ಮಾಹೆಯಿಂದ 50 ಮನೆಗಳ ಪ್ರಾಯೋಜಕತ್ವ

ಉಡುಪಿ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣಕ್ಕೆ ಭೇಟಿ ನೀಡಿದ ಡಾ. ರಂಜನ್​ ಆರ್​. ಪೈ ಅವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಡಾ. ಎಚ್​. ಎಸ್​. ಬಲ್ಲಾಳ, ಎಂ. ಗಂಗಾಧರ್​ ರಾವ್​, ಮುರಳಿ ಕಡೆಕಾರ್​, ಕೆ. ಗಣೇಶ್​ ರಾವ್​, ಪಿ. ಕಿಶನ್​ ಹೆಗ್ಡೆ, ವಿ.ಜಿ. ಶೆಟ್ಟಿ, ಪ್ರೊ. ಕೆ.ಸದಾಶಿವ ರಾವ್​, ನಾರಾಯಣ ಎಂ. ಹೆಗಡೆ ಇತರರಿದ್ದರು.
ಉಡುಪಿ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣಕ್ಕೆ ಭೇಟಿ ನೀಡಿದ ಡಾ. ರಂಜನ್​ ಆರ್​. ಪೈ ಅವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಡಾ. ಎಚ್​. ಎಸ್​. ಬಲ್ಲಾಳ, ಎಂ. ಗಂಗಾಧರ್​ ರಾವ್​, ಮುರಳಿ ಕಡೆಕಾರ್​, ಕೆ. ಗಣೇಶ್​ ರಾವ್​, ಪಿ. ಕಿಶನ್​ ಹೆಗ್ಡೆ, ವಿ.ಜಿ. ಶೆಟ್ಟಿ, ಪ್ರೊ. ಕೆ.ಸದಾಶಿವ ರಾವ್​, ನಾರಾಯಣ ಎಂ. ಹೆಗಡೆ ಇತರರಿದ್ದರು.
Published on

