ಸಫಲತೆಗಾಗಿ 'ಸಾಫಲ್ಯ' ಸಾಥ್​..!

ಉಡುಪಿಯ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್​) ಹೊರತಂದಿರುವ ಸಾಫಲ್ಯ ಇ-ಮ್ಯಾಗ್ಸಿನ್​.
ಉಡುಪಿಯ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್​) ಹೊರತಂದಿರುವ ಸಾಫಲ್ಯ ಇ-ಮ್ಯಾಗ್ಸಿನ್​.
Published on

* ಎಸ್​ಎಸ್​ಎಲ್​ಸಿಯಲ್ಲಿ ಹೆಚ್ಚು ಅಂಕ ಗಳಿಕೆಗೆ ಗೈಡ್​

*  ಉಡುಪಿ ಡಯಟ್​ನಿಂದ ವಿದ್ಯಾರ್ಥಿಗಳಿಗೆ ಇ-ಮ್ಯಾಗ್ಸಿನ್​

ಪ್ರಶಾಂತ ಭಾಗ್ವತ ಉಡುಪಿ
ಶಿಕ್ಷಣ ಕ್ಷೇತ್ರದಲ್ಲಿ ಪ್ರತಿವರ್ಷವೂ ವಿಶೇಷ ಸಾಧನೆಗಳ ಮೂಲಕ ಉಡುಪಿ ಜಿಲ್ಲೆ ರಾಜ್ಯದ ಗಮನ ಸೆಳೆಯುತ್ತಲೇ ಇರುತ್ತದೆ. ಜಿಲ್ಲೆಯ ಎಲ್ಲ ಸರ್ಕಾರಿ-ಖಾಸಗಿ ಶಾಲೆಗಳು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವುದು ಇದಕ್ಕೆ ಕಾರಣವಾಗಿದೆ.
ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲೂ ಸಹ ಪ್ರತಿಶತ ಲಿತಾಂಶ ಹಾಗೂ ಟಾಪ್​ ಫೈವ್​ನಲ್ಲಿ ಉಡುಪಿ ಸ್ಥಾನಗಳಿಸಿರುತ್ತದೆ. ಈ ಬಾರಿ 'ಪ್ರಥಮ ಸ್ಥಾನ'ವೇರಲು ಉಡುಪಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್​)ಯು 'ಸಾಫಲ್ಯ' ಎಂಬ ಇ-ಮ್ಯಾಗ್ಸಿನ್​ ಹೊರತಂದಿದ್ದು, ವಿದ್ಯಾರ್ಥಿಗಳಿಗೆ ಸಾಥ್​ ನೀಡಲಿದೆ.

ಮಕ್ಕಳಿಗೆ ಸಾಫಲ್ಯ ಏಕೆ?

ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಹೆಚ್ಚು ಅಂಕ ಗಳಿಸಲು ಸಹಕರಿಸುತ್ತದೆ. ಈ ಮೊದಲು ಕಲಿಕೆಯಲ್ಲಿ ಹಿಂದುಳಿದ ಮಕ್ಕಳು ಉತ್ತೀರ್ಣರಾಗಲು 'ಪಾಸಿಂಗ್​ ಪ್ಯಾಕೇಜ್​' ಯೋಜನೆ ಇರುತ್ತಿತ್ತು. ಇದೀಗ 'ವಿಷನ್​ 40+' ಗುರಿ ಹೊಂದಲಾಗಿದೆ. ಹೀಗಾಗಿ ಕಲಿಕೆಯಲ್ಲಿ ಹಿಂದಿಳಿದ ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಗಳಿಸಲು 'ಸಾಫಲ್ಯ' ಪ್ರಯತ್ನಿಸಲಿದೆ. ಕಳೆದ ವರ್ಷ ಇ-ಮ್ಯಾಗ್ಸಿನ್​ ಆರಂಭಿಸಿದಾಗ ಮಕ್ಕಳು ಹೆಚ್ಚು ಅಂಕ ಗಳಿಸಿದ್ದರಿಂದ ಈ ವರ್ಷವೂ ಅದನ್ನು ಮುಂದುವರಿಸಿ 'ಸಾಫಲ್ಯ' ಇ-ಮ್ಯಾಗ್ಸಿನ್​ ಎಂದು ಹೆಸರಿಡಲಾಗಿದೆ.

