ಸಮಾಜಮುಖಿ ಕಾರ್ಯದಲ್ಲಿ ತೊಡಗಲಿ ಯುವಜನತೆ

ಉಡುಪಿಯಲ್ಲಿ ನಡೆದ ವನಸುಮ ಜೆಸಿ ಸಪ್ತಾಹದ ಸಮಾರೋಪದಲ್ಲಿ ಎಂ.ಎಸ್​. ಭಟ್​ ಹಾಗೂ ರೋಹಿತ್​ ಬೈಕಾಡಿ ಅವರಿಗೆ 'ಮನಸುಮ ರಂಗ' ಪ್ರಶಸ್ತಿ ಪ್ರದಾನ ಮಾಡಲಾಯಿತು. ಕೆ.ರಘುಪತಿ ಭಟ್​, ಪೂರ್ಣಿಮಾ, ಪಲ್ಲವಿ ಕೊಡಗು, ಬಾಸುಮ ಕೊಡಗು, ಡಾ. ವಿಜಯೇಂದ್ರ ವಸಂತ್​, ಜಯಕುಮಾರ್​ ಇತರರಿದ್ದರು.
ಉಡುಪಿಯಲ್ಲಿ ನಡೆದ ವನಸುಮ ಜೆಸಿ ಸಪ್ತಾಹದ ಸಮಾರೋಪದಲ್ಲಿ ಎಂ.ಎಸ್​. ಭಟ್​ ಹಾಗೂ ರೋಹಿತ್​ ಬೈಕಾಡಿ ಅವರಿಗೆ 'ಮನಸುಮ ರಂಗ' ಪ್ರಶಸ್ತಿ ಪ್ರದಾನ ಮಾಡಲಾಯಿತು. ಕೆ.ರಘುಪತಿ ಭಟ್​, ಪೂರ್ಣಿಮಾ, ಪಲ್ಲವಿ ಕೊಡಗು, ಬಾಸುಮ ಕೊಡಗು, ಡಾ. ವಿಜಯೇಂದ್ರ ವಸಂತ್​, ಜಯಕುಮಾರ್​ ಇತರರಿದ್ದರು.
Published on

ಉಡುಪಿ ಮಾಜಿ ಶಾಸಕ ಕೆ.ರಘುಪತಿ ಭಟ್​ ಆಶಯ

* ವನಸುಮ ಜೆಸಿ ಸಪ್ತಾಹದ ಸಮಾರೋಪ

ಉಡುಪಿ: ಸಮಾಜಮುಖಿ ಚಟುವಟಿಕೆ, ಸಮಾಜಸೇವೆಯಂತಹ ಕಾರ್ಯಗಳಲ್ಲಿ ಯುವಸಮುದಾಯ ತೊಡಗಿಕೊಳ್ಳುವ ಅಗತ್ಯತೆ ಇಂದು ಹೆಚ್ಚಿದೆ. ಜೆಸಿಯಂತಹ ಸಂಸ್ಥೆಗಳ ಮೂಲಕ ಯುವಜನತೆ ಸಮಾಜಮುಖಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಸಾಧ್ಯವಾಗಿದೆ ಎಂದು ಮಾಜಿ ಶಾಸಕ ರಘುಪತಿ ಭಟ್​ ಅನಿಸಿಕೆ ವ್ಯಕ್ತಪಡಿಸಿದರು.
ಉಡುಪಿಯ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ಜೆಸಿಐ ಉಡುಪಿ ಸಿಟಿ, ವನಸುಮ ವೇದಿಕೆ ಮತ್ತು ವನಸುಮ ಟ್ರಸ್ಟ್​ ಸಹಯೋಗದಲ್ಲಿ ವಾರಗಳ ಕಾಲ ನಡೆದ ವನಸುಮ ಜೆಸಿ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಮನಸುಮ ರಂಗ ಪ್ರಶಸ್ತಿ ಪ್ರದಾನ

