ಏ.29ಕ್ಕೆ 'ಆಭರಣ' ಶೋರೂಮ್​ ಅನಾವರಣ

ಶಿವಮೊಗ್ಗದಲ್ಲಿ ಅನಾವರಣಗೊಳ್ಳಲಿರುವ 'ದ ಒರಿಜಿನಲ್​ ಆಭರಣ' ಸಂಸ್ಥೆಯ ನವೀಕೃತ ಮಳಿಗೆ.
ಶಿವಮೊಗ್ಗದಲ್ಲಿ ಅನಾವರಣಗೊಳ್ಳಲಿರುವ 'ದ ಒರಿಜಿನಲ್​ ಆಭರಣ' ಸಂಸ್ಥೆಯ ನವೀಕೃತ ಮಳಿಗೆ.
Published on

* ಶಿವಮೊಗ್ಗದಲ್ಲಿ ನವೀಕೃತ ಮಳಿಗೆ ಶುಭಾರಂಭ

* ಬ್ರಾಂಡ್​ನ ಪಯಣದಲ್ಲಿ ಇನ್ನೊಂದು ಮೈಲಿಗಲ್ಲು

ಉಡುಪಿ: ವಿಶ್ವಾಸ, ಕುಶಲತೆ ಮತ್ತು ಚಿರ ಸೌಂದರ್ಯಕ್ಕೆ ಹೆಸರುವಾಸಿಯಾದ 'ದ ಒರಿಜಿನಲ್​ ಆಭರಣ' ತನ್ನ ಶಿವಮೊಗ್ಗದ ಹೆಮ್ಮೆಯ ಶೋರೂಮ್​ಅನ್ನು ಜೆ.ಪಿ.ಎನ್​. ರಸ್ತೆಯ ಕ್ಷಿತಿ ಕಾಂಪ್ಲೆಕ್ಸ್​ನಿಂದ ಕುವೆಂಪು ರಸ್ತೆಯ ಜೈಲ್​ ಸರ್ಕಲ್​ ಸಮೀಪದಲ್ಲಿ ವಿಶಾಲವಾದ ಹಾಗೂ ನವೀಕೃತ ಶೋರೂಮ್​ಗೆ ಏ.29ರಂದು ಸ್ಥಳಾಂತರಿಸುತ್ತಿದೆ.
'ಆಭರಣ' ಬ್ರಾಂಡ್​ನ ಪಯಣದಲ್ಲಿ ಇನ್ನೊಂದು ಪ್ರಮುಖ ಮೈಲಿಗಲ್ಲು ಗುರುತಿಸುವ ಈ ಹೊಸ ಶೋರೂಮ್​ ನಾಳೆ ಬೆಳಗ್ಗೆ 11 ಗಂಟೆಯಿಂದ ತೆರೆಗೊಳ್ಳಲಿದೆ. ಸಂಪ್ರದಾಯದ ಸೊಗಡಿನೊಂದಿಗೆ ಆಧುನಿಕತೆಯ ಮೆರುಗುಹೊತ್ತ 'ಆಭರಣ' ವಿನ್ಯಾಸಗಳು ಗ್ರಾಹಕರಿಗೆ ಖರೀದಿಯ ಉನ್ನತ ಅನುಭವದ ಭರವಸೆ ನೀಡಲಿವೆ.
ಮಳಿಗೆ ಅನಾವರಣ ಸಮಾರಂಭದಲ್ಲಿ ಬ್ರಾಂಡ್​ನ ಶ್ರೇಷ್ಠತೆಯ ಪರಂಪರೆ ಮುಂದುವರಿಸುತ್ತಿರುವ 'ದ ಒರಿಜಿನಲ್​ ಆಭರಣ' ಕುಟುಂಬದ ಪ್ರಮುಖ ಸದಸ್ಯರಾದ ಮಧುಕರ್​ ಎಸ್​. ಕಾಮತ್​, ಸುಭಾಸ್​ ಎಂ. ಕಾಮತ್​, ಮಹೇಶ್​ ಎಂ. ಕಾಮತ್​, ಸಂಧ್ಯಾ ಎಸ್​. ಕಾಮತ್​, ವೀಣಾ ಎಂ. ಕಾಮತ್​, ಸಾತ್ವಿಕ್​ ಕಾಮತ್​, ಆಕರ್ಷ್​ ಕಾಮತ್​, ಶ್ಲೋಕಾ ಕಾಮತ್​ ಮತ್ತು ಅದಿತ್ರಿ ಕಾಮತ್​ ಪಾಲ್ಗೊಳ್ಳಲಿದ್ದಾರೆ. ದಿ. ರಾಧಾ ಕಾಮತ್​ ಅವರ ದಿವ್ಯ ಆಶೀರ್ವಾದವೂ ಸಹ ಇವರ ಪಾಲಿಗಿದೆ. 

ಆಧುನಿಕ ಶೈಲಿ, ಉತ್ತಮ ಗ್ರಾಹಕ ಸೇವೆ

ಆಭರಣ ಪ್ರಿಯರಿಗೆ ಸಕಲ ಸವಲತ್ತುಗಳ ಐಷಾರಾಮಿ ಅನುಭವ ನೀಡಲು ಈ ಹೊಸ ಶೋರೂಮ್​ ವಿನ್ಯಾಸಗೊಳಿಸಲಾಗಿದೆ. ಇದು ಬಂಗಾರ, ವಜ್ರ ಮತ್ತು ಮದುವೆಯ ಆಭರಣಗಳ ಆಯ್ದ ಸಂಗ್ರಹಗಳನ್ನು ಒಳಗೊಂಡಿದೆ. ಉತ್ತಮ ಗ್ರಾಹಕ ಸೇವೆ ಮತ್ತು ಆಧುನಿಕ ಶೈಲಿ ಹೊಂದಿದೆ. ಗ್ರಾಹಕರು, ಪೋಷಕರು ಮತ್ತು ಹಿತೈಷಿಗಳಿಗೆ ಈ ಮಹತ್ವದ ಆಚರಣೆಯಲ್ಲಿ ಭಾಗವಹಿಸಲು 'ಆಭರಣ' ಪರಿವಾರ ಒಕ್ಕೊರಲಿನ ಆತ್ಮೀಯ ಕರೆ ನೀಡಿದೆ.
"

ಮಳಿಗೆಯ ಸ್ಥಳಾಂತರವು ಕೇವಲ ಹೊಸ ವಿಳಾಸಕ್ಕೆ ಸೀಮಿತವಾಗಿಲ್ಲ. ಇದು ಶಿವಮೊಗ್ಗದ ನಮ್ಮ ಗ್ರಾಹಕರ ಮೇಲಿರುವ ನಮ್ಮ ನಿರಂತರ ವಿಶ್ವಾಸ ಪ್ರತಿಬಿಂಬಿಸುತ್ತದೆ. ನಾವು ಇಲ್ಲಿ ಒಂದೇ ಸೂರಿನಡಿ ನಮ್ಮ ಪರಂಪರೆಯನ್ನು ಸಂಭ್ರಮಿಸುವ, ಹೆಚ್ಚಿನ ಸೌಕರ್ಯ ನೀಡುವ ಮತ್ತು ನಮ್ಮ ಅತ್ಯುತ್ತಮ ಕಲಾ ಕೌಶಲ ಪ್ರದರ್ಶಿಸುವಂತಹ ಶೋರೂಮ್​ ನಿರ್ಮಿಸಿದ್ದೇವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net