ಸಾಧಕರಿಗೆ ಗೌರವ ಸ್ತುತ್ಯಾರ್ಹ ಕಾರ್ಯ

ವಿವಿಧ ಕ್ಷೇತ್ರಗಳ ಸಾಧಕರಿಗೆ ಸ್ವಾತಂತ್ರ್ಯೋತ್ಸವ ಸಮ್ಮಾನ ಮಾಡಲಾಯಿತು. ವಿನಯಕುಮಾರ್​ ಸೊರಕೆ, ಅಬ್ದುಲ್​ ಜಲೀಲ್​ ಸಾಹೇಬ್​, ಪಿ.ವಿ. ಮೋಹನ್​, ಡಾ.ವಾಸುದೇವ ಬೆಳ್ಳೆ, ಫಾತಿಮಾ ರಲಿಯಾ, ಉದ್ಯಾವರ ನಾಗೇಶಕುಮಾರ್​, ಗಿರೀಶ್​ ಗುಡ್ಡೆಯಂಗಡಿ, ಸುಹೇಲ್​ ರಹಮತುಲ್ಲ ಇತರರಿದ್ದರು.
ವಿವಿಧ ಕ್ಷೇತ್ರಗಳ ಸಾಧಕರಿಗೆ ಸ್ವಾತಂತ್ರ್ಯೋತ್ಸವ ಸಮ್ಮಾನ ಮಾಡಲಾಯಿತು. ವಿನಯಕುಮಾರ್​ ಸೊರಕೆ, ಅಬ್ದುಲ್​ ಜಲೀಲ್​ ಸಾಹೇಬ್​, ಪಿ.ವಿ. ಮೋಹನ್​, ಡಾ.ವಾಸುದೇವ ಬೆಳ್ಳೆ, ಫಾತಿಮಾ ರಲಿಯಾ, ಉದ್ಯಾವರ ನಾಗೇಶಕುಮಾರ್​, ಗಿರೀಶ್​ ಗುಡ್ಡೆಯಂಗಡಿ, ಸುಹೇಲ್​ ರಹಮತುಲ್ಲ ಇತರರಿದ್ದರು.
Published on

