ನಿಷ್ಪ್ರಯೋಜಕ ಸಮುದಾಯ ಭವನ

 ಕುಂದಾಪುರದ ಗಾಂಧಿ ಉದ್ಯಾನವನದ ಒಳಗೆ ಪುರಸಭೆ ವತಿಯಿಂದ ನಿರ್ವಾಣಗೊಂಡ ಸಮುದಾಯ ಭವನ ಪಾಳು ಬಿದ್ದಿದೆ.
ಕುಂದಾಪುರದ ಗಾಂಧಿ ಉದ್ಯಾನವನದ ಒಳಗೆ ಪುರಸಭೆ ವತಿಯಿಂದ ನಿರ್ವಾಣಗೊಂಡ ಸಮುದಾಯ ಭವನ ಪಾಳು ಬಿದ್ದಿದೆ.
Published on
ವಿಜಯವಾಣಿ ಸುದ್ದಿಜಾಲ ಕುಂದಾಪುರ
ಕುಂದಾಪುರದ ಗಾಂಧಿ ಉದ್ಯಾನವನದ ಒಳಗೆ ಪುರಸಭೆ ವತಿಯಿಂದ ಸ್ವರ್ಣ ಜಯಂತಿ ಶಹರಿ ರೋಜ್‌ಗಾರ್(ಎಸ್‌ಜೆಎಸ್‌ಆರ್‌ವೈ) ಯೋಜನೆಯಡಿ ನಿರ್ವಾಣಗೊಂಡ ಸಮುದಾಯ ಭವನ ಈಗ ನಿಷ್ಪ್ರಯೋಜಕವಾಗಿದೆ. ಭವನದ ಸುತ್ತ ಹುಲ್ಲು, ಗಿಡಗಂಟಿ ಬೆಳೆದುಕೊಂಡಿದ್ದು, ಪಾಳು ಬಿದ್ದಂತಿದೆ.
ಭವನದ ಕಿಟಕಿ ಗಾಜುಗಳು ಒಡೆದು ಹೋಗಿದ್ದು, ಒಳಗೆ ಧೂಳು ತುಂಬಿಕೊಂಡಿದೆ. ಭವನದ ಸುತ್ತಲೂ ಪೊದೆ ಬೆಳೆದಿದೆ. ಗಾಂಧಿ ಪಾರ್ಕ್‌ನಲ್ಲಿ ಹಾಳಾಗಿರುವ ಪರಿಕರಗಳನ್ನು ಇಲ್ಲಿ ತಂದು ರಾಶಿ ಹಾಕಲಾಗಿದೆ. ಭವನದ ಕೆಲವೆಡೆ ಮದ್ಯದ ಬಾಟಲಿ, ಪ್ಯಾಕೆಟ್‌ಗಳನ್ನು ಎಸೆಯಲಾಗಿದ್ದು, ಮದ್ಯಪಾನಿಗಳ ವಿಶ್ರಾಂತಿ ತಾಣದಂತಿದೆ.
ವಿಶೇಷ ಅನುದಾನದಡಿ ಲಕ್ಷಾಂತರ ರೂ. ಖರ್ಚು ವಾಡಿ ನಿರ್ಮಿಸಿದ್ದ ಸುಸಜ್ಜಿತ ಕಟ್ಟಡವನ್ನು ಸಮರ್ಪಕವಾಗಿ ನಿರ್ವಹಣೆ ಮಾಡಿದರೆ ನಗರದಲ್ಲಿ ನಡೆಯುವ ಸಣ್ಣಮಟ್ಟದ ಕಾರ್ಯಕ್ರಮಗಳಿಗೆ, ಸಭೆ, ಸವಾರಂಭಗಳಿಗೆ ಬಳಸಿಕೊಳ್ಳಬಹುದು. ಇದರಿಂದ ಸಂ ಸಂಸ್ಥೆಗಳು, ವಿವಿಧ ಇಲಾಖೆಗಳ ಕಾರ್ಯಕ್ರಮ ಆಯೋಜನೆಗೂ ಸಹಕಾರಿಯಾಗಬಹುದು. ಆದರೆ ಕಳೆದ ಅನೇಕ ವರ್ಷಗಳಿಂದ ಈ ಸಮುದಾಯ ಭವನವನ್ನು ಬಳಸದಿರುವುದರಿಂದ ಇದ್ದೂ ಇಲ್ಲದಂತಾಗಿದೆ.

