ಮಹಾತ್ಮರ ತ್ಯಾಗ, ಬಲಿದಾನ ಅರಿತು ಆಚರಣೆ

ಸ್ವಾತಂತ್ರ್ಯ ಮಹೋತ್ಸವದಲ್ಲಿ ತಹಸೀಲ್ದಾರ್ ರವಿರಾಜ್ ದೀಕ್ಷಿತ್ ಧ್ವಜಾರೋಹಣಗೈದರು. ಪ್ರಮುಖರಾದ ಮೋಹನ ಪೂಜಾರಿ, ನಾಗಶಯನ, ಎಚ್.ರಾಮಚಂದ್ರಪ್ಪ, ಸಂತೋಷ್ ಆನಂದ್ ಕಾಯ್ಕಿಣಿ, ಸದಾಶಿವ ಡಿ.ಪಡುವರಿ, ಬಿ.ಎಂ.ನಾಗರಾಜ ಗಾಣಿಗ ಮೊದಲಾದವರು ಇದ್ದರು.
ಸ್ವಾತಂತ್ರ್ಯ ಮಹೋತ್ಸವದಲ್ಲಿ ತಹಸೀಲ್ದಾರ್ ರವಿರಾಜ್ ದೀಕ್ಷಿತ್ ಧ್ವಜಾರೋಹಣಗೈದರು. ಪ್ರಮುಖರಾದ ಮೋಹನ ಪೂಜಾರಿ, ನಾಗಶಯನ, ಎಚ್.ರಾಮಚಂದ್ರಪ್ಪ, ಸಂತೋಷ್ ಆನಂದ್ ಕಾಯ್ಕಿಣಿ, ಸದಾಶಿವ ಡಿ.ಪಡುವರಿ, ಬಿ.ಎಂ.ನಾಗರಾಜ ಗಾಣಿಗ ಮೊದಲಾದವರು ಇದ್ದರು.
Published on

ಬೈಂದೂರು: ದೇಶ ಸ್ವತಂತ್ರವಾಗುವಲ್ಲಿ ಹೋರಾಡಿದ ಸ್ವಾತಂತ್ರೃ ಹೋರಾಟಗಾರರ, ಮಹಾತ್ಮರ ತ್ಯಾಗ, ಬಲಿದಾನ ಹಾಗೂ ಲಕ್ಷಾಂತರ ವೀರ ಯೋಧರ ಪರಾಕ್ರಮ ಹಾಗೂ ರಕ್ತತರ್ಪಣವನ್ನು ಸದಾ ಸ್ಮರಿಸುವ ಮೂಲಕ ಸ್ವಾತಂತ್ರೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸುವಂತಾಗಬೇಕು ಎಂದು ತಹಸೀಲ್ದಾರ್ ರವಿರಾಜ್ ದೀಕ್ಷಿತ್ ಹೇಳಿದರು.

ಬೈಂದೂರು ಗಾಂಧಿ ಮೈದಾನದಲ್ಲಿ ಶನಿವಾರ ಧ್ವಜಾರೋಹಣಗೈದು ಮಾತನಾಡಿದರು.

ಶೈಕ್ಷಣಿಕ ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಸಾಧಕರನ್ನು ಸನ್ಮಾನಿಸಲಾಯಿತು. ಪೊಲೀಸ್ ಇಲಾಖೆ, ಗೃಹರಕ್ಷಕ ದಳ ಹಾಗೂ ವಿದ್ಯಾರ್ಥಿಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು. ಬೈಂದೂರು ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಮೋಹನ ಪೂಜಾರಿ, ತಾಪಂ ಕಾರ್ಯನಿವಾಹಕ ಅಧಿಕಾರಿ ನಾಗಶಯನ, ಗ್ರೇಡ್ 2 ತಹಸೀಲ್ದಾರ್ ಎಚ್.ರಾಮಚಂದ್ರಪ್ಪ, ಪೊಲೀಸ್ ವೃತ್ತ ನಿರೀಕ್ಷಕ ಸಂತೋಷ್ ಆನಂದ್ ಕಾಯ್ಕಿಣಿ, ಪಪಂ ನಾಮನಿರ್ದೇಶಿತ ಸದಸ್ಯರಾದ ಸದಾಶಿವ ಡಿ.ಪಡುವರಿ, ಬಿ.ಎಂ.ನಾಗರಾಜ ಗಾಣಿಗ ಮೊದಲಾದವರು ಇದ್ದರು.
ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ ಕೆ.ನಾಯ್ಕ ಸ್ವಾಗತಿಸಿದರು. ಪಪಂ ಮುಖ್ಯಾಧಿಕಾರಿ ಅಜಯ್ ಭಂಡಾರ್‌ಕರ್ ವಂದಿಸಿದರು. ಶಿಕ್ಷಕ ಗಣಪತಿ ಹೋಬಳಿದಾರ್ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net