು ಅಧಿಕವಾಗಿದೆ. ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಬಲವರ್ಧನೆಗೆ ಕೇಂದ್ರ ಸರ್ಕಾರ ಶ್ರಮಿಸುತ್ತಿದ್ದು, ಇತ್ತೀಚೆಗೆ ಜಾರಿಗೆ ಬಂದಿರುವ ನೂತನ ತಿದ್ದುಪಡಿ ಕಾಯ್ದೆ ಸಣ್ಣ ಉದ್ಯಮಿಗಳಿಗೆ ಹೆಚ್ಚಿನ ಬೆಂಬಲ ನೀಡಲಿದೆ. ಸಣ್ಣ ಉದ್ಯಮಿಗಳು ಆರಂಭಿಕ ಹಂತದ ಶ್ರಮ ವಹಿಸಿ ಜೆಮ್ ಪೋರ್ಟಲ್ನಲ್ಲಿ ನೋಂದಾಯಿಸಿಕೊಂಡರೆ, ಟೆಂಡರ್ ಲಭ್ಯತೆ ಹೆಚ್ಚಿ ಉದ್ಯಮ ಅಭಿವೃದ್ಧಿಗೆ ದೊಡ್ಡ ವೇದಿಕೆ ಸಿಗಲಿದೆ.