ಉಪಯೋಗಕ್ಕಿಲ್ಲದ ತಂಗುದಾಣ

ಉಪಯೋಗ ಶೂನ್ಯ ಬಸ್ ನಿಲ್ದಾಣ.
ಉಪಯೋಗ ಶೂನ್ಯ ಬಸ್ ನಿಲ್ದಾಣ.
Published on
ಉಪ್ಪಳ: ಹೆದ್ದಾರಿ ಅಭಿವೃದ್ಧಿಗೊಂಡು ಸರ್ವೀಸ್ ರಸ್ತೆಯಲ್ಲಿ ಬಸ್ ತಂಗುದಾಣ ನಿರ್ಮಿಸಿದರೂ ಅಲ್ಲಿ ಬಸ್‌ಗಳನ್ನು ನಿಲ್ಲಿಸದೆ ಸ್ವಲ್ಪ ದೂರ ಮುಂದೆ ಹೋಗಿ ನಿಲ್ಲಿಸುವುದರಿಂದ ಸಮಸ್ಯೆ ಉಂಟಾಗಿದೆ ಎಂದು ಪ್ರಯಾಣಿರು ಆರೋಪಿಸಿದ್ದಾರೆ.
ಬಂದ್ಯೋಡು, ನಯಬಜಾರ್, ಕೈಕಂಬ, ಹೊಸಂಗಡಿ ಸಹಿತ ಹಲವು ಕಡೆಗಳಲ್ಲಿ ಬಸ್ ತಂಗುದಾಣ ನಿರ್ಮಿಸಲಾಗಿದೆ. ಆದರೆ ಖಾಸಗಿ ಸಹಿತ ಸರ್ಕಾರಿ ಬಸ್‌ಗಳನ್ನು ತಂಗುದಾಣದಲ್ಲಿ ನಿಲ್ಲಿಸದೆ ಅಲ್ಪ ದೂರ ನಿಲ್ಲಿಸುವುದರಿಂದ ಪ್ರಯಾಣಿಕರು ಅಲ್ಲಿ ತನಕ ಓಡಿಕೊಂಡು ಹೋಗಿ ಬಸ್ ಹತ್ತುವಂತಾಗಿದೆ.
ಇದರಿಂದ ಬಸ್ ತಂಗುದಾಣ ಉಪಯೋಗ ಶೂನ್ಯವಾಗುತ್ತಿದೆ. ಅಲ್ಲದೆ ಬಸ್‌ಗಳನ್ನು ಮುಂದೆ ಹೋಗಿ ನಿಲ್ಲಿಸುವುದರಿಂದ ಜಂಕ್ಷನ್ ಹಾಗೂ ಅಂಡರ್ ಪಾಸ್ ಹೊಂದಿರುವ ರಸ್ತೆಯಲ್ಲಿ ಇತರ ವಾಹನ ಸಂಚಾರಕ್ಕೂ ಅಡಚಣೆ ಉಂಟಾಗುತ್ತಿದೆ. ಬಸ್‌ಗಳನ್ನು ತಂಗುದಾಣದಲ್ಲೇ ನಿಲ್ಲಿಸಲು ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net