ಕಂಬಳೋತ್ಸವದಿಂದ ಸಮಾಜದಲ್ಲಿ ಒಗ್ಗಟ್ಟು

ವೇಣೂರು ಪೆರ್ಮುಡ ಸೂರ್ಯ-ಚಂದ್ರ ಜೋಡುಕರೆ ಕಂಬಳದಲ್ಲಿ ಮಾಜಿ ಸಚಿವ ರಮಾನಾಥ ರೈ ಮಾತನಾಡಿದರು. ಮಾಣಿಲ ಶ್ರೀ, ಸಮಿತಿ ಗೌರವಾಧ್ಯಕ್ಷ ರಕ್ಷಿತ್ ಶಿವರಾಂ, ಮಾಚಿ ಸಚಿವ ಕೆ.ಅಭಯಚಂದ್ರ ಜೈನ್ ಮತ್ತಿತರರಿದ್ದರು.
ವೇಣೂರು ಪೆರ್ಮುಡ ಸೂರ್ಯ-ಚಂದ್ರ ಜೋಡುಕರೆ ಕಂಬಳದಲ್ಲಿ ಮಾಜಿ ಸಚಿವ ರಮಾನಾಥ ರೈ ಮಾತನಾಡಿದರು. ಮಾಣಿಲ ಶ್ರೀ, ಸಮಿತಿ ಗೌರವಾಧ್ಯಕ್ಷ ರಕ್ಷಿತ್ ಶಿವರಾಂ, ಮಾಚಿ ಸಚಿವ ಕೆ.ಅಭಯಚಂದ್ರ ಜೈನ್ ಮತ್ತಿತರರಿದ್ದರು.
Published on
ಬೆಳ್ತಂಗಡಿ: ತುಳುನಾಡಿನ ಸಂಸ್ಕೃತಿ, ಪರಂಪರೆ, ಒಗ್ಗಟ್ಟನ್ನು ಯುವ ಜನಾಂಗಕ್ಕೆ ವರ್ಗಾಯಿಸುವ ಕಾರ್ಯ ಕಂಬಳದಿಂದ ಆಗುತ್ತಿದೆ. ವಸಂತ ಬಂಗೇರರು ಸುದೀರ್ಘವಾಗಿ ನಡೆಸಿಕೊಂಡು ಬಂದ ಕಂಬಳವನ್ನು ಈಗ ರಕ್ಷಿತ್ ಶಿವರಾಂ ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ ಎಂದು ಸ್ಪೀಕರ್ ಯು.ಟಿ.ಖಾದರ್ ಹೇಳಿದರು.
33ನೇ ವರ್ಷದ ವೇಣೂರು ಪೆರ್ಮುಡ ಸೂರ್ಯ-ಚಂದ್ರ ಹೊನಲು ಬೆಳಕಿನ ಜೋಡುಕರೆ ಕಂಬಳದಲ್ಲಿ ಮಾತನಾಡಿದರು. ಶನಿವಾರ ಸಭಾ ಕಾರ್ಯಕ್ರಮದಲ್ಲಿ ಸಮಿತಿ ಗೌರವಾಧ್ಯಕ್ಷ ರಕ್ಷಿತ್ ಶಿವರಾಂ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ಬಿ.ರಮಾನಾಥ ರೈ, ಪತ್ರಕರ್ತೆ ರಾಧಾ ಹೀರೇಗೌಡ ಮಾತನಾಡಿದರು. ಮಾಚಿ ಸಚಿವ ಕೆ.ಅಭಯಚಂದ್ರ ಜೈನ್, ಮೆಸ್ಕಾಂ ಅಧ್ಯಕ್ಷ ಕೆ.ಹರೀಶ್ ಕುಮಾರ್, ಗಂಗಾಧರ ಮಿತ್ತಮಾರು, ಸತೀಶ್ ಕೆ.ಕಾಶಿಪಟ್ಣ, ನಾಗೇಶ್ ಗೌಡ, ಇನಾಯತ್ ಆಲಿ, ಎ.ಜಯರಾಮ್ ಶೆಟ್ಟಿ, ಸಮಿತಿ ಅಧ್ಯಕ್ಷ ನಿತೀಶ್ ಎಚ್.ಕೋಟ್ಯಾನ್, ಕಾರ್ಯಾಧ್ಯಕ್ಷ ಶೇಖರ ಕುಕ್ಕೇಡಿ ಉಪಸ್ಥಿತರಿದ್ದರು.

