ಅವೈಜ್ಞಾನಿಕವಾಗಿ ತ್ಯಾಜ್ಯ ವಿಲೇ, ದಂಡ ವಸೂಲಿ

ದಂಡ
ದಂಡ
Published on
ಕಾಸರಗೋಡು: ಸ್ಥಳೀಯಾಡಳಿತ ಇಲಾಖೆಯ ಜಿಲ್ಲಾ ಎನ್‌ಫೋರ್ಸ್‌ಮೆಂಟ್ ಸ್ಕ್ವಾಡ್ ವಿವಿಧ ಸ್ಥಳೀಯಾಡಳಿತ ಸಂಸ್ಥೆ ವ್ಯಾಪ್ತಿಯಲ್ಲಿ ತಪಾಸಣೆ ನಡೆಸಿ ಅವೈಜ್ಞಾನಿಕವಾಗಿ ತ್ಯಾಜ್ಯ ವಿಲೇವಾರಿ ಮಾಡಿ ಕಾನೂನು ಉಲ್ಲಂಘಿಸಿರುವುದನ್ನು ಪತ್ತೆ ಹಚ್ಚಿ ದಂಡ ವಿಧಿಸಿದೆ.
ದೇಲಂಪಾಡಿ ಪಂಚಾಯಿತಿಯ ಅಡೂರ್‌ನಲ್ಲಿರುವ ಸ್ಟೋರ್, ಹೋಟೆಲ್, ಮಾರ್ಟ್, ಬದಿಯಡ್ಕದ ಅಪಾರ್ಟ್‌ಮೆಂಟ್, ಮಧೂರಿನ ಪಟ್ಲ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಅವೈಜ್ಞಾನಿಕವಾಗಿ ತ್ಯಾಜ್ಯ ಸಂಸ್ಕರಣೆ ಮಾಡಿರುವುದನ್ನು ಪತ್ತೆ ಹಚ್ಚಿದ್ದು 20,000 ರೂ. ದಂಡ ವಿಧಿಸಲಾಗಿದೆ.
ಕುಂಬಳೆಯ ರಸ್ತೆಬದಿ ಕೆರೆ ನಿರ್ಮಿಸಿ ಅದಕ್ಕೆ ತ್ಯಾಜ್ಯ ಹಾಕಲು ವ್ಯವಸ್ಥೆ ಕಲ್ಪಿಸಿದ್ದ ಸ್ಥಳದ ಮಾಲೀಕನಿಗೆ 5000 ರೂ. ದಂಡ ವಿಧಿಸಲಾಯಿತು. ಪನತ್ತಡಿ ಸೂಪರ್ ಮಾರ್ಕೆಟ್‌ನಲ್ಲಿ ಪ್ಲಾಸ್ಟಿಕ್ ಬಾಳೆಯೆಲೆ ಸಹಿತ ನಿಷೇಧಿತ ಉತ್ಪನ್ನಗಳನ್ನು ಪತ್ತೆ ಮಾಡಿ ಮಾಲೀಕನಿಗೆ 10,000 ರೂ. ದಂಡ ಹಾಕಿ ನಿಷೇಧಿತ ಉತ್ಪನ್ನಗಳನ್ನು ವಶಪಡಿಸಿಕೊಳ್ಳಲಾಗಿದೆ.
ತಪಾಸಣಾ ತಂಡದಲ್ಲಿ ಜಿಲ್ಲಾ ಎನ್‌ಫೋರ್ಸ್‌ಮೆಂಟ್ ಸ್ಕ್ವಾಡ್ ಮುಖಂಡ ಕೆ.ವಿ.ಮುಹಮ್ಮದ್ ಮದನಿ, ಸದಸ್ಯ ಜೋಸ್ ವಿ.ಎಂ, ಹೆಲ್ತ್ ಇನ್‌ಸ್ಪೆಕ್ಟರ್‌ಗಳಾದ ಕೆ.ಎಂ.ಬಶೀರ್, ಬಾಬುರಾಜ್ ಪಿ.ಕೆ., ಸುಜಾ ಎ., ಮೀನಾ ಕುಮಾರಿ ಕೆ., ಸೌಮ್ಯಾ ಕೆ. ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net