ಸಾರ್ವಜನಿಕರ ಬಳಕೆಗೆ ಸಿಗಲಿ

ನಗರದಲ್ಲಿ ಸಣ್ಣ ಪುಟ್ಟ ಕಾರ್ಯಕ್ರಮಗಳನ್ನು ಆಯೋಜಿಸಲು ಪುರಭವನವಿಲ್ಲ. ಹೆಚ್ಚಿನ ಕಾರ್ಯಕ್ರಮಗಳು ಕುಂದಾಪುರದ ಬೋರ್ಡ್ ಹೈಸ್ಕೂಲಿನ ಕಲಾ ಮಂದಿರ ಅಥವಾ ಅಂಬೇಡ್ಕರ್ ಭವನದಲ್ಲಿಯೇ ಆಯೋಜನೆಗೊಳ್ಳುತ್ತಿದೆ. ಈ ಸಮುದಾಯ ಭವನವನ್ನು ಸ್ವಚ್ಛಗೊಳಿಸಿ, ಸುಸಜ್ಜಿತ ರೀತಿಯಲ್ಲಿ ಇಟ್ಟುಕೊಂಡರೆ ನಗರದಲ್ಲಿ ನಡೆಯುವ ಸಭೆ, ಸವಾರಂಭಗಳಿಗೆ ಸಂ-ಸಂಸ್ಥೆಯವರು ಬಳಸಿಕೊಳ್ಳಬಹುದು. ಪುರಸಭೆ ವತಿಯಿಂದ ಶ್ರೀ ದುರಸ್ತಿ ಮಾಡಿ ಜನರ ಪ್ರಯೋಜನಕ್ಕೆ ಬಳಕೆಯಾಗುವಂತಾಗಲಿ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಈ ಸಮುದಾಯ ಭವನದಲ್ಲಿ ಯಾವುದೇ ಕಾರ್ಯಕ್ರಮ ನಡೆಯುತ್ತಿಲ್ಲ. ಹೆಚ್ಚಿನ ಕಾರ್ಯಕ್ರಮ ಅಂಬೇಡ್ಕರ್ ಭವನದಲ್ಲಿ ನಡೆಯುತ್ತಿದೆ. ಜನರಿಂದ ಕಾರ್ಯಕ್ರಮಕ್ಕಾಗಿ ಬೇಡಿಕೆ ಬಂದರೆ ಈ ಸಮುದಾಯವ ಭವನವನ್ನು ದುರಸ್ತಿ ವಾಡಿ, ಮರು ಬಳಕೆಗೆ ಪುರಸಭೆ ವತಿಯಿಂದ ಕ್ರಮ ಕೈಗೊಳ್ಳಲಾಗುವುದು.

— ಆನಂದ ಜೆ. ಕುಂದಾಪುರ ಪುರಸಭೆ ಮುಖ್ಯಾಧಿಕಾರಿ

ಲಕ್ಷಾಂತರ ರೂ. ಖರ್ಚು ವಾಡಿ ಪುರಸಭೆಯಿಂದ ಈ ಸಮುದಾಯ ಭವನ ನಿರ್ಮಿಸಲಾಗಿದೆ. ಆದರೆ ಈಗ ಬಳಸದೆ ವ್ಯರ್ಥವಾಗುತ್ತಿದೆ. ಇದನ್ನು ದುರಸ್ತಿಪಡಿಸಿ ಮತ್ತೆ ಬಳಕೆಗೆ ಪುರಸಭೆ ಅನುಕೂಲ ವಾಡಿಕೊಡಲಿ. ನಿರ್ವಹಣೆ ವೆಚ್ಚ ಬೇಕಾದರೆ ಪಡೆಯಲಿ. ಕುಂದಾಪುರದಲ್ಲಿ ಸಭೆ, ಸವಾರಂಭ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಸಭಾಭವನದ ಕೊರತೆಯಿದೆ.

— ರಾಜೇಶ್ ಕಾವೇರಿ ಪುರಸಭೆ ವಾಜಿ ಉಪಾಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net