ಮ್ಯಾಗ್ಸಿನ್​ನ ವಿಶೇಷತೆ ಏನು?

ಪ್ರತಿ ಸೋಮವಾರ ಪ್ರಥಮ ಭಾಷೆ ಕನ್ನಡ, ಮಂಗಳವಾರ ಗಣಿತ, ಬುಧವಾರ ದ್ವಿತೀಯ ಭಾಷೆ ಇಂಗ್ಲಿಷ್​, ಗುರುವಾರ ಸಮಾಜ ವಿಜ್ಞಾನ. ಶುಕ್ರವಾರ ವಿಜ್ಞಾನ, ಶನಿವಾರ ತೃತೀಯ ಭಾಷೆ ಹಿಂದಿ ವಿಷಯಗಳ ಪ್ರಶ್ನೋತ್ತರ ಮಾಲಿಕೆ ಇರಲಿದೆ. ಪ್ರತಿ ಭಾನುವಾರ ಪ್ರಥಮ ಭಾಷೆ ಸಂಸತ ಹಾಗೂ ಇಂಗ್ಲಿಷ್​ ಮೈನರ್​ ಭಾಷೆಗೆ ಸಂಬಂಧಿಸಿ 'ಸಾಫಲ್ಯ' ವಿಶೇಷ ಸಂಚಿಕೆ ನೀಡಿದ್ದು, ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಮಾರ್ಗದರ್ಶಿಯಂತೆ ಕೆಲಸ ಮಾಡಿದೆ. ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆಯುವ ನಮ್ಮ ಪ್ರಯತ್ನಕ್ಕೆ ಸಾಫಲ್ಯ ದಾರಿದೀಪವಾಗಿದೆ ಎನ್ನುತ್ತಾರೆ ಡಿಡಿಪಿಐ ಲೋಕೇಶ್​ ಸಿ.

ರಾಜ್ಯಾದ್ಯಂತ ವಿದ್ಯಾರ್ಥಿಗಳಿಗೆ ಆಸರೆ

ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಡಯಟ್​ ಹೊರತಂದಿರುವ 'ಸಾಫಲ್ಯ' ಮ್ಯಾಗ್ಸಿನ್​ ರಾಜ್ಯಾದ್ಯಂತ ಶೈಕ್ಷಣಿಕ ಕ್ಷೇತ್ರದಲ್ಲಿ ಸಂಚಲನ ಮೂಡಿಸಿದೆ. ಇದು ಕೇವಲ ಮಾಹಿತಿ ಸಂಗ್ರಹವಾಗಿರದೆ ಪರೀಕ್ಷಾ ಮಂಡಳಿಯ ಮಾದರಿ ಪ್ರಶ್ನೆ ಪತ್ರಿಕೆ ಹಾಗೂ ಎಲ್​ಬಿಎ ಪ್ರಶ್ನೆಕೋಠಿ ಆಧಾರದಲ್ಲಿ ರಚಿಸಲಾಗಿದೆ. ವಿದ್ಯಾರ್ಥಿಗಳ ಕಲಿಕಾಮಟ್ಟ ಸುಧಾರಿಸುವಲ್ಲಿ ಹಾಗೂ ಹೆಚ್ಚು ಅಂಕ ಗಳಿಸುವಂತಾಗಲು ಉಡುಪಿ ಜಿಲ್ಲೆಯ 36 ಸಂಪನ್ಮೂಲ ವ್ಯಕ್ತಿಗಳು ಶ್ರಮ ವಹಿಸಿದ್ದಾರೆ. ಪ್ರತಿದಿನ ಬೆಳಗ್ಗೆ 7:30ಕ್ಕೆ ಬಿಡುಗಡೆ ಆಗುತ್ತಿದ್ದ 'ಸಾಫಲ್ಯ' ಮಾ.17ರ ವರೆಗೆ 78 ಸಂಚಿಕೆ ಕಂಡಿದೆ. ಇದನ್ನು ಅಭ್ಯಸಿಸಿದ ವಿದ್ಯಾರ್ಥಿಗಳು ಸುಲಭವಾಗಿ ಶೇ.70ರಿಂದ 80 ಅಂಕ ಗಳಿಸಬಹುದು ಎನ್ನುತ್ತಾರೆ ಕುಂದಾಪುರ ತಾಲೂಕಿನ ಕಾಳಾವರದ ಸರ್ಕಾರಿ ಪ್ರೌಢಶಾಲೆಯ ಗಣಿತ ಶಿಕ್ಷಕ ಗಣೇಶ್​ ಶೆಟ್ಟಿಗಾರ್​.
"

