ಆಲೂರು- ಹರ್ಕೂರು ವ್ಯವಸಾಯ ಸೇವಾ ಸಹಕಾರಿ ಸಂಘ ಅಧ್ಯಕ್ಷ ಎಚ್.ಮಂಜಯ್ಯ ಶೆಟ್ಟಿ ಮಾತನಾಡಿದರು. ಆಲೂರು ಗ್ರಾಪಂ ಆಡಳಿತಾಧಿಕಾರಿ ನಾರಾಯಣ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಕೃಷಿಕ ಸಮಾಜದ ಪ್ರತಿನಿಧಿ ಡಾ.ಅತುಲ್ ಕುಮಾರ್ ಶೆಟ್ಟಿ, ಕುಂದಾಪುರದ ಸಹಾಯಕ ಕೃಷಿ ನಿರ್ದೇಶಕ ಸತೀಶ ಬಿ., ಸಂಪನ್ಮೂಲ ವ್ಯಕ್ತಿಗಳಾದ ಬ್ರಹ್ಮಾವರ ವಲಯ ಕೃಷಿ ಸಂಶೋಧನಾ ಕೇಂದ್ರದ ಸಹ ಪ್ರಾಧ್ಯಾಪಕ ಡಾ.ಚೈತನ್ಯ ಎಚ್.ಎಸ್., ಶೃಂಗೇರಿಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ಸಹಾಯಕ ಪ್ರಾಧ್ಯಾಪಕ ಡಾ.ಸಂಜೀವ ಜಕಾತಿಮಠ, ಹಿರಿಯ ಬೇಸಾಯಶಾಸ್ತ್ರಜ್ಞ ನಿರಂಜನ ನಂದಿಪುರ ಉಪಸ್ಥಿತರಿದ್ದರು.