ಬಡ ಕುಟುಂಬಕ್ಕೆ ‘ವಾತ್ಸಲ್ಯ’ ಮನೆ ಹಸ್ತಾಂತರ

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಮುದ್ರಾಡಿ ಉಪ್ಪಳದ ಬಡಕುಟುಂಬಕ್ಕೆ ನಿರ್ಮಿಸಿಕೊಟ್ಟ ಮನೆ ಹಸ್ತಾಂತರ ಕಾರ್ಯಕ್ರಮ ಸೋಮವಾರ ನಡೆಯಿತು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಮುದ್ರಾಡಿ ಉಪ್ಪಳದ ಬಡಕುಟುಂಬಕ್ಕೆ ನಿರ್ಮಿಸಿಕೊಟ್ಟ ಮನೆ ಹಸ್ತಾಂತರ ಕಾರ್ಯಕ್ರಮ ಸೋಮವಾರ ನಡೆಯಿತು.
Published on

ಹೆಬ್ರಿ:ಅನಾರೋಗ್ಯದಿಂದಬಳಲುತ್ತ ಸಂಕಷ್ಟದ ಬದುಕುಸಾಗಿಸುತ್ತಿರುವ ಮುದ್ರಾಡಿಉಪ್ಪಳದ ಅಣ್ಣಯ್ಯ ನಾಯ್ಕ ಮತ್ತುಯಶೋದಾ ನಾಯ್ಕ ದಂಪತಿಗೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆ ವತಿಯಿಂದ ನಿರ್ಮಿಸಿದವಾತ್ಸಲ್ಯಮನೆಯಪ್ರವೇಶ ಮತ್ತು ಹಸ್ತಾಂತರ ಕಾರ್ಯಕ್ರಮ ನಡೆಯಿತು.

ಧರ್ಮಸ್ಥಳಗ್ರಾಮಾಭಿವೃದ್ಧಿ ಯೋಜನೆ ವತಿಯಿಂದಮುದ್ರಾಡಿ ಗ್ರಾಪಂ,ಹೆಬ್ರಿಅಲಯನ್ಸ್ ಕ್ಲಬ್,ಲೇಡಿಅಲಯನ್ಸ್ ಕ್ಲಬ್ ಹೆಬ್ರಿ ಸಿಟಿ,ವಿವಿಧದಾನಿಗಳ ನೆರವು ಸಹಕಾರದೊಂದಿಗೆಮನೆ ನಿರ್ಮಿಸಿ ಹಸ್ತಾಂತರಿಸಲಾಯಿತು.

ಮುದ್ರಾಡಿಗ್ರಾಪಂ ಅಧ್ಯಕ್ಷೆ ವಸಂತಿ ಪೂಜಾರಿತುಳಸಿಕಟ್ಟೆಯಲ್ಲಿ ದೇವರಿಗೆದೀಪ ಬೆಳಗಿದರು.ಪಂಚಾಯಿತಿಉಪಾಧ್ಯಕ್ಷೆ ರಮ್ಯಕಾಂತಿ,ಸಂಘ-ಸಂಸ್ಥೆಗಳಪ್ರಮುಖರಾದ ಜ್ಯೋತಿ,ಮಮತಾಮತ್ತಿತರರು ಮನೆಯೊಳಗೆ ದೀಪಬೆಳಗಿದರು.

ಜನಜಾಗೃತಿವೇದಿಕೆ ಜಿಲ್ಲಾಧ್ಯಕ್ಷ ನೀರೆಕೃಷ್ಣ ಶೆಟ್ಟಿ ಉದ್ಘಾಟಿಸಿಮನೆಯನ್ನು ಹಸ್ತಾಂತರಿಸಿ,ಬಡವರಜೀವನ ಬೆಳಗಿಸುವ ಕೆಲಸ ಧರ್ಮಸ್ಥಳಗ್ರಾಮಾಭಿವೃದ್ಧಿ ಯೋಜನೆ ಮೂಲಕಆಗಿರುವುದು ಉತ್ತಮ ಕೆಲಸ ಎಂದರು.

ಮುದ್ದುಪೂಜಾರಿ ಸಹಿತ ಹಲವರನ್ನುಗೌರವಿಸಲಾಯಿತು.ಮನೆನಿರ್ಮಾಣದ ನೇತೃತ್ವ ವಹಿಸಿದಮೇಲ್ವಿಚಾರಕ ಉಮೇಶ್ ಬಿ.ಕೆ.,ಹೆಬ್ರಿತಾಲೂಕು ಯೋಜನಾಧಿಕಾರಿ ಲೀಲಾವತಿ,ಯೋಜನೆಯಹೆಬ್ರಿ ತಾಲೂಕು ಅಧ್ಯಕ್ಷ ವಾದಿರಾಜಶೆಟ್ಟಿ,ವಲಯಾಧ್ಯಕ್ಷರಾದಯೋಗೀಶ್,ಜ್ಯೋತಿ,ಹೆಬ್ರಿಅಲಯನ್ಸ್ ಕ್ಲಬ್ ರಾಮಚಂದ್ರ ಭಟ್,ಕಾರ್ಯದರ್ಶಿಬಾಲಚಂದ್ರ ಮುದ್ರಾಡಿ,ಲೇಡಿಅಲಯನ್ಸ್ ಕ್ಲಬ್ ಹೆಬ್ರಿ ಸಿಟಿಅಧ್ಯಕ್ಷೆ ಸುನೀತಾ ಹೆಬ್ಬಾರ್,ಪಿಡಿಒಸುಭಾಸ್ ಖಾರ್ವಿ,ಸದಸ್ಯರು,ಸೇವಾಪ್ರತಿನಿಧಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net