ಸಂಗೀತ, ಕಲೆಗಳಿಂದ ಅಪರಾಧಿ ಭಾವ ಕ್ಷೀಣ

ಉಡುಪಿಯಲ್ಲಿ ಆಯೋಜಿಸಿದ್ದ 'ವೀಣಾ ಶರಧಿ' ಕಾರ್ಯಕ್ರಮವನ್ನು ಡಾ. ಪಿ.ಕೆ. ರಾಜಗೋಪಾಲ್​ ಉದ್ಘಾಟಿಸಿದರು. ಪೂರ್ಣಿಮಾ, ಡಾ. ಎಂ.ವಿಶ್ವನಾಥ್​ ಪೈ, ದೇವಕಿ.ಕೆ. ಭಟ್​, ಪವನಾ ಬಿ. ಆಚಾರ್​ ಇದ್ದರು.
ಉಡುಪಿಯಲ್ಲಿ ಆಯೋಜಿಸಿದ್ದ 'ವೀಣಾ ಶರಧಿ' ಕಾರ್ಯಕ್ರಮವನ್ನು ಡಾ. ಪಿ.ಕೆ. ರಾಜಗೋಪಾಲ್​ ಉದ್ಘಾಟಿಸಿದರು. ಪೂರ್ಣಿಮಾ, ಡಾ. ಎಂ.ವಿಶ್ವನಾಥ್​ ಪೈ, ದೇವಕಿ.ಕೆ. ಭಟ್​, ಪವನಾ ಬಿ. ಆಚಾರ್​ ಇದ್ದರು.
Published on

* ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪೂರ್ಣಿಮಾ ಅಭಿಪ್ರಾಯ

 ಕಲಾಸ್ಪಂದನ ವೀಣಾ ವಿದ್ಯಾನಿಲಯದ 'ವೀಣಾ ಶರಧಿ' ಕಾರ್ಯಕ್ರಮ

ಉಡುಪಿ: ಸಂಗೀತ, ಕಲೆ, ಸಂಸ್ಕಾರ ಮನೆಯಿಂದಲೇ ಲಭಿಸುವಂತಾಗಬೇಕು. ಆಗಲೇ ಸಾಂಸ್ಕತಿಕ ಸೊಬಗು, ವೈಭವ ಕಾಣಲು ಸಾಧ್ಯ. ವಿವಿಧ ಕಲೆಗಳಲ್ಲಿ ಹೆಣ್ಣು ಮಕ್ಕಳೇ ಹೆಚ್ಚು ತೊಡಗುತ್ತಿದ್ದು, ಗಂಡು ಮಕ್ಕಳೂ ಸಹ ಆಗಮಿಸುವಂತಾಗಬೇಕು. ಆ ನಿಟ್ಟಿನಲ್ಲಿ ತಾಯಂದಿರು ಪ್ರೇರೇಪಿಸಬೇಕು. ಶಿಕ್ಷಣದೊಂದಿಗೇ ಅವರು ಯಾವುದಾದರೊಂದು ಕಲೆಯಲ್ಲಿ ತೊಡಗಿಕೊಳ್ಳಬೇಕು. ಅದರಿಂದ ಯುವ ಜನರಲ್ಲಿರುವ ಅಪರಾಧಿ ಮನೋಭಾವವೂ ಕ್ಷೀಣಿಸಿ, ಒಳ್ಳೆಯ ಮನಸ್ಥಿತಿ ನೆಲೆಸಲು ಸಾಧ್ಯ ಎಂದು ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಅಭಿಪ್ರಾಯಪಟ್ಟರು.
ಉಡುಪಿಯ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಡಾ. ಪಳ್ಳತ್ತಡ್ಕ ಕೇಶವ್​ ಭಟ್​ ಮೆಮೋರಿಯಲ್​ ಟ್ರಸ್ಟ್​ ಮಣಿಪಾಲದ ವತಿಯಿಂದ ಹಾಗೂ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದಲ್ಲಿ ಕಲಾಸ್ಪಂದನ ವೀಣಾ ವಿದ್ಯಾನಿಲಯದ 31ನೇ ವಾರ್ಷಿಕ ಮಹೋತ್ಸವ 'ವೀಣಾ ಶರಧಿ' ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಸಸ್ಯಶಾಸ್ತ್ರಜ್ಞ ಡಾ. ಪಿ.ಕೆ. ರಾಜಗೋಪಾಲ್​ ಶುಭ ಹಾರೈಸಿದರು. ಕಾಲೇಜಿನ ಉಪಪ್ರಾಂಶುಪಾಲ ಡಾ. ಎಂ.ವಿಶ್ವನಾಥ್​ ಪೈ ಮಾತನಾಡಿದರು. ಟ್ರಸ್ಟ್​ನ ದೇವಕಿ.ಕೆ. ಭಟ್​, ವಿದುಷಿ ಪವನಾ ಬಿ. ಆಚಾರ್​ ಉಪಸ್ಥಿತರಿದ್ದರು.
ವಿದುಷಿ ಸುರೇಖಾ ಭಟ್​ ಪ್ರಾರ್ಥಿಸಿದರು. ಡಾ. ಬಾಲಚಂದ್ರ ಆಚಾರ್​ ವಂದಿಸಿದರು. ಡಾ.ಸುಮಾ ಭಟ್​ ಕಾರ್ಯಕ್ರಮ ನಿರ್ವಹಿಸಿದರು.
ಮೋಹನ ವರ್ಣದೊಂದಿಗೆ 'ವೀಣಾ ಶರಧಿ' ಆರಂಭಗೊಂಡಿತು. ಒಂದೇ ವೇದಿಕೆಯಲ್ಲಿ 10ರಿಂದ 75 ವರ್ಷದೊಳಗಿನ 40 ವೀಣಾಭ್ಯಾಸಿಗಳು ಏಕಕಾಲದಲ್ಲಿ ಸುಮಾರು 2 ಗಂಟೆಗಳ ಕಾಲ ವೀಣಾ ವಾದನ ನಡೆಸಿದರು.
"