ಫಲಿತಾಂಶ

ಕನೆ ಹಲಗೆ: (6.5 ಕೋಲು ನಿಶಾನೆಗೆ ನೀರು ಹಾಯಿಸಿದವರು) ಬೋಳಾರ ತ್ರಿಶಾಲ್ ಕೆ.ಪೂಜಾರಿ, ಹಲಗೆ ಮುಟ್ಟಿದವರು: ತೆಕ್ಕಟ್ಟೆ ಸುಧೀರ್ ದೇವಾಡಿಗ, ಬೈಂದೂರು ಸಸಿಹಿತ್ಲು ವೆಂಕಟ ಪೂಜಾರಿ. ಹಲಗೆ ಮುಟ್ಟಿದವರು: ಬೈಂದೂರು ಮಹೇಶ್ ಪೂಜಾರಿ.
ಅಡ್ಡ ಹಲಗೆ- ಪ್ರಥಮ: ನಾರಾವಿ ರಕ್ಷಿತ್ ಜೈನ್ (11.79), ಹಲಗೆ ಮುಟ್ಟಿದವರು ಭಟ್ಕಳ ಹರೀಶ್. ದ್ವಿತೀಯ: ಇರುವೈಲು ದೊಡ್ಡಗುತ್ತು ಜಗದೀಶ್ ಎಂ. ಶೆಟ್ಟಿ (11.95), ಹಲಗೆ ಮುಟ್ಟಿದವರು ತೆಕ್ಕಟ್ಟೆ ಸುಧೀರ್ ದೇವಾಡಿಗ.
ಹಗ್ಗ ಹಿರಿಯ ಪ್ರಥಮ: ವೇಣೂರು ಮುಡುಕೋಡಿ ಗಣೇಶ್ ನಾರಾಯಣ ಪಂಡಿತ್ ಬಿ.(11.26), ಓಡಿಸಿದವರು ಮಿಜಾರ್ ಅಶ್ವಥಪುರ ಶ್ರೀನಿವಾಸ ಗೌಡ. ದ್ವಿತೀಯ: ನಂದಳಿಕೆ ಶ್ರೀಕಾಂತ್ ಭಟ್ ಬಿ.(11.39), ಓಡಿಸಿದವರು ಬಂಬ್ರಾಣಬೈಲು ವಂದಿತ್ ಶೆಟ್ಟಿ.
ಹಗ್ಗ ಕಿರಿಯ: ಪ್ರಥಮ: ಎಂಬತ್ತು ಬಡಗಬೆಟ್ಟು ಕಲ್ಲಪಾಪು ಶ್ರೀಕ ಸಂದೀಪ್ ಶೆಟ್ಟಿ (11.28), ಓಡಿಸಿದವರು ಬೈಂದೂರು ವಿಶ್ವನಾಥ ದೇವಾಡಿಗ. ದ್ವಿತೀಯ: ಸುರತ್ಕಲ್ ಪಾಂಚಜನ್ಯ ಯೋಗೀಶ್ ಕರಿಯ ಪೂಜಾರಿ (11.88), ಓಡಿಸಿದವರು ಭಟ್ಕಳ ಶಂಕರ್.
ನೇಗಿಲು ಹಿರಿಯ ಪ್ರಥಮ: ಕಾರ್ಕಳ ಗಾಂಧಿಮೈದಾನ ಪೇಟೆಮನೆ ಧೃತಿಕ್ ತಾರನಾಥ ದೇವಾಡಿಗ ಎ.(11.37), ಓಡಿಸಿದವರು ಕುಂದ ಬಾರಂದಡಿ ಮಾಸ್ತಿಕಟ್ಟೆ ಸ್ವರೂಪ್. ದ್ವಿತೀಯ: ಶ್ರೀ ಮಹಮ್ಮಾಯಿ ಕಲ್ಲೇರಿ ಪಂಜಿಕುಡೆಲು ಗುತ್ತು ನಾರಾಯಣ ಪೂಜಾರಿ (11.50), ಓಡಿಸಿದವರು ಕಕ್ಕೆಪದವು ಪೆಂರ್ಗಾಲು ಕೃತಿಕ್ ಗೌಡ.
ನೇಗಿಲು ಕಿರಿಯ ಪ್ರಥಮ: ಎರ್ಮಾಳ್ ಪುಚ್ಚೊಟ್ಟು ಬೀಡು ಬಾಲಚಂದ್ರ ಲೋಕಯ್ಯ ಶೆಟ್ಟಿ ಎ. (11.26), ಓಡಿಸಿದವರು ಕುಂದ ಬಾರಂದಡಿ ಮಾಸ್ತಿಕಟ್ಟೆ ಸ್ವರೂಪ್. ದ್ವಿತೀಯ: ಕೊಡವೂರು ಕಂಬಳಕಟ್ಟ ಪಂಚರತ್ನ ಬೈಲುಮನೆ ಸಂತೋಷ್ ಶೆಟ್ಟಿ (12.12), ಓಡಿಸಿದವರು: ಪಣಪೀಲ ಪ್ರವೀಣ್ ಕೋಟ್ಯಾನ್.

137 ಜೊತೆ ಕೋಣಗಳು ಭಾಗಿ

ಕೂಟದಲ್ಲಿ ಒಟ್ಟು 137 ಜೊತೆ ಕೋಣಗಳು ಭಾಗವಹಿಸಿದ್ದವು. ಕನೆಹಲಗೆ: 10 ಜೊತೆ, ಅಡ್ಡಹಲಗೆ: 7 ಜೊತೆ, ಹಗ್ಗ ಹಿರಿಯ: 9 ಜೊತೆ, ನೇಗಿಲು ಹಿರಿಯ: 24 ಜೊತೆ, ಹಗ್ಗ ಕಿರಿಯ: 25 ಜೊತೆ, ನೇಗಿಲು ಕಿರಿಯ: 62 ಜೊತೆ ಭಾಗವಹಿಸಿ ಕಂಬಳಕ್ಕೆ ಮೆರುಗು ನೀಡಿದವು.

ತುಳುನಾಡಿನ ಕೀರ್ತಿಗೆ ಕಂಬಳದ ಮಹಿಮೆ ಉಕ್ಕಿ ಬರಲಿ. ಕಂಬಳದ ಅಭಿರುಚಿ ನನಗೂ ಇದೆ. ಅಳದಂಗಡಿಯ ಸೀಮೆಗೆ ಒಳಪಟ್ಟ ಕಂಬಳದ ಕೀರ್ತಿ ಮೇಲಕ್ಕೇರಲಿ, ತುಳುನಾಡಿನ ಪರಂಪರೆಗೆ ಉಳಿಸುವ ಕಾರ್ಯ ಈ ಮೂಲಕ ನಿರಂತರ ನಡೆಯಲಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net