ಆಟ-ಪಾಠ ಒಳಗೊಂಡ ವಿಶಿಷ್ಟ ಕಲೆ ಯಕ್ಷಗಾನ

ಉಡುಪಿಯ ರಾಜಾಂಗಣದಲ್ಲಿ ಶ್ರೀ ಮಿತ್ರ ಯಕ್ಷಗಾನ ಮಂಡಳಿಯ ವಿವಿಧ ಸ್ಮಾರಕ ಪ್ರಶಸ್ತಿಯನ್ನು ವೇದವರ್ಧನ ಶ್ರೀ ಪ್ರದಾನ ಮಾಡಿದರು. ಡಾ. ತಲ್ಲೂರು ಶಿವರಾಮ್​ ಶೆಟ್ಟಿ, ಎಚ್​. ಪ್ರಕಾಶ್​ ಶಾನಭಾಗ್​, ಎಸ್​.ವಿ. ಉದಯ್​ ಕುಮಾರ್​ ಶೆಟ್ಟಿ, ದಿನಕರ್​ ಶೆಟ್ಟಿ ಹೆರ್ಗ, ಹರೀಶ್​ ಜೋಶಿ, ಎಸ್​. ಅನಂತ್​ ನಾಯ್ಕ್​, ವಿಜಯಲಕ್ಷ್ಮೀ ಕಾಮತ್​, ಶ್ರುತಿ ಶೆಣೈ, ಸದಾನಂದ್​ ಪ್ರಭು ಪೆರ್ಣಂಕಿಲ, ನಾರಾಯಣ ಬಿ.ಕೆ. ಇತರರಿದ್ದರು.
ಉಡುಪಿಯ ರಾಜಾಂಗಣದಲ್ಲಿ ಶ್ರೀ ಮಿತ್ರ ಯಕ್ಷಗಾನ ಮಂಡಳಿಯ ವಿವಿಧ ಸ್ಮಾರಕ ಪ್ರಶಸ್ತಿಯನ್ನು ವೇದವರ್ಧನ ಶ್ರೀ ಪ್ರದಾನ ಮಾಡಿದರು. ಡಾ. ತಲ್ಲೂರು ಶಿವರಾಮ್​ ಶೆಟ್ಟಿ, ಎಚ್​. ಪ್ರಕಾಶ್​ ಶಾನಭಾಗ್​, ಎಸ್​.ವಿ. ಉದಯ್​ ಕುಮಾರ್​ ಶೆಟ್ಟಿ, ದಿನಕರ್​ ಶೆಟ್ಟಿ ಹೆರ್ಗ, ಹರೀಶ್​ ಜೋಶಿ, ಎಸ್​. ಅನಂತ್​ ನಾಯ್ಕ್​, ವಿಜಯಲಕ್ಷ್ಮೀ ಕಾಮತ್​, ಶ್ರುತಿ ಶೆಣೈ, ಸದಾನಂದ್​ ಪ್ರಭು ಪೆರ್ಣಂಕಿಲ, ನಾರಾಯಣ ಬಿ.ಕೆ. ಇತರರಿದ್ದರು.
