ಕಲಿಯುಗದಲ್ಲಿ ಭಜನೆಯಿಂದ ಭಗವಂತ ಸಂತೃಪ್ತ

ಉಡುಪಿಯ ರಾಜಾಂಗಣದಲ್ಲಿ ಆಯೋಜಿಸಿದ್ದ 'ಭಜನಾಮೃತ' ಕಾರ್ಯಕ್ರಮವನ್ನು ವೇದವರ್ಧನ ಶ್ರೀ ಉದ್ಘಾಟಿಸಿದರು. ವಿಜಯ್​ ಶೆಟ್ಟಿ ಕೊಂಡಾಡಿ, ರಾಜೇಂದ್ರ ಕುಮಾರ್​ ಬಸ್ರೂರು, ಸುರೇಂದ್ರ ನಾಯ್ಕ್​, ಸಂತೋಷ್​ ಅಳಿಯೂರು, ಗಣೇಶ್​ ಕುಮಾರ್​ ಸಂಪಿಗೆನಗರ, ಶಿವಕುಮಾರ್​ ಅಂಬಲಪಾಡಿ, ರೂಪಾಶ್ರೀ, ಉಷಾ ಹೆಬ್ಬಾರ್​ ಇದ್ದರು.
ಉಡುಪಿಯ ರಾಜಾಂಗಣದಲ್ಲಿ ಆಯೋಜಿಸಿದ್ದ 'ಭಜನಾಮೃತ' ಕಾರ್ಯಕ್ರಮವನ್ನು ವೇದವರ್ಧನ ಶ್ರೀ ಉದ್ಘಾಟಿಸಿದರು. ವಿಜಯ್​ ಶೆಟ್ಟಿ ಕೊಂಡಾಡಿ, ರಾಜೇಂದ್ರ ಕುಮಾರ್​ ಬಸ್ರೂರು, ಸುರೇಂದ್ರ ನಾಯ್ಕ್​, ಸಂತೋಷ್​ ಅಳಿಯೂರು, ಗಣೇಶ್​ ಕುಮಾರ್​ ಸಂಪಿಗೆನಗರ, ಶಿವಕುಮಾರ್​ ಅಂಬಲಪಾಡಿ, ರೂಪಾಶ್ರೀ, ಉಷಾ ಹೆಬ್ಬಾರ್​ ಇದ್ದರು.
Published on

* ಶೀರೂರು ಮಠದ ವೇದವರ್ಧನ ಶ್ರೀ ಆಶೀರ್ವಚನ

* ರಾಜಾಂಗಣದಲ್ಲಿ 'ಭಜನಾಮೃತ' ಕಾರ್ಯಕ್ರಮ ಉದ್ಘಾಟನೆ

ಉಡುಪಿ: ಭಜನೆ ಎನ್ನುವುದು ಪುಣ್ಯಪ್ರದ ಕಾರ್ಯ. ಅದನ್ನು ದೇವರ ಸ್ಮರಣೆಯ ನೆಲೆಯಲ್ಲಿ ಮಾಡಬೇಕೇ ಹೊರತು ಸಮಯ ಕಳೆಯಲು ಅಲ್ಲ. ಅಧಿಕ ಮಾಸದಲ್ಲಿ ಮಾಡುವ ಭಜನೆಯಿಂದ ಅಧಿಕ ಫಲ ದೊರೆಯಲು ಸಾಧ್ಯ. ಕಲಿಯುಗದಲ್ಲಿ ಭಜನೆ ಮಾಡುವುದರಿಂದ ಭಗವಂತನೂ ಸಂತೃಪ್ತನಾಗುತ್ತಾನೆ ಎಂದು ಪರ್ಯಾಯ ಶೀರೂರು ಮಠದ ವೇದವರ್ಧನ ತೀರ್ಥ ಶ್ರೀಪಾದರು ನುಡಿದರು.
ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಶೀರೂರು ಮಠದ ಆಶ್ರಯದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್​ನ ಉಡುಪಿ ತಾಲೂಕು ಘಟಕದ ಸಹಯೋಗದಲ್ಲಿ ಅಧಿಕ ಮಾಸದ ನಿಮಿತ್ತ ಮಂಗಳವಾರ (ಜೂ.16) ಆಯೋಜಿಸಿದ್ದ 33 ಭಜನಾ ಕೃತಿಗಳ ಸಾಮೂಹಿಕ ಗೀತ ಗಾಯನ 'ಭಜನಾಮೃತ' ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು.
'ಭಜನಾಮೃತ' ಕಾರ್ಯಕ್ರಮ ಉದ್ಘಾಟಿಸಿ ವೇದವರ್ಧನ ತೀರ್ಥ ಶ್ರೀಪಾದರು  ಆಶೀರ್ವಚನ ನೀಡಿದರು.
ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್​ ಉಡುಪಿ ತಾಲೂಕು ಘಟಕದ ಅಧ್ಯಕ್ಷ ವಿಜಯ್​ ಶೆಟ್ಟಿ ಕೊಂಡಾಡಿ, ಭಜನಾ ಪರಿಷತ್​ ರಾಜ್ಯ ಉಪಾಧ್ಯಕ್ಷ ರಾಜೇಂದ್ರ ಕುಮಾರ್​ ಬಸ್ರೂರು, ಶ್ರೀ ಕ್ಷೇ.ಧ.ಗ್ರಾ. ಯೋಜನೆಯ ಉಡುಪಿ ತಾಲೂಕು ಯೋಜನಾಧಿಕಾರಿ ಸುರೇಂದ್ರ ನಾಯ್ಕ್​, ಭಜನಾ ಪರಿಷತ್​ ದ.ಕ. ಜಿಲ್ಲಾ ಸಮನ್ವಯಾಧಿಕಾರಿ ಸಂತೋಷ್​ ಪಿ. ಅಳಿಯೂರು, ವಲಯ ಸಂಯೋಜಕರಾದ ಗಣೇಶ್​ ಕುಮಾರ್​ ಸಂಪಿಗೆನಗರ, ರೂಪಾಶ್ರೀ ಹಾಗೂ ತಾಲೂಕಿನ ವಿವಿಧ ಭಜನಾ ಮಂಡಳಿಗಳ ನೂರಾರು ಸದಸ್ಯರು ಪಾಲ್ಗೊಂಡಿದ್ದರು.
ಪರಿಷತ್​ನ ಭಜನಾ ತರಬೇತುದಾರೆ ವಿದುಷಿ ಉಷಾ ಹೆಬ್ಬಾರ್​, ವಿದ್ವಾನ್​ ಮಧೂರು ಬಾಲಸುಬ್ರಹ್ಮಣ್ಯಂ ನೇತೃತ್ವದಲ್ಲಿ 33 ಭಜನಾ ಕೃತಿಗಳ ಸಾಮೂಹಿಕ ಗೀತಗಾಯನ ನೆರವೇರಿತು.
ಉಡುಪಿ ತಾಲೂಕು ಭಜನಾ ಪರಿಷತ್​ನ ಪ್ರಧಾನ ಕಾಯದರ್ಶಿ ಶಿವಕುಮಾರ್​ ಅಂಬಲಪಾಡಿ ಕಾರ್ಯಕ್ರಮ ನಿರ್ವಹಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net