ದಿ.ಡಾ. ಪಳ್ಳತ್ತಡ್ಕ ಕೇಶವ್​ ಭಟ್​ ಅಂತಾರಾಷ್ಟ್ರೀಯ ಖ್ಯಾತಿಯ ಸಸ್ಯವಿಜ್ಞಾನಿ. ವೆನಿಜುವೆಲಾ ದೇಶದ ಯುನಿವರ್ಸಿಟಿಯಲ್ಲಿ ಉಪನ್ಯಾಸಕರಾಗಿದ್ದ ಅವರು, ಅಲ್ಲಿನ ಕಾಡಿನಲ್ಲಿರುವ ಸಸ್ಯಗಳ ಅಧ್ಯಯನ ಮಾಡಿ ಅವರದೇ ಆದ ಹೋಲಿಸ್ಟಿಕ್​ ವೈದ್ಯ ಪದ್ಧತಿಯಲ್ಲಿ ಅಲ್ಲಿನ ಅನೇಕ ಜನರಿಗಿದ್ದ ಕಾಯಿಲೆ ಗುಣಪಡಿಸಿದ್ದಾರೆ. ನಿವೃತ್ತಿ ಬಳಿಕ ಭಾರತಕ್ಕೆ ಮರಳಿದ ಅವರು ಸಾಮಾಜಿಕ ಸೇವೆಯಲ್ಲಿ ತೊಡಗಿದ್ದರು. ಅವರ ಸ್ಮರಣೆಯ ಈ ಕಾರ್ಯಕ್ರಮ ನಿಜಕ್ಕೂ ಅರ್ಥಪೂರ್ಣ. ವೀಣಾ ವಾದನವು ದೈವಿಕ ಕಲೆಯಾಗಿದೆ. ಇದರ ಮೂಲ ಭಾರತವೇ ಆಗಿದೆ.

— ಡಾ. ಪಿ.ಕೆ. ರಾಜಗೋಪಾಲ್​. ಹಿರಿಯ ಸಸ್ಯಶಾಸ್ತ್ರಜ್ಞ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net