ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಕೇಶವರಾಯ ಪ್ರಭು ಅವರು ಸಮಾಜಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟವರು. ವೃತ್ತಿಯಲ್ಲಿದ್ದರೂ ದಿನದ ಬಹುಪಾಲು ಸಮಯವನ್ನು ಸಂಘದ ಸೇವಾ ಕಾರ್ಯಕ್ಕೆ ಮೀಸಲಿಟ್ಟಿದ್ದರು. ಮಣಿಪಾಲದ ಹುಡ್ಕೋ ಕಾಲೋನಿಯಲ್ಲಿರುವ ಅವರ ಮನೆ ಅತ್ಯಂತ ಚಿಕ್ಕದಾಗಿತ್ತು. ಆದರೆ ಆ ಮನೆ ಹಲವಾರು ಜನರಿಗೆ ಆಶ್ರಯ ನೀಡಿದೆ. 2014ರಲ್ಲಿ ನಾನು ಲೋಕಸಭಾ ಅಭ್ಯರ್ಥಿಯಾಗಿ ಮಣಿಪಾಲಕ್ಕೆ ಬಂದಾಗ ಈ ಮನೆಯೇ ನನಗೆ ಆಶ್ರಯ ನೀಡಿತ್ತು. ಸುಮಾರು ಮೂರು ತಿಂಗಳು ಇಲ್ಲಿಯೇ ಇದ್ದು ಊಟ ಮಾಡಿದ್ದೆ ಎಂದರು.