ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಜ್ಜಯಿನಿ ರಾಜಮನೆತನದ ನವರತ್ನಗಳಲ್ಲಿ ಒಬ್ಬರಾಗಿದ್ದ ಖಗೋಳಶಾಸ್ತ್ರಜ್ಞ ಹಾಗೂ ಜ್ಯೋತಿಷದ ಶ್ರೇಷ್ಠ ಆಚಾರ್ಯ ವರಾಹಮಿಹಿರರ ಜೀವನ ಚರಿತ್ರೆ ಆಧಾರಿತ ಕಥಕ್ಕಳಿ ಪ್ರದರ್ಶನ ಮಧ್ಯಾಹ್ನ 3 ಗಂಟೆಗೆ ಪ್ರಾರಂಭವಾಗಿ ಸಂಜೆ 6 ಗಂಟೆಗೆ ಮುಕ್ತಾಯಗೊಳ್ಳಲಿದೆ. ಕೇರಳದ ಪ್ರಸಿದ್ಧ ಕಥಕ್ಕಳಿ ಕಲಾವಿದರು ಮೇರುಕೃತಿಯನ್ನು ವೇದಿಕೆಯಲ್ಲಿ ಪ್ರಸ್ತುತಪಡಿಸಲಿದ್ದಾರೆ. ಕಥಕ್ಕಳಿ ಚಿತ್ರಕಥೆಯನ್ನು ವಾಮನನ್ ನಂಬೂದರಿಬರೆದಿದ್ದು, ಕಲಾಲಯಂ ನಿರ್ದೇಶಕ ಕಲಾಮಂಡಲಂ ಕೇಶವನ್ ನಂಬೂದರಿ ನಿರ್ದೇಶಿಸಿದ್ದಾರೆ. ಈ ಸಂದರ್ಭದಲ್ಲಿ ಕೇರಳದ ಗಣ್ಯ ಕಲಾವಿದರು ಮತ್ತು ತಂಡದ ಸದಸ್ಯರನ್ನು ಗೌರವಿಸಲಾಗುವುದು ಎಂದು ತಿಳಿಸಿದ್ದಾರೆ.