* ಮಾಜಿ ಸಚಿವ ವಿನಯಕುಮಾರ್​ ಸೊರಕೆ ಅನಿಸಿಕೆ

* ಯುಎಫ್​ಸಿಯಿಂದ ಸ್ವಾತಂತ್ರ್ಯೋತ್ಸವ ಸಮ್ಮಾನ 

ಉಡುಪಿ: ವಿವಿಧ ಕ್ಷೇತ್ರಗಳ ಸಾಧಕರನ್ನು ಸಾರ್ವಜನಿಕವಾಗಿ ಗೌರವಿಸಿದರೆ ಅದು ಯುವ ಸಮುದಾಯಕ್ಕೆ ಪ್ರೇರಣೆಯಾಗಲಿದೆ. ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಯುವ ಸಾಧಕರನ್ನು ಗೌರವಿಸಿರುವುದು ಸ್ತುತ್ಯಾರ್ಹ ಕಾರ್ಯವಾಗಿದೆ ಎಂದು ಮಾಜಿ ಸಚಿವ ವಿನಯಕುಮಾರ್​ ಸೊರಕೆ ಅನಿಸಿಕೆ ಅನಿಸಿಕೆ ವ್ಯಕ್ತಪಡಿಸಿದರು.
ಉಡುಪಿ ಉದ್ಯಾವರದಲ್ಲಿ ಸೇವಾ ಮತ್ತು ಸಾಂಸ್ಕೃತಿಕ ವೇದಿಕೆಯಾದ ಉದ್ಯಾವರ ಫ್ರೆಂಡ್ಸ್​ ಸರ್ಕಲ್​ (ಯುಎಫ್​ಸಿ) ವತಿಯಿಂದ ಆಯೋಜಿಸಿದ್ದ ಸ್ವಾತಂತ್ರ್ಯೋತ್ಸವ ಸಮ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ರಾಜಸ್ಥಾನದಲ್ಲಿ ಇತ್ತೀಚೆಗೆ ನಡೆ 36ನೇ ರಾಷ್ಟ್ರೀಯ ಮಟ್ಟದ 19ರ ವಯೋಮಾನದೊಳಗಿನ ಬಾಲಕಿಯರ ಥ್ರೋಬಾಲ್​ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ಉದ್ಯಾವರದ ರಮೇಶಕುಮಾರ್​ ಮತ್ತು ವನಿತಾ ದಂಪತಿ ಪುತ್ರಿ ಹಾಗೂ ಬ್ರಹ್ಮಾವರದ ಜಿಎಂ ವಿದ್ಯಾನಿಕೇತನ ಪಬ್ಲಿಕ್​ ಸ್ಕೂಲ್​ನ 10ನೇ ತರಗತಿ ವಿದ್ಯಾರ್ಥಿನಿ ಹಂಸಿಕಾ ಆರ್​ ಪೂಜಾರಿ, ಹೈದರಾಬಾದ್​ನಲ್ಲಿ ನಡೆದ ರಾಷ್ಟ್ರೀಯ ಇಕ್ವಿಪ್ಡ್​ ಪವರ್​ ಲಿಫ್ಟಿಂಗ್​ ಚಾಂಪಿಯನ್​ಶಿಪ್​ನಲ್ಲಿ ಪದಕ ಗಳಿಸಿದ ಪಿತ್ರೋಡಿಯ ರೋಶನ್​ ಕರ್ಕಡ ಮತ್ತು ಸುಮಂಗಲಾ ಅವರ ಪುತ್ರ ಹಾಗೂ ಬ್ರಹ್ಮಾವರ ಲಿಟ್ಲ್​ ರಾಕ್​ ಇಂಡಿಯನ್​ ಸ್ಕೂಲ್​ನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಅನ್ಮೋಲ್​ ಬೆನಡಿಕ್ಟ್​ ಕರ್ಕಡ, ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಬೆಂಗಳೂರು ವ್ಯಾಪ್ತಿಯಲ್ಲಿ ಕಳೆದ ವರ್ಷ ನಡೆದ ಪರೀಕ್ಷೆಯಲ್ಲಿ ಪ್ರಥಮ ಸ್ಥಾನದೊಂದಿಗೆ ಎಂಬಿಬಿಎಸ್​ ಪದವಿ ಗಳಿಸಿದ ಯು.ಪದ್ಮನಾಭ ಕಾಮತ್​ ಮತ್ತು ಡಾ. ಸವಿತಾ ಪಿ. ಕಾಮತ್​ ಸುಪುತ್ರಿ ಹಾಗೂ ಕಾರವಾರ ಇನ್​ಸ್ಟಿಟ್ಯೂಟ್​ ಆಫ್​ ಮೆಡಿಕಲ್​ ಸೈನ್ಸ್​ನ ವಿದ್ಯಾರ್ಥಿನಿ ಡಾ.ಪವಿತ್ರಾ ಕಾಮತ್​ ಅವರನ್ನು ಸನ್ಮಾನಿಸಲಾಯಿತು.
ಸಂಸ್ಥೆಯ ನಿರ್ದೇಶಕ ಅಬ್ದುಲ್​ ಜಲೀಲ್​ ಸಾಹೇಬ್​, ವಿಪ ಸದಸ್ಯ ಪಿ.ವಿ. ಮೋಹನ್​, ಪ್ರಾಂಶುಪಾಲ ಡಾ.ವಾಸುದೇವ ಬೆಳ್ಳೆ, ಲೇಖಕಿ ಫಾತಿಮಾ ರಲಿಯಾ ಉಪಸ್ಥಿತರಿದ್ದರು.
ಸಂಸ್ಥೆಯ ಗೌರವಾಧ್ಯಕ್ಷ ಉದ್ಯಾವರ ನಾಗೇಶಕುಮಾರ್​, ಅಧ್ಯಕ್ಷ ಗಿರೀಶ್​ ಗುಡ್ಡೆಯಂಗಡಿ, ಪ್ರಧಾನ ಕಾರ್ಯದರ್ಶಿ ಸುಹೇಲ್​ ರಹಮತುಲ್ಲ, ಕೋಶಾಧಿಕಾರಿ ಸತೀಶ್​ ಡಿ. ಸಾಲಿಯಾನ್​, ಉಪಾಧ್ಯಕ್ಷ ಶ್ರೀಧರ್​ ಮಾಬಿಯಾನ್​, ಕಾರ್ಯದರ್ಶಿ ಆಶಾ ವಾಸು, ಲೆಕ್ಕ ಪರಿಶೋಧಕ ತಿಲಕರಾಜ್​ ಸಾಲಿಯಾನ್​, ಮಾಜಿ ಅಧ್ಯಕ್ಷ ಸೋಮಶೇಖರ್​ ಸುರತ್ಕಲ್​ ಇನ್ನಿತರರು ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net