ಆಸ್ಟ್ರೋಗೆ ಎಫ್​ಐಎಪಿಯಿಂದ ಅಸೋಸಿಯೇಟ್​ ಗೌರವ

ಆಸ್ಟ್ರೋ ಮೋಹನ್​. ಹಿರಿಯ ಛಾಯಾಪತ್ರಕರ್ತ.
ಆಸ್ಟ್ರೋ ಮೋಹನ್​. ಹಿರಿಯ ಛಾಯಾಪತ್ರಕರ್ತ.
Published on

* ಉಡುಪಿಯ ಹಿರಿಯ ಛಾಯಾಪತ್ರಕರ್ತ

ಉಡುಪಿ: ಹಿರಿಯ ಛಾಯಾಪತ್ರಕರ್ತ ಉಡುಪಿಯ ಆಸ್ಟ್ರೋ ಮೋಹನ್​ ಅವರಿಗೆ ಅಂತಾರಾಷ್ಟ್ರೀಯ ಛಾಯಾಚಿತ್ರ ಕಲೆಗಳ ಉನ್ನತ ಸಂಸ್ಥೆಯಾದ ಎಫ್​ಐಎಪಿ ವತಿಯಿಂದ ಅಸೋಸಿಯೇಟ್​ ಗೌರವಕ್ಕೆ ಭಾಜನರಾಗಿದ್ದಾರೆ. 
ಎಫ್​ಐಎಪಿ ಗೌರವ ಕ್ರಮದಲ್ಲಿ ಇದು ಪ್ರಾಥಮಿಕ ಹಂತದ ಮಾನ್ಯತೆಯಾಗಿದೆ. ಆದರೂ ಕರ್ನಾಟಕದ ಸಕ್ರಿಯ ಛಾಯಾಚಿತ್ರ ಪತ್ರಕರ್ತರುಗಳಲ್ಲಿ ಈ ಅಂತಾರಾಷ್ಟ್ರೀಯ ಗೌರವ ಪಡೆದವರು ಅತಿ ವಿರಳ. 
ಮೂರು ದಶಕಗಳಿಗೂ ಅಧಿಕ ವೃತ್ತಿಪರ ಅನುಭವ ಹೊಂದಿರುವ ಆಸ್ಟ್ರೋ ಮೋಹನ್​ ಅವರು ನಾಡಿನ ಸಂಸ್ಕೃತಿ, ಪರಂಪರೆ, ಧಾರ್ಮಿಕ ಆಚರಣೆ ಹಾಗೂ ಜನಜೀವನವನ್ನು ತಮ್ಮ ಛಾಯಾಚಿತ್ರಗಳ ಮೂಲಕವೇ ಆಳವಾಗಿ ದಾಖಲಿಸುವ ಮೂಲಕವೇ ಗುರುತಿಸಿಕೊಂಡಿದ್ದಾರೆ. 
ಅವರ ನೂರಾರು ಛಾಯಾಕೃತಿಗಳು ಅನೇಕ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಪ್ರದರ್ಶನಗಳಲ್ಲಿ ಮಾನ್ಯತೆ ಪಡೆದಿರುವುದು ವಿಶೇಷ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net