ಉಡುಪಿಯ ಕಲ್ಯಾಣಪುರದ ವೆಂಕಟರಮಣ ದೇವಸ್ಥಾನದ ಪರಿಸರದಲ್ಲಿ ಜಿಎಸ್ಬಿ ಸಮಾಜದವರಿಗೆ ವಿವಿಧ 'ಸ್ಪರ್ಧಾ ಕೂಟ' ಆಯೋಜಿಸಲಾಗಿತ್ತು.
Published on:
Copied
Follow Us
* ವಿಜೇತರಿಗೆ ಬಹುಮಾನ ವಿತರಣೆ
ಉಡುಪಿ: ತಾಲೂಕಿನ ಕಲ್ಯಾಣಪುರದ ಜಿಎಸ್ಬಿ ಸಭಾ ವತಿಯಿಂದ ಸಮಾಜ ಬಾಂಧವರಿಗಾಗಿ ಆಷಾಢ ಮಾಸದ ನಿಮಿತ್ತ ವೆಂಕಟರಮಣ ದೇವಸ್ಥಾನದ ಪರಿಸರದಲ್ಲಿ 'ಸ್ಪರ್ಧಾ ಕೂಟ' ಆಯೋಜಿಸಲಾಗಿತ್ತು. 300ಕ್ಕೂ ಅಧಿಕ ಸ್ಪರ್ಧಾಳುಗಳು ಭಾಗವಹಿಸಿದ್ದರು.
ಸಮಾರೋಪ ಸಮಾರಂಭದಲ್ಲಿ ದೇವಳದ ಆಡಳಿತ ಮೊಕ್ತೇಸರ ತೋನ್ಸೆ ರಾಮರಾಯ ಕಿಣಿ ಅಧ್ಯಕ್ಷತೆ ವಹಿಸಿದ್ದರು. ಕೆ.ಸುಧೀರ್ ಅವಧಾನಿ, ಲಕ್ಷ್ಮೀನಾರಾಯಣ ನಾಯಕ್, ಮೋಹನದಾಸ್ ಕಿಣಿ, ಜಿಎಸ್ಬಿ ಸಭಾ ಅಧ್ಯಕ್ಷ ಕೆ. ಸಂತೋಷ್ ಕಾಮತ್ ಉಪಸ್ಥಿತರಿದ್ದರು. ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ದೇವಳದ ಭದ್ರತೆಗಾಗಿ ಜಿಎಸ್ಬಿ ಸಭಾ ವತಿಯಿಂದ 4 ಲಕ್ಷ ರೂ. ವೆಚ್ಚದಲ್ಲಿ ಸಿ.ಸಿ. ಕೆಮರಾ ಅಳವಡಿಸಲಾಗಿದ್ದು, ಆಡಳಿತ ಮೊಕ್ತೇಸರರಿಗೆ ರಿಮೋಟ್ ಹಸ್ತಾಂತರಿಸಲಾಯಿತು.