ಉಡುಪಿ: ಪ್ರಸಿದ್ಧ ಸಂಶೋಧಕಿ ಡಾ.ಸುಶೀಲಾ ಉಪಾಧ್ಯಾಯ ಸ್ಮರಣಾರ್ಥ ಉಡುಪಿಯ ರಾಗಧನ ಸಂಸ್ಥೆಯ ಮೂಲಕ ನೀಡಲಾಗುವ 'ರಾಗಧನ ಪಲ್ಲವಿ' ಪ್ರಶಸ್ತಿಗೆ ಉಡುಪಿಯ ಪ್ರತಿಭಾವಂತ ಗಾಯಕಿ ಪ್ರಜ್ಞಾ ಅಡಿಗ ಆಯ್ಕೆಯಾಗಿದ್ದಾರೆ.
ಉಡುಪಿಯ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಫೆ.7ರಂದು ಸಂಜೆ 5:30ಕ್ಕೆ ಆಯೋಜಿಸಿರುವ 38ನೇ ವರ್ಷದ ಶ್ರೀಪುರಂದರದಾಸ ಮತ್ತು ಸಂಗೀತ ತ್ರಿಮೂರ್ತಿ ಉತ್ಸವದಲ್ಲಿ ಡಾ. ಗಣಪತಿ ಜೋಯಿಸ್ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಸಂಸ್ಥೆಯ ಅಧ್ಯಕ್ಷ ಡಾ.ಕಿರಣ್ ಹೆಬ್ಬಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ಪ್ರಜ್ಞಾ ಅಡಿಗ ಅವರಿಂದ 'ರಾಗಂ ತಾನಂ ಪಲ್ಲವಿ' ಎಂಬ ಗಾಯನ ಕಾರ್ಯಕ್ರಮ ನಡೆಯಲಿದೆ ಎಂದು ರಾಗಧನ ಸಂಸ್ಥೆಯ ಕಾರ್ಯದರ್ಶಿ ಉಮಾಶಂಕರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.