ಮೆಕ್ಯಾನಿಕಲ್‌ಇಂಜಿನಿಯರಿಂಗ್ ವಿದ್ಯಾರ್ಥಿಗಳು ನವೀಕರಿಸಬಹುದಾದ ಇಂಧನ, ಸೌರ ತಂತ್ರಜ್ಞಾನ, ನೀರು ಶುದ್ಧೀಕರಣ ಮತ್ತು ಕೃಷಿ ಯಾಂತ್ರೀಕರಣ ಕ್ಷೇತ್ರಗಳಲ್ಲಿ ತಮ್ಮ ಪ್ರಾಜೆಕ್ಟ್‌ಗಳನ್ನು ಪ್ರದರ್ಶಿಸಿದರು. ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳು ಡೀಪ್ ಲರ್ನಿಂಗ್, ಬ್ಲಾಕ್‌ಚೈನ್, ಫೆಡರೇಟೆಡ್ ಲರ್ನಿಂಗ್ ಕಂಪ್ಯೂಟರ್ ವಿಷನ್ ಹಾಗೂ ಮೆಷಿನ್ ಲರ್ನಿಂಗ್ ಆಧಾರಿತ ಪ್ರಾಜೆಕ್ಟ್‌ಗಳನ್ನು ಪ್ರದರ್ಶಿಸಿದರು. ಆರ್ಟಿಫೀಸಿಯಲ್ ಇಂಟೆಲಿಜೆನ್ಸ್ ಮತ್ತು ಮೆಶಿನ್ ಲರ್ನಿಂಗ್ ವಿಭಾಗದ ವಿದ್ಯಾರ್ಥಿಗಳು ಕೃಷಿ, ಭದ್ರತೆ, ಸಾರಿಗೆ ಮತ್ತು ಪರಿಸರ ಮೇಲ್ವಿಚಾರಣೆ ಕ್ಷೇತ್ರಗಳ ಪ್ರಾಜೆಕ್ಟ್‌ಗಳನ್ನು ಪ್ರದರ್ಶಿಸಿದರು.