ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚಿನ ಅಂಕದೊಂದಿಗೆ ತೇರ್ಗಡೆಯಾದ ಪ್ರತೀಕ್ಷಾ ಅವರನ್ನು ಗೌರವಿಸಲಾಯಿತು. ಮೂಲ್ಕಿ ವಿವಿಧೋದ್ದೇಶ ಸಹಕಾರಿ ಸಂಘ ಅಧ್ಯಕ್ಷ ಗೋಪಿನಾಥ ಪಡಂಗ, ಕೆರೆಕಾಡು ಮೂಲ್ಕಿ ಶ್ರೀ ವಿನಾಯಕ ಯಕ್ಷಕಲಾ ೌಂಡೇಶನ್ ಅಧ್ಯಕ್ಷ ಜಯಂತ ಅಮೀನ್ ಇದ್ದರು.
ಯಕ್ಷಗಾನ ಕಲಿಕೆ ಜತೆಗೆ ಇತರ ತುಳುನಾಡ ಆಚಾರ ವಿಚಾರ, ಸಂಸ್ಕಾರ ಸಂಸ್ಕೃತಿಗಳನ್ನು ಮಕ್ಕಳಿಗೆ ಕಲಿಸುತ್ತಾ ಬರುವ ಮೂಲಕ ಯುವಜನತೆಯಲ್ಲಿ ಸಂಪೂರ್ಣ ವ್ಯಕ್ತಿತ್ವ ವಿಕಸನಗೊಳಿಸುವ ಕಾರ್ಯ ಶ್ಲಾಘನೀಯ ಎಂದು ಮೂಲ್ಕಿ ವಿವಿಧೋದ್ದೇಶ ಸಹಕಾರಿ ಸಂಘ ಅಧ್ಯಕ್ಷ ಗೋಪಿನಾಥ ಪಡಂಗ ಹೇಳಿದರು.
ಕೆರೆಕಾಡು ಮೂಲ್ಕಿ ಶ್ರೀ ವಿನಾಯಕ ಯಕ್ಷಕಲಾ ೌಂಡೇಶನ್ ಆಶ್ರಯದಲ್ಲಿ ಆಟಿದ ಆಯನ ಕಾರ್ಯಕ್ರಮ ಭಾನುವಾರ ಪಕ್ಷಿಕೆರೆ ಯಕ್ಷಗಾನ ಅಧ್ಯಯನ ಕೇಂದ್ರದಲ್ಲಿ ನಡೆಯಿತು.
ಸಂಪನ್ಮೂಲ ವ್ಯಕ್ತಿ ಆಶಾ ಉಡುಪ ಕಟೀಲ್ ಮಾತನಾಡಿದರು. ಮುಖ್ಯ ಅತಿಥಿಯಾಗಿ ಪಡುಬಿದ್ರಿ ಸ್ವರ್ಣ ಸೌಹಾರ್ದ ಸಹಕಾರಿ ಸಂಘದ ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭಾಸ್ಕರ್ ಅಮೀನ್ ತೋಕೂರು ಆಟಿ ತಿಂಗಳ ಮಹತ್ವ, ಜಾನಪದ ಇತಿಹಾಸಗಳ ಬಗ್ಗೆ ವಿವರವಾಗಿ ತಿಳಿಸಿಕೊಟ್ಟರು.
ಕೆರೆಕಾಡು ಮೂಲ್ಕಿ ಶ್ರೀ ವಿನಾಯಕ ಯಕ್ಷಕಲಾ ೌಂಡೇಶನ್ ಅಧ್ಯಕ್ಷ ಜಯಂತ ಅಮೀನ್ ಅಧ್ಯಕ್ಷತೆ ವಹಿಸಿದ್ದರು. ವಿನಾಯಕ ಯಕ್ಷ ಕಲಾ ಫೌಂಡೇಶನ್ ಗೌರವಾಧ್ಯಕ್ಷ ಅಜಿತ್ ಕೆರೆಕಾಡು, ಯಶೋದಾ ಅಜಿತ್ ಕೆರೆಕಾಡು, ಕಾವ್ಯ ಕುಲಾಲ್ ಉಪಸ್ಥಿತರಿದ್ದರು.
ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚಿನ ಅಂಕದೊಂದಿಗೆ ತೇರ್ಗಡೆಯಾದ ಪ್ರತೀಕ್ಷಾ ಅವರನ್ನು ಸನ್ಮಾನಿಸಲಾಯಿತು. ಆಶಾ ಉಡುಪ ಕಟೀಲ್ ಅವರನ್ನು ಗೌರವಿಸಲಾಯಿತು. ಕಾವ್ಯ ಕುಲಾಲ್ ಸನ್ಮಾನ ಪತ್ರ ವಾಚಿಸಿದರು. ತಂಡದ ಮಹಿಳಾ ಸದಸ್ಯರು ಪ್ರಾರ್ಥನೆ ನೆರವೇರಿಸಿದರು. ಗೀತಾ ಮೋಹನ್ ಸ್ವಾಗತಿಸಿದರು. ಚೈತ್ರಾ ಕೆರೆಕಾಡು ವಂದಿಸಿದರು. ಅಭಿಜಿತ್ ಕೆರೆಕಾಡು ನಿರೂಪಿಸಿದರು.