ಜಿಲ್ಲೆಯ ಒಟ್ಟು 6,492 ರೈತರು ಯೋಜನೆಯ ಭಾಗವಾಗಿದ್ದು, 3 ಸಾವಿರ ಹೆಕ್ಟೇರ್ ಭೂಮಿಯನ್ನು ಯಶಸ್ವಿಯಾಗಿ ಸಾವಯವ ಕೃಷಿ ವ್ಯಾಪ್ತಿಗೆ ತಂದಿರುವುದು ಕೃಷಿ ಇಲಾಖೆ ಸಾಧನೆಯಾಗಿದೆ. ಕಾಸರಗೋಡು ಜಿಲ್ಲೆ ಈ ಉಪಕ್ರಮದನ್ವಯ ಗುರುತಿಸಲಾದ ಸಂಪೂರ್ಣ ಪ್ರದೇಶಕ್ಕೆ ‘ಪಿಜಿಎಸ್ ಗ್ರೀನ್ ಸ್ಕೋಪ್’ ಪ್ರಮಾಣಪತ್ರ ಪಡೆಯುವಲ್ಲಿ ಯಶಸ್ವಿಯಾದ ಏಕೈಕ ಜಿಲ್ಲೆಯಾಗಿದೆ. ಈ ವಿಧಾನ ಬಳಸಿ ತೆಂಗು, ಅಡಿಕೆ, ಬಾಳೆ, ಕಾಳುಮೆಣಸು, ತರಕಾರಿಗಳು ಮತ್ತು ಹಣ್ಣುಗಳಂಥ ಬೆಳೆ ಬೆಳೆಯಲಾಗುತ್ತದೆ.