

ಕುಂದಾಪುರ: ಗಂಗೊಳ್ಳಿ ಗ್ರಾಮದ ಖಾರ್ವಿಕೇರಿ ಹಿಂದುಗಡೆಯ ಅರಬ್ಬಿ ಸಮುದ್ರದಲ್ಲಿ ಗುರುವಾರ ಈಜುತ್ತಿದ್ದ 35ರಿಂದ 40 ವರ್ಷದ ಅಪರಿಚಿತ ವ್ಯಕ್ತಿ ಆಕಸ್ಮಿಕವಾಗಿ ಸಮುದ್ರದ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದು, ಅವರ ಮೃತದೇಹ ಶುಕ್ರವಾರ ಸಂಜೆ ಗಂಗೊಳ್ಳಿ ಗ್ರಾಮ ಮಲ್ಯರಬೆಟ್ಟು ಬಳಿಯ ಅರಬ್ಬಿ ಸಮುದ್ರದಲ್ಲಿ ಪತ್ತೆಯಾಗಿದೆ. ಅವರು ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದರು. ವಾರಸುದಾರರು ಈವರೆಗೆ ಪತ್ತೆಯಾಗಿಲ್ಲ. ಮೃತದೇಹದ ಗುರುತು ಪತ್ತೆಯಾದಲ್ಲಿ ಠಾಣೆಗೆ ಮಾಹಿತಿ ನೀಡುವಂತೆ ಗಂಗೊಳ್ಳಿ ಪೊಲೀಸ್ ಠಾಣಾ ಉಪನಿರೀಕ್ಷಕರ ಪ್ರಕಟಣೆ ತಿಳಿಸಿದೆ.
ಕುಂದಾಪುರ: ಮುಳ್ಳಿಕಟ್ಟೆ ಕಡೆಯಿಂದ ಗುಜ್ಜಾಡಿ ಕಡೆಗೆ ಹೋಗುತ್ತಿದ್ದ ಸ್ಕೂಟರೊಂದು ನಾಯಕವಾಡಿ ಬಳಿ ನಿಯಂತ್ರಣ ಕಳೆದುಕೊಂಡು ನಾಯಕವಾಡಿ ಜಂಕ್ಷನ್ನಲ್ಲಿ ಅಳವಡಿಸಿದ ಬ್ಯಾರಿಕೇಡ್ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಕೂಟರ್ ಚಾಲಕ ಚಂದ್ರಹಾಸ ಚೊಕ್ಕ ಖಾನಾವಳಿಕರ್ ಎಂಬುವರು ಗಂಭೀರವಾಗಿ ಗಾಯಗೊಂಡು ಸುರತ್ಕಲ್ ಶ್ರೀನಿವಾಸ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ. ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪುರ: ಕುಂದಾಪುರದಿಂದ ಬೆಂಗಳೂರಿಗೆ ಉಡುಪಿ- ಕುಂದಾಪುರ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಹೋಗುತ್ತಿದ್ದ ಖಾಸಗಿ ಬಸ್ಸಿನ ಲಗೇಜ್ ಡಿಕ್ಕಿಯಲ್ಲಿ ಶಬ್ದ ಬರುತ್ತಿದ್ದ ಕಾರಣ ಬಸ್ಸನ್ನು ಚಾಲಕ ವಾಸುದೇವ ಎಂಬುವರು ಬೀಜಾಡಿ ಗ್ರಾಮದ ಮಲ್ನಾಡು ಪ್ಯೂಯಲ್ಸ್ ಬಂಕ್ ಎದುರುಗಡೆ ನಿಲ್ಲಿಸಿ ಡಿಕ್ಕಿಯನ್ನು ಪರಿಶೀಲಿಸಿ ಬಸ್ ಹತ್ತಲು ಹೋಗುತ್ತಿರುವಾಗ ಬೀಜಾಡಿ ಕಡೆಯಿಂದ ಕುಂದಾಪುರ ಕಡೆಗೆ ಹೋಗುತ್ತಿದ್ದ ಸ್ಕೂಟರ್ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಇದರಿಂದಾಗಿ ವಾಸುದೇವ ಮತ್ತು ಸ್ಕೂಟರ್ ಸವಾರ ಶಂಶುದ್ದೀನ್ ಗಂಭೀರವಾಗಿ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಕುಂದಾಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.