_1786030557991.webp?w=480&auto=format%2Ccompress&fit=max)
_1786030557991.webp?w=480&auto=format%2Ccompress&fit=max)
ವಿಜಯವಾಣಿ ಸುದ್ದಿಜಾಲ ಕುಂದಾಪುರ
ದೇಶ ಸೇವೆ ವೇಳೆ ಮಡಿದ ವೀರಯೋಧ ಅನೂಪ್ ಅವರ ಸೇವೆಗೆ ಗೌರವ ಸಲ್ಲಿಸುವುದು ನಮ್ಮೆಲ್ಲರ ಕರ್ತವ್ಯ. ಬೀಜಾಡಿ ಗ್ರಾಮದಲ್ಲಿ ಸರ್ಕಾರಿ ಭೂಮಿಯ ಲಭ್ಯತೆ ಕುರಿತು ಜಿಲ್ಲಾಡಳಿತದ ಸಮನ್ವಯತೆಯೊಂದಿಗೆ ಎಲ್ಲರನ್ನು ವಿಶ್ವಾಸಕ್ಕೆ ಪಡೆದು ನಿಯಮಾನುಸಾರ ಕ್ರಮವಹಿಸಲಾಗುತ್ತದೆ.
— ಪ್ರದೀಪ್ ಕುರುಡೇಕರ್ ಕುಂದಾಪುರ ತಹಸೀಲ್ದಾರ್
ಪ್ರವಾಸಿಗರು ಹೆಚ್ಚಾಗಿ ಭೇಟಿ ನೀಡುವ ಸಮುದ್ರ ತೀರದಲ್ಲಿ ಸ್ಮಾರಕ ನಿರ್ಮಾಣವಾದರೆ, ನಮ್ಮೂರಿನ ಅನೂಪ್ ಪೂಜಾರಿಯ ಶೌರ್ಯದ ಅರಿವು, ನೆನಪನ್ನು ಶಾಶ್ವತಗೊಳಿಸಬಹುದು. ಮುಂದಿನ ಪೀಳಿಗೆಗೆ ಸೇನೆ, ದೇಶಭಕ್ತಿ, ಸೇವಾ ಮನೋಭಾವದ ಪ್ರೇರಣೆಯಾಗಲಿದೆ. ಸಂಬಂಧಪಟ್ಟವರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಶೀಘ್ರವೇ ಜಾಗ ಮಂಜೂರು ಹಾಗೂ ಸ್ಮಾರಕ ನಿರ್ಮಾಣಕ್ಕೆ ಅಗತ್ಯ ಕ್ರಮಕೈಗೊಳ್ಳಬೇಕು.
— ಅಶೋಕ್ ಪೂಜಾರಿ ಬೀಜಾಡಿ ಸಾಮಾಜಿಕ ಕಾರ್ಯಕರ್ತ
ಯೋಧನಾಗಿ ಮಡಿದ ಸಹೋದರನ ಸ್ಮಾರಕ ನಿರ್ಮಾಣದ ಭರವಸೆ ಇನ್ನೂ ಈಡೇರಿಲ್ಲ. ಒಂದೂವರೆ ವರ್ಷ ಕಳೆದರೂ ಜಾಗದ ಗಡಿ ಗುರುತು ಮಾಡುವ ಕಾರ್ಯವೂ ನಡೆದಿಲ್ಲ. ಮನೆಯವರು ಅನೂಪ್ ಹೆಸರಿನಲ್ಲಿ ಟ್ರಸ್ಟ್ ಮಾಡಲು ತೀರ್ಮಾನಿಸಿದ್ದು, ಇಲಾಖೆ ಜಾಗ ಮಂಜೂರು ಮಾಡಿದಲ್ಲಿ ಸರ್ವರ ಸಹಕಾರದೊಂದಿಗೆ ಸ್ಮಾರಕ ನಿರ್ಮಿಸುವ ಉದ್ದೇಶ ಮಾಡಿದ್ದೇವೆ. ಆದರೆ ಆಡಳಿತದ ಸ್ಪಂದನೆ ಸಿಕ್ಕಿಲ್ಲ.
— ಶಿವರಾಮ ಅಮಿನ್ ಅನೂಪ್ ಸಹೋದರ