Published on

* ವೇದವರ್ಧನ ತೀರ್ಥ ಶ್ರೀಪಾದರ ಆಶೀರ್ವಚನ 

* ಶ್ರೀ ಮಿತ್ರ ಯಕ್ಷಗಾನ ಮಂಡಳಿಯ ಪ್ರಶಸ್ತಿ ಪ್ರದಾನ

ಉಡುಪಿ: ಯಕ್ಷಗಾನ ಮನರಂಜನೆಗಷ್ಟೇ ಸೀಮತವಾದ ಕಲೆಯಲ್ಲ. ಅದು ಆಟ-ಪಾಠ ಎರಡನ್ನೂ ಒಳಗೊಂಡ ವಿಶಿಷ್ಟ ಕಲೆ. ಯಕ್ಷಗಾನ ನೋಡುವುದರಿಂದ ಸಂತೋಷ ಸಿಗುವುದಲ್ಲದೆ ಪೌರಾಣಿಕ ಜ್ಞಾನವೂ ಲಭಿಸುತ್ತದೆ. ಹೀಗಾಗಿ ಇಂತಹ ಶ್ರೇಷ್ಠ ಕಲೆ ಹಾಗೂ ಕಲಾವಿದರ ಪೋಷಣೆ ನಿರಂತರ ನಡೆಯಬೇಕು. ಆ ನಿಟ್ಟಿನಲ್ಲಿ ಕಲಾವಿದರನ್ನು ಗುರುತಿಸಿ ಸನ್ಮಾನಿಸುವುದು ಸ್ತುತ್ಯಾರ್ಹ. ಅದರಲ್ಲೂ ಶ್ರೀಕೃಷ್ಣನ ಸನ್ನಿಧಿಯಲ್ಲಿ ಪ್ರಶಸ್ತಿ ಪ್ರದಾನ ಮಾಡುವುದು ಅತ್ಯಂತ ಪುಣ್ಯತಮ ಕಾರ್ಯ ಎಂದು ಪರ್ಯಾಯ ಶಿರೂರು ಮಠದ ವೇದವರ್ಧನ ತೀರ್ಥ ಶ್ರೀಪಾದರು ನುಡಿದರು.
ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಯಕ್ಷರಂಗ ಕಲಾಸಂಸ್ಥೆ ಶ್ರೀ ಮಿತ್ರ ಯಕ್ಷಗಾನ ಮಂಡಳಿ (ರಿ.) ಸರಳೇಬೆಟ್ಟು ಮಣಿಪಾಲ ವತಿಯಿಂದ ಹಾಗೂ ತಲ್ಲೂರು ಫ್ಯಾಮಿಲಿ ಟ್ರಸ್ಟ್​ (ರಿ.) ಉಡುಪಿ,  ರಸಿಕರತ್ನ ವಿಟ್ಲ ಜೋಶಿ ಪ್ರತಿಷ್ಠಾನ (ರಿ.) ಪರ್ಕಳ ಸಹಕಾರದಲ್ಲಿ ಮಂಗಳವಾರ  (ಜು.14) ಸಂಜೆ ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಮತ್ತು 44ನೇ ವಾರ್ಷಿಕೋತ್ಸವ ಸಂಭ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ಡಾ. ತಲ್ಲೂರು ಶಿವರಾಮ್​ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಎಸ್​.ವಿ. ಉದಯ್​ ಕುಮಾರ್​ ಶೆಟ್ಟಿ ಅಭಿನಂದನಾ ಭಾಷಣ ಮಾಡಿದರು.
ಹೆರ್ಗ ವ್ಯವಸಾಯ ಸಹಕಾರಿ ಸಂಘ ಪರ್ಕಳದ ಅಧ್ಯಕ್ಷ ದಿನಕರ್​ ಶೆಟ್ಟಿ ಹೆರ್ಗ, ವಿಟ್ಲ ಜೋಶಿ ಪ್ರತಿಷ್ಠಾನದ ಅಧ್ಯಕ್ಷ ಹರೀಶ್​ ಜೋಶಿ, ಸಿಂಡಿಕೇಟ್​ ಬ್ಯಾಂಕ್​ ಮಣಿಪಾಲ ಶಾಖೆಯ ನಿವೃತ್ತ ಎಜಿಎಂ ಎಸ್​.ಅನಂತ್​ ನಾಯ್ಕ್​ ಮಾತನಾಡಿದರು.
ಮಿತ್ರ ಯಕ್ಷಗಾನ ಮಂಡಳಿಯ ಸ್ಥಾಪಕಾಧ್ಯಕ್ಷ ಉಪೇಂದ್ರ ನಾಯಕ್​, ನಗರಸಭಾ ಮಾಜಿ ಸದಸ್ಯೆ ವಿಜಯಲಕ್ಷ್ಮೀ ಕಾಮತ್​, ಶ್ರುತಿ ಶೆಣೈ, ಸದಾನಂದ್​ ಪ್ರಭು ಪೆರ್ಣಂಕಿಲ, ನಾರಾಯಣ ಬಿ.ಕೆ. ಉಪಸ್ಥಿತರಿದ್ದರು.
