'ವಾತ್ಸಲ್ಯದ ಒಸಗೆ' ಕೃತಿಗೆ ಡಾ. ಶ್ಯಾಮ್ ಪ್ರಸಾದ್ ಪ್ರಶಸ್ತಿ
'ಡಾ. ಶ್ಯಾಮ್ ಪ್ರಸಾದ್' ಪ್ರಶಸ್ತಿಗೆ ಆಯ್ಕೆಯಾದ ಕೃತಿಯೊಂದಿಗೆ ಉಡುಪಿಯ ಡಾ. ರಾಜಲಕ್ಷ್ಮೀ.
Published on:
Copied
Follow Us
* ರಾಜ್ಯ ಮಟ್ಟದ ಪ್ರತಿಷ್ಠಿತ ಪರಸ್ಕಾರಕ್ಕೆ ಡಾ.ರಾಜಲಕ್ಷ್ಮೀ ಆಯ್ಕೆ
ಉಡುಪಿ: ಭಾರತೀಯ ವೈದ್ಯಕೀಯ ಸಂಘದ ಕರ್ನಾಟಕ ರಾಜ್ಯ ಶಾಖೆಯ ಕನ್ನಡ ವೈದ್ಯ ಬರಹಗಾರರ ಸಮಿತಿ ನೀಡುವ ಪ್ರತಿಷ್ಠಿತ 'ಡಾ. ಶ್ಯಾಮ್ ಪ್ರಸಾದ್' ವಾರ್ಷಿಕ ಶ್ರೇಷ್ಠ ವೈದ್ಯಕೀಯ ಕೃತಿ ಪ್ರಶಸ್ತಿಗೆ 'ವಾತ್ಸಲ್ಯದ ಒಸಗೆ' (ಮಹಿಳಾ ಆರೋಗ್ಯ ಸಂಗಾತಿ) ಕೃತಿ ಆಯ್ಕೆಯಾಗಿದೆ.
ಉಡುಪಿಯಲ್ಲಿ ವೈದ್ಯಕೀಯ ವೃತ್ತಿಯೊಂದಿಗೆ ಸಾಹಿತ್ಯ ಕ್ಷೇತ್ರದಲ್ಲೂ ಗುರುತಿಸಿಕೊಂಡಿರುವ ವಾತ್ಸಲ್ಯ ಕ್ಲಿನಿಕ್ನ ವೈದ್ಯೆ ಡಾ. ರಾಜಲಕ್ಷ್ಮೀ ಅವರು ರಚಿತ ಕೃತಿ ಇದಾಗಿದೆ.
ಭಾರತೀಯ ವೈದ್ಯಕೀಯ ಸಂಘ ಉಡುಪಿ ಕರಾವಳಿಯ ಮಾಜಿ ಅಧ್ಯಕ್ಷೆಯಾದ ಡಾ. ರಾಜಲಕ್ಷ್ಮೀ, ರೋಗಿಗಳ ಬದುಕು, ಭಾವನೆ ಮತ್ತು ಮಾನವೀಯ ಸಂಬಂಧಗಳ ಕುರಿತು ಕೃತಿಯಲ್ಲಿ ಮನೋಜ್ಞವಾಗಿ ಹಾಗೂ ಓದುಗರ ಮನಮುಟ್ಟುವಂತಿದೆ ಬರೆದಿದ್ದಾರೆ.
ಆ.23 ಮತ್ತು 24ರಂದು ದೊಡ್ಡಬಳ್ಳಾಪುರದ ನವೋದಯ ಶಾಲೆಯಲ್ಲಿ ಆಯೋಜಿಸಿರುವ ಕನ್ನಡ ವೈದ್ಯ ಬರಹಗಾರರ 6ನೇ ವರ್ಷದ ರಾಜ್ಯ ಸಮ್ಮೇಳನದಲ್ಲಿ ಪದ್ಮಶ್ರೀ ಡಾ. ಸುರೇಶ್ ಹನಗವಾಡಿ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.