* ಸಂಸ್ಥೆಯ ಅಧ್ಯಕ್ಷ ಡಾ. ರಂಜನ್​ ಆರ್​. ಪೈ ಘೋಷಣೆ

* ಉಡುಪಿ ಯಕ್ಷಗಾನ ಕಲಾರಂಗದ ಕಾರ್ಯಕ್ಕೆ ಶ್ಲಾಘನೆ

ಉಡುಪಿ: ಯಕ್ಷಗಾನ ಕಲಾರಂಗ ಸಂಸ್ಥೆಯು ಯಾವುದೇ ಆಡಂಬರವಿಲ್ಲದೆ ಸಮಾಜಸೇವೆಯಲ್ಲೂ ನಿರತವಾಗಿದೆ. ಮನೆಯಿಲ್ಲದ ಬಡ ವಿದ್ಯಾರ್ಥಿಗಳಿಗೆ ವಿದ್ಯಾಪೋಷಕ್​ ಯೋಜನೆಯಡಿ ದಾನಿಗಳ ಸಹಕಾರದಲ್ಲಿ ಮನೆ ನಿರ್ಮಿಸಿ ಕೊಡುತ್ತಿರುವ ಕಾರ್ಯ ಶ್ಲಾಘನೀಯ. ಅವರ ಕಾರ್ಯಕ್ಕೆ ಪ್ರೋತ್ಸಾಹದಾಯಕವಾಗಿ ಮಾಹೆ ವತಿಯಿಂದ ಪ್ರತಿವರ್ಷ 10 ಮನೆಗಳಂತೆ 50 ಮನೆಗಳ ಪ್ರಾಯೋಜಕತ್ವ ವಹಿಸುವುದಾಗಿ ಮಾಹೆ ವಿಶ್ವವಿದ್ಯಾಲಯದ ಅಧ್ಯಕ್ಷ ಡಾ. ರಂಜನ್​ ಆರ್​. ಪೈ ಘೋಷಿಸಿದರು.
ಉಡುಪಿಯ ಕುಂಜಬೆಟ್ಟುವಿನಲ್ಲಿರುವ ಯಕ್ಷಗಾನ ಕಲಾರಂಗದ ನೂತನ ಐವೈಸಿ ಸಭಾಂಗಣಕ್ಕೆ ಮಂಗಳವಾರ (ಜೂ.16) ಭೇಟಿ ನೀಡಿ ಇಡೀ ಕಟ್ಟಡ ವೀಕ್ಷಿಸಿದರು. ಸಭಾಭವನದಲ್ಲಿ ಸಂಸ್ಥೆಯ ಕಾರ್ಯಚಟುವಟಿಕೆಗಳ ಸಾಕ್ಷ್ಯಚಿತ್ರ ವೀಸಿ, ಮೆಚ್ಚುಗೆ ವ್ಯಕ್ತಪಡಿಸಿ ಮಾತನಾಡಿದರು. 
ಕರ್ತೃತ್ವ ಶಕ್ತಿ ಮಾದರಿ
ಕಾರ್ಯದರ್ಶಿ ಮುರಳಿ ಕಡೆಕಾರ್​ ಮಾತನಾಡಿ, ಡಾ. ಟಿ. ಎಂ.ಎ. ಪೈ ಅವರಿಂದ ಆರಂಭಗೊಂಡ ಮಣಿಪಾಲ ಆಸ್ಪತ್ರೆ ಮತ್ತು ಶಿಕ್ಷಣ ಸಂಸ್ಥೆಗಳು ಡಾ. ರಾಮದಾಸ್​ ಪೈ ಅವರಿಂದ ಅಭಿವೃದ್ಧಿ ಹೊಂದಿತು. ಡಾ. ರಂಜನ್​ ಪೈ ಅವಧಿಯಲ್ಲಿ ಜಾಗತಿಕವಾಗಿ ವಿಸ್ತರಿಸಿಕೊಂಡಿವೆ. ಅವರ ಕರ್ತೃತ್ವ ಶಕ್ತಿ, ಸರಳತೆ, ಔದಾರ್ಯ ನಮಗೆಲ್ಲ ಮಾದರಿಯಾಗಿದೆ ಎಂದರು. ಐವೈಸಿ ಕಟ್ಟಡದಲ್ಲಿ ಇನ್ನೂ ಆಗಬೇಕಾಗಿರುವ ಕಾಮಗಾರಿಯ ಕುರಿತು ಸಭೆಯ ಗಮನಕ್ಕೆ ತಂದರು.
ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ್​ ರಾವ್​ ಸ್ವಾಗತಿಸಿ, ಡಾ. ರಂಜನ್​ ಪೈ ಅವರು ಸಂಸ್ಥೆಗೆ ಜಾಗ ಖರೀದಿಸಲು ಮತ್ತು ಕಟ್ಟಡ ನಿರ್ವಹಣೆಗೆ ಈಗಾಗಲೇ ನೀಡಿದ ಉದಾರ ಆರ್ಥಿಕ ನೆರವಿಗೆ ಕೃತಜ್ಞತೆ ಸಲ್ಲಿಸಿದರು.
ಸಂಸ್ಥೆಯ ನಿಕಟಪೂರ್ವ ಅಧ್ಯಕ್ಷ ಕೆ. ಗಣೇಶ್​ ರಾವ್​, ಉಪಾಧ್ಯಕ್ಷರಾದ ಪಿ. ಕಿಶನ್​ ಹೆಗ್ಡೆ, ವಿ.ಜಿ. ಶೆಟ್ಟಿ, ಕೋಶಾಧಿಕಾರಿ ಪ್ರೊ. ಕೆ.ಸದಾಶಿವ ರಾವ್​, ಸಹಕಾರ್ಯದರ್ಶಿಗಳಾದ ನಾರಾಯಣ ಎಂ. ಹೆಗಡೆ, ವಿದ್ಯಾಪ್ರಸಾದ್​, ಸದಸ್ಯರಾದ ಯು. ವಿಶ್ವನಾಥ್​ ಶೆಣೈ, ಯು.ಎಸ್​. ರಾಜಗೋಪಾಲ್​ ಆಚಾರ್ಯ, ಪ್ರೊ. ಎಂ.ಎಲ್​. ಸಾಮಗ, ಭುವನ ಪ್ರಸಾದ್​ ಹೆಗ್ಡೆ, ವಿಜಯಕುಮಾರ್​ ಮುದ್ರಾಡಿ, ಪ್ರೊ. ಶಂಕರ್​, ಅನಂತರಾಜ ಉಪಾಧ್ಯ, ಡಾ. ರಾಜೇಶ್​ ನಾವುಡ, ಗಣೇಶ್​  ಬ್ರಹ್ಮಾವರ, ಕುಮಾರಿ ಸಂಸ್ಕೃತಿ ಉಪಸ್ಥಿತರಿದ್ದರು.
"

ಆರೋಗ್ಯ ಕ್ಷೇತ್ರ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಮಾಹೆ ನಿರಂತರ ಆರ್ಥಿಕ ನೆರವು ನೀಡುತ್ತ ಬಂದಿದೆ. ಯಕ್ಷಗಾನ ಕಲಾರಂಗ ಕೇವಲ ಕಲೆಯ ಅಭಿವದ್ಧಿಗೆ ಸೀಮಿತವಾಗಿರದೆ ಸಾಮಾಜಿಕ ಸೇವೆಯನ್ನೂ ಮಾಡುತ್ತಿರುವುದು ವಿಶೇಷ. ಸಂಸ್ಥೆಯ ಕಾರ್ಯಚಟುವಟಿಕೆಗಳಿಗೆ ಮಾಹೆ ಸದಾ ಬೆಂಬಲವಾಗಿ ನಿಲ್ಲುತ್ತದೆ.

— ಡಾ. ಎಚ್​. ಎಸ್​. ಬಲ್ಲಾಳ. ಮಾಹೆ ಸಹಕುಲಾಧಿಪತಿ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net