ಉಡುಪಿಯ ರಾಜಾಂಗಣದಲ್ಲಿ 'ಜನ್ಮಾಷ್ಟಮಿ ಸಂಭ್ರಮ' ಸ್ಪರ್ಧಾ ಕಾರ್ಯಕ್ರಮಕ್ಕೆ ವೇದವರ್ಧನ ಶ್ರೀ ಚಾಲನೆ ನೀಡಿದರು. ಡಾ. ಉದಯಕುಮಾರ್ ಸರಳತ್ತಾಯ, ಸಂಗೀತ ವಿದ್ವಾನ್ ಮಧೂರು ಬಾಲಸುಬ್ರಹ್ಮಣ್ಯಂ, ವಿದುಷಿ ಮಾಧವಿ ಭಟ್, ರಘುಪತಿ ರಾವ್, ರಾವೇಂದ್ರ ಆಚಾರ್ಯ, ನಾರಾಯಣ ಸರಳಾಯ, ಲಕ್ಷ್ಮೀನಾರಾಯಣ ಉಪಾಧ್ಯಾಯ, ಶ್ರೇಷ್ಠಾ, ಹೇಮಾವತಿ ಇತರರಿದ್ದರು.
Published on:
Copied
Follow Us
* ಶೀರೂರು ವೇದವರ್ಧನ ಶ್ರೀ ಮಾಹಿತಿ
* ತಿಂಗಳ ಪರ್ಯಂತ ಕಾರ್ಯಕ್ರಮಕ್ಕೆ ಚಾಲನೆ
ಉಡುಪಿ: ಶ್ರೀಕೃಷ್ಣನ ಜನ್ಮ ವೃತ್ತಾಂತ ಅತ್ಯಂತ ವಿಶೇಷ ಹಾಗೂ ಕುತೂಹಲಕಾರಿಯಾಗಿದೆ. ಅಷ್ಟಮಿಯಂದು ಜನಿಸಿದ ಕೃಷ್ಣನ ಬಾಲ್ಯ ಲೀಲೆ ಅತ್ಯದ್ಭುತ. ಅದು ಎಂದಿಗೂ ನವನವೀನ. ಆತನ ಆರಾಧನೆಯ ಭಾಗವಾಗಿ ನಮ್ಮ ಪರ್ಯಾಯದಲ್ಲಿ ತಿಂಗಳ ಪರ್ಯಂತ "ಜನ್ಮಾಷ್ಟಮಿ ಸಂಭ್ರಮ' ಆಯೋಜಿಸಲಾಗಿದೆ. ವಿವಿಧ ಸ್ಪರ್ಧೆ ಆಯೋಜಿಸಲಾಗಿದ್ದು, ಸದ್ಭಕ್ತರು ಪಾಲ್ಗೊಳ್ಳಬೇಕು. ಕೃಷ್ಣಾನಂದ ಹೊಂದಲು ಈ ಕಾರ್ಯಕ್ರಮ ಸದವಕಾಶವಾಗಿದೆ ಎಂದು ಪರ್ಯಾಯ ಶೀರೂರು ಮಠದ ವೇದವರ್ಧನ ತೀರ್ಥ ಶ್ರೀಪಾದರು ನುಡಿದರು.
ಉಡುಪಿಯ ರಾಜಾಂಗಣದಲ್ಲಿ ಪರ್ಯಾಯ ಶೀರೂರು ಮಠದಿಂದ ಶನಿವಾರ (ಆ.1) ಆಯೋಜಿಸಿದ್ದ ಆ.1ರಿಂದ ಸೆ.6ರ ವರೆಗೆ ನಡೆಯಲಿರುವ 20ಕ್ಕೂ ಅಧಿಕ ಸ್ಪರ್ಧೆ ಒಳಗೊಂಡಿರುವ 'ಜನ್ಮಾಷ್ಟಮಿ ಸಂಭ್ರಮ' ಕಾರ್ಯಕ್ರಮಕ್ಕೆ ಚಾಲನೆ ನೀಡಿ ಆಶೀರ್ವಚನ ನೀಡಿದರು.
ಕಾರ್ಯಕ್ರಮದ ಮೊದಲ ದಿನ ಸಂಗೀತ ಸ್ಪರ್ಧೆ (ದಾಸರ ಪದಗಳು) ವಿವಿಧ ವಿಭಾಗಗಳಲ್ಲಿ ನಡೆಯಿತು.
ಮಠದ ದಿವಾನ ಡಾ. ಉದಯಕುಮಾರ್ ಸರಳತ್ತಾಯ, ಸಂಗೀತ ವಿದ್ವಾನ್ ಮಧೂರು ಬಾಲಸುಬ್ರಹ್ಮಣ್ಯಂ, ವಿದುಷಿ ಮಾಧವಿ ಭಟ್, ರಘುಪತಿ ರಾವ್, ರಾಘವೇಂದ್ರ ಆಚಾರ್ಯ, ನಾರಾಯಣ ಸರಳಾಯ, ಲಕ್ಷ್ಮೀನಾರಾಯಣ ಉಪಾಧ್ಯಾಯ, ಶ್ರೇಷ್ಠಾ, ಹೇಮಾವತಿ ಇತರರಿದ್ದರು.