ಖ್ಯಾತ ರಂಗನಟ ಎಂ.ಎಸ್​. ಭಟ್​ ಅವರಿಗೆ 'ವನಸುಮ ರಂಗ ಸಮ್ಮಾನ್​' ಮತ್ತು ಯುವ ರಂಗ ನಿರ್ದೇಶಕ ರೋಹಿತ್​ ಬೈಕಾಡಿ ಅವರಿಗೆ 'ರಂಗ ಪುರಸ್ಕಾರ' ಪ್ರಶಸ್ತಿಯನ್ನು ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಪ್ರದಾನ ಮಾಡಿದರು.
ಡೆಂಟಾ ಕೇರ್​ನ ಡಾ. ವಿಜಯೇಂದ್ರ ವಸಂತ್​, ಎಂಪೈರ್​ ಎಂಟರ್​ಟೈನ್ಮೆಂಟ್​ನ ಜಯಕುಮಾರ್​ ಪೂಜಾರಿ ಶುಭ ಹಾರೈಸಿದರು. ಜೆಸಿಐ ಅಧ್ಯಕ್ಷೆ ಪಲ್ಲವಿ ಕೊಡಗು ಅಧ್ಯಕ್ಷತೆ ವಹಿಸಿದ್ದರು. 
ಜೆಸಿಐ ಉಡುಪಿ ಸಿಟಿಯ ಪೂರ್ವ ಅಧ್ಯಕ್ಷರು ಹಾಗೂ ವನಸುಮ ವೇದಿಕೆಯ ಹಿರಿಯ ಸದಸ್ಯರು ಉಪಸ್ಥಿತರಿದ್ದರು. ಸಪ್ತಾಹದ ನಿರ್ದೇಶಕ ಮತ್ತು ವನಸುಮ ಟ್ರಸ್ಟ್​ನ ಅಧ್ಯಕ್ಷ, ಹಿರಿಯ ಕಲಾವಿದ ಬಾಸುಮ ಕೊಡಗು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.

ಅನ್ಯೋನ್ಯ ದಂಪತಿ ಸ್ಪರ್ಧೆ

ಸಪ್ತಾಹದ ನಿಮಿತ್ತ ಆಯೋಜಿಸಿದ್ದ ಅನ್ಯೋನ್ಯ ದಂಪತಿ ಸ್ಪರ್ಧೆಯಲ್ಲಿ ಶೃುತಿ-ಪ್ರದೀಪ್​ ದಂಪತಿ ಪ್ರಥಮ ಸ್ಥಾನದೊಂದಿಗೆ 30 ಸಾವಿರ ರೂ. ಬಹುಮಾನ ಗಳಿಸಿದರು. ಜ್ಞಾನಶೀಲಾ-ಶ್ರೀನಿವಾಸ ದಂಪತಿ 20 ಸಾವಿರ ರೂ.ನೊಂದಿಗೆ ದ್ವಿತೀಯ, ಅನುಪಲ್ಲವಿ-ರೋಹಿತ್​ ದಂಪತಿ 10 ಸಾವಿರ ರೂ.ನೊಂದಿಗೆ ತೃತೀಯ ಬಹುಮಾನ ಗಳಿಸಿದರು. ಸ್ಪರ್ಧೆಯಲ್ಲಿ 30 ದಂಪತಿ ಭಾಗವಹಿಸಿದ್ದರು. ತೀರ್ಪುಗಾರರಾಗಿ ಕಾವ್ಯವಾಣಿ ಕೊಡಗು ಹಾಗೂ ಜಯರಾಮ್​ ಸಹಕರಿಸಿದರು. ಸಪ್ತಾಹದಲ್ಲಿ ನಡೆದಿದ್ದ ನಾಟಕ, ಗೊಂಬೆ ಯಕ್ಷಗಾನ, ಜಾದೂ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜನಮನ ರಂಜಿಸಿದವು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net