ಮಾಯಾ ಕಾಮತ್​ ಪ್ರಾರ್ಥಿಸಿದರು. ಸ್ವಾಗತ ಸಮಿತಿಯ ಗೌರವಾಧ್ಯಕ್ಷ ಭುವನಪ್ರಸಾದ್​ ಹೆಗ್ಡೆ ಸ್ವಾಗತಿಸಿದರು. ಮಿತ್ರ ಯಕ್ಷಗಾನ ಮಂಡಳಿಯ ಅಧ್ಯಕ್ಷ ಎಚ್​. ಪ್ರಕಾಶ್​ ಶಾನಭಾಗ್​ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂಡಳಿಯ ಪ್ರಧಾನ ಕಾರ್ಯದರ್ಶಿ ಶೈಲೇಂದ್ರ ಶೆಟ್ಟಿ ವಂದಿಸಿದರು. ಬಾಲಕೃಷ್ಣ ಪ್ರಭು ಕಾರ್ಯಕ್ರಮ ನಿರೂಪಿಸಿದರು. 
ಸಭಾ ಕಾರ್ಯಕ್ರಮದ ಬಳಿಕ ಶ್ರೀ ಮಿತ್ರ ಯಕ್ಷಗಾನ ಮಂಡಳಿಯ ಬಾಲ ಕಲಾವಿದರಿಂದ 'ಕಂಸ ದಿಗ್ವಿಜಯ-ಕೃಷ್ಣ ಲೀಲೆ-ಕಂಸ ವಧೆ' ಯಕ್ಷಗಾನ ಪ್ರದರ್ಶನ ನಡೆಯಿತು.

12 ಸಾಧಕರಿಗೆ ವಿವಿಧ ಸ್ಮಾರಕ ಪುರಸ್ಕಾರ ಪ್ರದಾನ

ಬೈಕಾಡಿ ಕೃಷ್ಣಯ್ಯ ಸ್ಮಾರಕ 'ಯಕ್ಷಶ್ರೀ' ಪ್ರಶಸ್ತಿ-ಖ್ಯಾತ ತಬಲಾ ವಿದ್ವಾಂಸ ಮಾಧವ ಆಚಾರ್ಯ ಉಡುಪಿ. ಭಾಗವತ ಸಂಸ್ಥಾಪಕ ಅಲೆವೂರು ಮಾಧವ್​ ಶೆಣೈ ಸ್ಮಾರಕ 'ಯಕ್ಷಮಿತ್ರಶ್ರೀ' ಪ್ರಶಸ್ತಿ- ಹವ್ಯಾಸಿ ಯಕ್ಷಗಾನ ಕಲಾವಿದ ಗಣೇಶ್​ ಶೆಣೈ ಸಾಲಿಗ್ರಾಮ. ಖ್ಯಾತ ಭಾಗವತ ಗೋರ್ಪಾಡಿ ವಿಠ್ಠಲ್​ ಪಾಟೀಲ್​ ಸ್ಮಾರಕ 'ಯಕ್ಷಕಲಾಶ್ರೀ' ಪ್ರಶಸ್ತಿ- ಯಕ್ಷಗಾನ ಹವ್ಯಾಸಿ ಕಲಾವಿದ ಕೃಷ್ಣಯ್ಯ ದೇವಾಡಿಗ ಉಪ್ಪುಂದ. ಕಪ್ಪೆಟ್ಟು ಮೇಲ್ಮನೆ ಕೆ. ನಾರಾಯಣ ಶೆಟ್ಟಿ ಸ್ಮಾರಕ 'ಮಿತ್ರಕಲಾಶ್ರೀ' ಪ್ರಶಸ್ತಿ- ಹವ್ಯಾಸಿ ಯಕ್ಷಗಾನ ಕಲಾವಿದ ವೆಂಕಟೇಶ್ವರ್​ ಹಾರಾಡಿ. ಪರ್ಕಳ ಮಂಜುನಾಥ್​ ಶೆಣೈ ಸ್ಮಾರಕ 'ಮಿತ್ರಶ್ರೀ' ಪ್ರಶಸ್ತಿ- ಕೊಳಲು ವಾದಕ ಸುಂದರ್​ ಪೂಜಾರಿ ಉಡುಪಿ. ಹೂರ್ಲಾಳಿ ನಾಗೇಶ್​ ವಾಮನ್​ ಶಾನುಭಾಗ್​ ಸ್ಮಾರಕ 'ಕಲಾಶ್ರೀ' ಪ್ರಶಸ್ತಿ- ಸಾಮಾಜಿಕ ಕಾರ್ಯಕರ್ತೆ ದೇವಕಿ ಕೋಟ್ಯಾನ್​ ಸರಳೇಬೆಟ್ಟು. ಸರಳೇಬೆಟ್ಟು ಪಾಂಡುರಂಗ ಸಾಮಂತ್​ ಸ್ಮಾರಕ 'ಮಿತ್ರಯಕ್ಷಶ್ರೀ' ಪ್ರಶಸ್ತಿ- ಯಕ್ಷಗಾನ ಸಮಾಜ ಸೇವೆಯ ವೈ. ಕುಮಾರಸ್ವಾಮಿ ಕಬ್ಬಿನಾಲೆ. ಜಡ್ಡುಮನೆ ರಂಗಪ್ಪ ಪ್ರಭು ಪೆರ್ಣಂಕಿಲ ಸ್ಮಾರಕ 'ಶ್ರೀಮಿತ್ರ' ಪ್ರಶಸ್ತಿ- ಪನುವಾರ್​ ಕೊಂಕಣಿ ಮಾಸ ಪತ್ರಿಕೆಯ ಸಂಪಾದಕ ಎಚ್​. ಜ್ಞಾನದೇವ ಮಲ್ಯ ಕುಂಜುಬೆಟ್ಟು. ತೋನ್ಸೆ ಗೀತಾ ಮಂಜುನಾಥ್​ ಪೈ ಸ್ಮಾರಕ 'ಶ್ರೀಮಿತ್ರ ವೈಭವ' ಪ್ರಶಸ್ತಿ- ಸಮಾಜ ಸೇವಕಿ ನೀತಾ ಪ್ರಭು ಅಂಬಲಪಾಡಿ. ಎಂ.ವಿ. ಪಡಿಯಾರ್​ ಸ್ಮಾರಕ 'ಕಲಾಸಾಧಕ' ಪ್ರಶಸ್ತಿ- ರಂಗ ಕಲಾವಿದೆ ಶಿಲ್ಪಾ ಜೋಶಿ ಪರ್ಕಳ. ಮಾಯಾ ಕಾಮತ್​ ಈಶ್ವರ ನಗರ ಮಣಿಪಾಲ (ಮೋಹನ ಭಟ್​ ಮೆಮೋರಿಯಲ್​) 'ಯಕ್ಷವೈಭವ' ಪ್ರಶಸ್ತಿ- ಭಜನೆ, ಸಂಗೀತ, ರಂಗ ಕಲಾವಿದೆ ಯುಕ್ತಾವತಿ ಆರ್​. ಭಂಡಾರಿ ಬ್ರಹ್ಮಗಿರಿ. ಯಕ್ಷಗಾನ ಕಲಾಪೋಷಕ ಮುಲ್ಕಿ ಸದಾಶಿವ್​ ಕಾಮತ್​ 'ಯಕ್ಷಕಲಾ' ಪ್ರಶಸ್ತಿ- ಹವ್ಯಾಸಿ ಯಕ್ಷಗಾನ ಕಲಾವಿದ ಉಡುಪಿಯ ಐರೋಡಿ ಅರುಣ್​.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net