ಉಡುಪಿ ತಾಲೂಕಿನ ಶ್ರೀ ಕ್ಷೇತ್ರ ಶಂಕರಪುರದ ಶ್ರೀಸಾಯಿ ಮುಖ್ಯಪ್ರಾಣ ದೇವಸ್ಥಾನದಲ್ಲಿ ಆಯೋಜಿಸಿದ್ದ 'ಉಸಿರಿಗಾಗಿ ಹಸಿರು ಅಭಿಯಾನ'ಕ್ಕೆ ಶ್ರೀಸಾಯಿ ಈಶ್ವರ ಗುರೂಜಿ ಚಾಲನೆ ನೀಡಿದರು. ಡಾ. ಗಣೇಶಪ್ರಸಾದ್ ಜಿ. ನಾಯಕ್, ಗೀತಾಂಜಲಿ ಸುವರ್ಣ, ವೀಣಾ ಶೆಟ್ಟಿ, ರಾಮಪ್ಪ ಪೂಜಾರಿ, ರಾಘವೇಂದ್ರ ಪ್ರಭು ಕರ್ವಾಲು ಇದ್ದರು.
Published on:
Copied
Follow Us
* ಶ್ರೀ ಸಾಯಿ ಈಶ್ವರ ಗುರೂಜಿ ಅನಿಸಿಕೆ
* 'ಉಸಿರಿಗಾಗಿ ಹಸಿರು' ಅಭಿಯಾನಕ್ಕೆ ಚಾಲನೆ
ಉಡುಪಿ: ಪರಿಸರ ಇಂದು ಹಲವಾರು ವೈರುಧ್ಯಗಳಿಂದ ಕೂಡಿದೆ. ಮಳೆಗಾಲದಲ್ಲಿಯೂ ಸಹ ಸರಿಯಾಗಿ ಮಳೆ ಬರದ ಸ್ಥಿತಿ ಕಾಣುತ್ತಿದ್ದೇವೆ. ಇದಕ್ಕೆಲ್ಲ ಕಾರಣ ಪ್ರಕೃತಿಯ ನಾಶ. ನಮ್ಮೆಲ್ಲರ ಬದುಕಿಗಾಗಿ ಕ್ಷೇತ್ರದ ವತಿಯಿಂದ 'ಉಸಿರಿಗಾಗಿ ಹಸಿರು' ಅಭಿಯಾನ ಪ್ರಾರಂಭಿಸಲಾಗಿದೆ. ಪ್ರತಿಯೊಬ್ಬರೂ ವರ್ಷಕ್ಕೆ ಕನಿಷ್ಠ ಒಂದು ಗಿಡ ನೆಟ್ಟು ಬೆಳೆಸುವ ಕಾರ್ಯ ಮಾಡಬೇಕು ಎಂದು ಶ್ರೀ ಕ್ಷೇತ್ರ ಶಂಕರಪುರ ಏಕಜಾತಿ ಧರ್ಮ ಪೀಠದ ಶ್ರೀಸಾಯಿ ಈಶ್ವರ ಗುರೂಜಿ ಕರೆ ನೀಡಿದರು.
ಉಡುಪಿ ತಾಲೂಕಿನ ಶ್ರೀ ಕ್ಷೇತ್ರ ಶಂಕರಪುರದ ಶ್ರೀಸಾಯಿ ಮುಖ್ಯಪ್ರಾಣ ದೇವಸ್ಥಾನದ ವತಿಯಿಂದ ಆಯೋಜಿಸಿರುವ 'ಉಸಿರಿಗಾಗಿ ಹಸಿರು' ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಮುಂದಿನ ದಿನಗಳಲ್ಲಿ ರಾಜ್ಯವಾಪಿ ಈ ಅಭಿಯಾನ ನಡೆಯಲಿದೆ ಎಂದರು.
ಅನುಕರಣೀಯ ಕಾರ್ಯ
ಸಮಾಜಕಾರ್ಯ ಉಪನ್ಯಾಸಕ ಡಾ. ಗಣೇಶಪ್ರಸಾದ್ ಜಿ. ನಾಯಕ್ ಮಾತನಾಡಿ, ಪ್ರಕೃತಿಯನ್ನು ಉಳಿಸಿದರೆ ಮಾತ್ರ ಜೀವಸಂಕುಲ ಉಳಿಯಲು ಸಾಧ್ಯ. ಪ್ರತಿಯೊಬ್ಬರೂ ಗಿಡ ನೆಟ್ಟು ಬೆಳೆಸಬೇಕು. ಶ್ರೀ ಕ್ಷೇತ್ರದ ವತಿಯಿಂದ ಕೈಗೊಂಡ ಈ ಅಭಿಯಾನ ಅನುಕರಣೀಯ ಎಂದರು.