ವಸತಿ ನಿವೇಶನಕ್ಕೆ ಕೊಂಡೇಲದಲ್ಲಿ 12 ಎಕರೆ ಜಾಗ ಗುರುತಿಸಲಾಗಿದೆ, ದಾಖಲೆಗಳ ಕೆಲಸ ಕಾರ್ಯಗಳು ನಡೆಯುತ್ತಿದ್ದು, ಇದನ್ನು ವಸತಿ ರಹಿತರಿಗೆ ನೀಡಲಾಗುವುದು. ಕೆಲವು ಸರ್ಕಾರಿ ಜಾಗಗಳನ್ನು ಗುರುತಿಸಿ ಇಡಲಾಗುವುದು. ಮುಂದಿನ ದಿನಗಳ ಪಂಚಾಯಿತಿಗೆ ಅಗತ್ಯ ಸಂದರ್ಭಗಳಲ್ಲಿ ಬೇಕಾಗಬಹುದು ಎಂದು ಅಧ್ಯಕ್ಷರು ಹೇಳಿದರು. ಈ ಸಂದರ್ಭ ಲೋಕಯ್ಯ ಸಾಲಿಯಾನ್ ಮಾತನಾಡಿ, ಎಲ್ಲ ಸದಸ್ಯರು ಆಯಾಯ ವಾರ್ಡ್‌ನಲ್ಲಿ ಸರ್ಕಾರಿ ಜಾಗವನ್ನು ಗುರುತಿಸಬೇಕು, ಎಲ್ಲರಿಗೂ ಒಂದೇ ಕಡೆ ಕೊಡುವುದಕ್ಕಿಂತ ಎಲ್ಲ ಕಡೆಗಳಲ್ಲಿ ಹಂಚಿ ಕೊಡಬೇಕು ಎಂದರು.