ನಗರಸಭೆ ಕಚೇರಿಗೆ ಹಠಾತ್ ಭೇಟಿ ಮಾಡಿದ ಅವರು, ಅಲ್ಲಿನ ಬಯೋಮೆಟ್ರಿಕ್‌ನ ಕಾರ್ಯ, ಕಳೆದ ಮೂರು ವರ್ಷಗಳಲ್ಲಿ ಕೈಗೊಂಡ ಕಾಮಗಾರಿಗಳ ವಿವರ, ವಾಹನಗಳ ನಿರ್ವಹಣೆ, ಆಸ್ತಿ ತೆರಿಗೆ ಸಂಗ್ರಹ, ಇ-ಆಸ್ತಿ ಮಾಡುವ ಬಾಕಿ ಇರುವ ಅರ್ಜಿಗಳ ವಿವರ, ಉದ್ದಿಮೆ ಪರವಾನಿಗೆ, ಪಾರ್ಕ್ಗಳ ನಿರ್ವಹಣೆ, ನಗರಸಭೆಯ ಭೂಮಿಯ ಅತಿಕ್ರಮ ಸೇರಿದಂತೆ ಮತ್ತಿತರ ವಿವರಗಳನ್ನು ಪರಿಶೀಲಿಸಿದರು.