ಮನೆ-ಮನಗಳಲ್ಲಿ ದಿನವೂ ಬೆಳೆಯಲಿ ಮಾನವೀಯ ಸಂಬಂಧ

ಉಡುಪಿಯ ಕಾತ್ಯಾಯಿನಿ ನಗರದಲ್ಲಿ ಯುಗಾದಿ ಆಚರಿಸಲಾಯಿತು. ಶ್ರೀನಿವಾಸ್​ ರಾವ್​ ಕೆ., ಸುರೇಖಾ ಸನಿಲ್​, ಗುಣವತಿ, ಸಂಗೀತಾ ಡಿ., ರಾಮಕೃಷ್ಣ ಎಸ್​., ಅನುರಾಧಾ ಜಿ.ಎಸ್​., ಸುರೇಶ್​ ಡಿ, ಚಂದನ್​, ಪ್ರಶಾಂತ್​ ಪೂಜಾರಿ ಇದ್ದರು.
ಉಡುಪಿಯ ಕಾತ್ಯಾಯಿನಿ ನಗರದಲ್ಲಿ ಯುಗಾದಿ ಆಚರಿಸಲಾಯಿತು. ಶ್ರೀನಿವಾಸ್​ ರಾವ್​ ಕೆ., ಸುರೇಖಾ ಸನಿಲ್​, ಗುಣವತಿ, ಸಂಗೀತಾ ಡಿ., ರಾಮಕೃಷ್ಣ ಎಸ್​., ಅನುರಾಧಾ ಜಿ.ಎಸ್​., ಸುರೇಶ್​ ಡಿ, ಚಂದನ್​, ಪ್ರಶಾಂತ್​ ಪೂಜಾರಿ ಇದ್ದರು.
Published on

* ಶ್ರೀನಿವಾಸ್​ ರಾವ್​ ಕೆ. ಆಶಯ

* ಯುಗಾದಿ ಪರಾಭವನಾಮ ಸಂವತ್ಸರ ಆಚರಣೆ

ಉಡುಪಿ: ತಂತ್ರಜ್ಞಾನಗಳಿಂದ ಮಾನವರಿಗೆ ಸೌಲಭ್ಯ ಹೆಚ್ಚಾಗಿದ್ದರೂ ಮಾನವೀಯ ಸಂಬಂಧಗಳ ಕೊರತೆಯೂ ಹೆಚ್ಚುತ್ತಲಿದೆ. ಇಂದು ಹಣಗಳಿಕೆಯಷ್ಟೇ ಮುಖ್ಯವಾಗುತ್ತಿದ್ದು ಮಾನವೀಯತೆ ಮರೆಯುತ್ತಿದ್ದೇವೆ. ಇದಕ್ಕೆ ಕೊಲ್ಲಿ ರಾಷ್ಟ್ರಗಳಲ್ಲಿ ಆಗುತ್ತಿರುವ ಯುದ್ಧ ಹಾಗೂ ಅಮಾಯಕರ ಸಾವು ನಿದರ್ಶನವಾಗಿದೆ. ಮನೆ-ಮನಗಳಲ್ಲಿ ದ್ವೇಷ ನಾಶವಾಗಿ ಪ್ರೀತಿ, ವಾತ್ಸಲ್ಯ, ಮಾನವೀಯ ಸಂಬಂಧ ಬೆಳೆಯಲಿ ಎಂದು ಸಮಾನ ಮನಸ್ಕ ವೇದಿಕೆಯ ಅಧ್ಯಕ್ಷ ಶ್ರೀನಿವಾಸ್​ ರಾವ್​ ಕೆ. ಆಶಯ ವ್ಯಕ್ತಪಡಿಸಿದರು.
ಉಡುಪಿಯ ಕಾತ್ಯಾಯನಿ ನಗರದ ನಿವಾಸದಲ್ಲಿ ಸಮಾನ ಮನಸ್ಕ ಕನ್ನಡಿಗರ ವೇದಿಕೆಯಿಂದ ಗುರುವಾರ (ಮಾ.19) ಆಯೋಜಿಸಿದ್ದ ನೂತನ ವರ್ಷಕ್ಕೆ ಸ್ವಾಗತಿಸುವ ಯುಗಾದಿ ಕಾರ್ಯಕ್ರಮದಲ್ಲಿ ಮಾತನಾಡಿ, ಪರಾಭವನಾಮ ಸಂವತ್ಸರದಲ್ಲಿ ಮಾನವೀಯ ಸಂಬಂಧಗಳ ವೃದ್ಧಿಗೆ ನಾವೆಲ್ಲ ಶ್ರಮಿಸುತ್ತ ಮತ್ತೊಬ್ಬರ ಖುಷಿಯಲ್ಲೇ ನಮ್ಮ ಸಂತೋಷ ಕಾಣಬೇಕು. ಆಗಲೇ ಸುಂದರ ಸಮಾಜ ನಿರ್ಮಾಣ ಸಾಧ್ಯ ಎಂದರು.
ಗುಣವತಿ, ಸಂಗೀತಾ ಡಿ, ರಾಮಕೃಷ್ಣ ಎಸ್​. ಚಂದನ್​, ಪ್ರಶಾಂತ್​ ಪೂಜಾರಿ, ದೀಪಾ, ರೂಪಾ, ಜ್ಯೋತಿ, ಸುನೀತಾ, ವನಜಾ ಅಕ್ಷತಾ, ಲಕ್ಷ್ಮೀ, ವಿಜಯಲಕ್ಷ್ಮೀ, ಚಂದ್ರಶೇಖರ್​, ವಾಸುದೇವ್​ ಪಿ., ಶ್ವೇತಾ, ಉಮಾ ಎಚ್​., ಚಂದ್ರಕಲಾ, ಶ್ರೀದೇವಿ, ಹೇಮಲತಾ ಇತರರಿದ್ದರು.
ಸುರೇಶ್​ ಡಿ. ಕಾರ್ಯಕ್ರಮ ನಿರೂಪಿಸಿದರು. ಅನುರಾಧಾ ಜಿ.ಎಸ್​. ವಂದಿಸಿದರು.
"

ನಾಳಿನ ಪೀಳಿಗೆಗಾಗಿ ಇಂದಿನ ಪೀಳಿಗೆಗೆ ಮಾನವೀಯ ಮೌಲ್ಯಗಳ ಮಹತ್ವ ತಿಳಿಸಬೇಕಿದೆ. ಅವರಿಗಾಗಿ ಶುದ್ಧ ಗಾಳಿ, ನೀರು, ಪರಿಸರ ಉಳಿಸಿ ಹೋಗುವ ಸಂಕಲ್ಪ ಮಾಡೋಣ. ಉಪಕಾರ ಮಾಡುವುದರಲ್ಲಿ ಜೀವನದ ಸಾರ್ಥಕತೆ ಅಡಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net