ಯಾವುದೇ ಖರ್ಚು-ವೆಚ್ಚ ಇಲ್ಲದೆ ಎಲ್ಲ ಹೈಸ್ಕೂಲ್​ಗಳ ವಾಟ್ಸಾಪ್​ ಗ್ರೂಪ್​ಗಳಿಗೆ ತಲುಪಿಸುತ್ತಿದ್ದೆವು. ಬಹಳ ಉತ್ತಮ ಪ್ರತಿಕ್ರಿಯೆ ಬಂದಿದೆ. ಉಡುಪಿ ಡಯಟ್​ನ ಈ ಮಹತ್ತರ ಕಾರ್ಯ ವಿದ್ಯಾರ್ಥಿಗಳಿಗೆ ಪರೀಕ್ಷಾ ಸಿದ್ಧತೆಗೆ ಹೆಚ್ಚುವರಿ ಸಾಮಗ್ರಿ ದೊರೆತಂತಾಗಿದೆ. ರಾಜ್ಯಾದ್ಯಂತ ಎಸ್​ಎಸ್​ಎಲ್​ಸಿ ವಿದ್ಯಾರ್ಥಿಗಳಿಗೆ 'ಸಾಫಲ್ಯ' ತಲುಪಿರುವುದು ಇನ್ನೊಂದು ವಿಶೇಷ.

"

ಎಸ್​ಎಸ್​ಎಲ್​ಸಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಆರು ವಿಷಯಗಳಿಗೆ ಸಂಬಂಧಿಸಿದ ಪ್ರಶ್ನೋತ್ತರ ಮಾಲಿಕೆಯ 'ಸಾಫಲ್ಯ'ದ ಪ್ರತಿ ಸಂಚಿಕೆಯನ್ನೂ ಓದಿದ್ದು, ಪರೀಕ್ಷೆಯಲ್ಲಿ ಎಲ್ಲ ಪ್ರಶ್ನೆಗಳಿಗೂ ಉತ್ತರಿಸಲು ಸಾಧ್ಯವಾಗಲಿದೆ. ನಾನಂತೂ ಈ ಪರೀಕ್ಷೆಯಲ್ಲಿ ಸಾಫಲ್ಯ ಕಂಡುಕೊಳ್ಳುವುದರಲ್ಲಿ ಎರಡು ಮಾತಿಲ್ಲ. ಸಕಾಲಿಕವಾಗಿ ಇದನ್ನು ಒದಗಿಸಿದ ನನ್ನ ಶಾಲೆಗೂ ಹಾಗೂ ಉಡುಪಿಯ ಡಯಟ್​ ಸಂಸ್ಥೆಗೂ ಸದಾ ಚಿರಋಣಿ.

"

ಎಸ್​ಎಸ್​ಎಲ್​ಸಿ ಪರೀಕ್ಷೆಗೆ ಪಠ್ಯ-ಪುಸ್ತಕಗಳ ಜತೆಗೆ ವಿದ್ಯಾರ್ಥಿಗಳಿಗೆ ಹೆಚ್ಚಿನ ಮಾರ್ಗದರ್ಶನದ ಅಗತ್ಯವೂ ಇರುತ್ತದೆ. ಪರೀಕ್ಷೆಯಲ್ಲಿ ಎಂತಹ ಪ್ರಶ್ನೆಗಳು ಇರುತ್ತವೆ? ಅವುಗಳಿಗೆ ಉತ್ತರಿಸಲು ನಮ್ಮಿಂದ ಸಾಧ್ಯವೇ ಎಂಬ ಚಿಂತೆ ಕಾಡುತ್ತಿತ್ತು. ಇದೀಗ 'ಸಾಫಲ್ಯ' ನಮಗೆ ಆಸರೆಯಾಗಿದ್ದು, ಎಲ್ಲ ರೀತಿಯ ಒತ್ತಡ ನಿವಾರಿಸಿದೆ. ಧೈರ್ಯವಾಗಿ ಪರೀಕ್ಷೆ ಎದುರಿಸಲು, ಹೆಚ್ಚಿನ ಅಂಕ ಗಳಿಸಲು ಈ ಮ್ಯಾಗ್ಸಿನ್​ ಅನುಕೂಲವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net