ಸಾಂಸ್ಕೃತಿಕವಾಗಿಯೂ ವಡ್ಡರ್ಸೆ ಕ್ಷೇತ್ರ ಮುಂಚೂಣಿ

ವಡ್ಡರ್ಸೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೀಪೋತ್ಸವದ ಪ್ರಯುಕ್ತ ನಡೆದ ಚಿಣ್ಣರ ಒಡ್ಡೋಲಗ ಕಾರ್ಯಕ್ರಮದಲ್ಲಿ ಕಲಾವಿದ ನಾಗಪ್ಪ ಹೊಳ್ಮಗೆ ಅವರನ್ನು ಸನ್ಮಾನಿಸಲಾಯಿತು.
ವಡ್ಡರ್ಸೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೀಪೋತ್ಸವದ ಪ್ರಯುಕ್ತ ನಡೆದ ಚಿಣ್ಣರ ಒಡ್ಡೋಲಗ ಕಾರ್ಯಕ್ರಮದಲ್ಲಿ ಕಲಾವಿದ ನಾಗಪ್ಪ ಹೊಳ್ಮಗೆ ಅವರನ್ನು ಸನ್ಮಾನಿಸಲಾಯಿತು.
Published on
ವಿಜಯವಾಣಿ ಸುದ್ದಿಜಾಲ ಕೋಟ
ಮಹಾಲಿಂಗೇಶ್ವರ ದೇವಸ್ಥಾನವು ಕೇವಲ ಧಾರ್ಮಿಕ ಶ್ರದ್ದಾ ಕೇಂದ್ರವಾಗಿರದೆ ಸಾಂಸ್ಕೃತಿಕ ಚಟುವಟಿಕೆ ಸಹಿತ ಸರ್ವ ರಂಗದಲ್ಲೂ ಕೇಂದ್ರ ಬಿಂದುವಾಗಿದೆ. ಇಲ್ಲಿನ ಕಲಾರಂಗದ ಕಲಾವಿದರು ತಾವು ಬೆಳೆಯುವುದರ ಜತೆಗೆ ಇತರರನ್ನೂ ಬೆಳೆಸುತ್ತಿದ್ದಾರೆ ಎಂದು ಲೇಖಕ ಡಾ.ಪ್ರದೀಪ್ ವಿ.ಸಾಮಗ ಅಭಿಪ್ರಾಯಪಟ್ಟರು.
ವಡ್ಡರ್ಸೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೀಪೋತ್ಸವ ಪ್ರಯುಕ್ತ ಕಲಾರಂಗದ ಬಾಲ ಕಲಾವಿದರಿಂದ ನಡೆದ ಎಂಟನೇ ವರ್ಷದ ಚಿಣ್ಣರ ಒಡ್ಡೋಲಗ ಯಕ್ಷಗಾನ ಉದ್ಘಾಟಿಸಿ ಮಾತನಾಡಿದರು.
ಯಕ್ಷಗುರು ದಶಾವತಾರಿ ಪ್ರಸಾದ್ ಕುವಾರ್ ಮೊಗೆಬೆಟ್ಟು ರಚಿಸಿದ ಕೃತಿ ಪಂಚತಂತ್ರ ಆಧಾರಿತ ‘ಚಂದ್ರ ಚಮೂರ’ವನ್ನು ಕಲಾವಿದ ನಾಗರಾಜ ಆಚಾರ್ ನೀರ್ಕೋಡ್ಲು ಬಿಡುಗಡೆಗೊಳಿಸಿದರು. ಹಾಸ್ಯ ಕಲಾವಿದ ನಾಗಪ್ಪ ಹೊಳ್ಮಗೆ ಹಾಗೂ ಪ್ರಸಂಗಕರ್ತ ನಾಗರಾಜ ಆಚಾರ್ ಅವರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಾದ ಸಜನಿ, ಸುಶಾಂತ್, ಸುಪ್ರೀತ್ ಅವರಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು.
ಕಲಾರಂಗದ ಅಧ್ಯಕ್ಷ ಗುರುಪ್ರಸಾದ ಐತಾಳ್ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ದೇವದಾಸ್ ರಾವ್ ಕೂಡ್ಲಿ, ಮಂಜು ಬಿಲ್ಲವ, ವೈಕುಂಠ ಶೆಟ್ಟಿ, ಸುರೇಶ್ ಆಚಾರ್, ತೀರ್ಥನ್ ಇದ್ದರು. ಪ್ರದ್ಮನಾಭ ಆಚಾರ್ ಸ್ವಾಗತಿಸಿದರು. ನಾಗರಾಜ ಆಚಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಪಿಡಿಒ ಸತೀಶ್ ವಡ್ಡರ್ಸೆ ಸನ್ಮಾನ ಪತ್ರ ವಾಚಿಸಿದರು. ವ್ನಿೇಶ್ ಶೆಟ್ಟಿ ವಂದಿಸಿದರು. ಸತೀಶ್ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ಬಾಲಕಲಾವಿದರಿಂದ ಚಂದ್ರಚಮೂರ ಹಾಗೂ ಪೌರಾಣಿಕ ಚಿತ್ರಸೇನ ಕಾಳಗ ಪ್ರಸಂಗದ ಯಕ್ಷಗಾನ ಪ್ರದರ್ಶನ ನಡೆಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net