ವಿದ್ಯಾಪೋಷಕ್​ ಯೋಜನೆ ದೇಶಕ್ಕೆ ಮಾದರಿ

ಉಡುಪಿಯ ಯಕ್ಷಗಾನ ಕಲಾರಂಗದ 91ನೇ ಮನೆಯನ್ನು ವಿದ್ಯಾಪೋಷಕ್​ನ ವಿದ್ಯಾರ್ಥಿ ನಿಖಿಲ್​ ಎಸ್​. ಕುಟುಂಬಕ್ಕೆ ಸರಸ್ವತಿ ಹೊಳ್ಳ ಹಸ್ತಾಂತರಿಸಿದರು. ಕಿರಣಕುಮಾರ್​ ಕೊಡ್ಗಿ, ಎಂ. ಗಂಗಾಧರ್​ ರಾವ್​, ಪಿ. ವಾಸುದೇವ್​ಕಾರಂತ, ಡಾ. ಪಿ.ನಾರಾಯಣ, ಡಾ. ಗೀತಾ ಸಾಮಕ್​, ನೀಲಾವರ ಸುರೇಂದ್ರ ಅಡಿಗ, ಮುರಳಿ ಕಡೆಕಾರ್​ ಹಾಗೂ ದಾನಿಗಳು, ವಿದ್ಯಾರ್ಥಿಗಳು ಇದ್ದರು.
ಉಡುಪಿಯ ಯಕ್ಷಗಾನ ಕಲಾರಂಗದ 91ನೇ ಮನೆಯನ್ನು ವಿದ್ಯಾಪೋಷಕ್​ನ ವಿದ್ಯಾರ್ಥಿ ನಿಖಿಲ್​ ಎಸ್​. ಕುಟುಂಬಕ್ಕೆ ಸರಸ್ವತಿ ಹೊಳ್ಳ ಹಸ್ತಾಂತರಿಸಿದರು. ಕಿರಣಕುಮಾರ್​ ಕೊಡ್ಗಿ, ಎಂ. ಗಂಗಾಧರ್​ ರಾವ್​, ಪಿ. ವಾಸುದೇವ್​ಕಾರಂತ, ಡಾ. ಪಿ.ನಾರಾಯಣ, ಡಾ. ಗೀತಾ ಸಾಮಕ್​, ನೀಲಾವರ ಸುರೇಂದ್ರ ಅಡಿಗ, ಮುರಳಿ ಕಡೆಕಾರ್​ ಹಾಗೂ ದಾನಿಗಳು, ವಿದ್ಯಾರ್ಥಿಗಳು ಇದ್ದರು.
Published on

* ಕುಂದಾಪುರ ಶಾಸಕ ಕಿರಣಕುಮಾರ್​ ಕೊಡ್ಗಿ ಶ್ಲಾಘನೆ

* ಯಕ್ಷಗಾನ ಕಲಾರಂಗದ 91ನೇ ಮನೆ ಹಸ್ತಾಂತರ

ಉಡುಪಿ: ಫಲಾನುಭವಿ ವಿದ್ಯಾರ್ಥಿಗಳ ಆಯ್ಕೆಯಲ್ಲಿ ಕಲಾರಂಗವು ಯಾರ ಮುಲಾಜಿಗೂ ಒಳಗಾಗದೆ ಸ್ವತಹ ಮನೆ ಭೇಟಿ ಕಾರ್ಯ ನಡೆಸಿ ನಿರ್ಣಯಿಸುತ್ತದೆ. ಕಷ್ಟದಲ್ಲಿರುವ ವಿದ್ಯಾರ್ಥಿಗಳ ಅಗತ್ಯಕ್ಕೆ ಕೂಡಲೇ ಸ್ಪಂದಿಸುವ ಇಂತಹ ಸಂಸ್ಥೆಯನ್ನು ನಾನು ಎಲ್ಲೂ ಕಂಡಿಲ್ಲ. ಯಕ್ಷಗಾನ ಕಲಾರಂಗದ ವಿದ್ಯಾಪೋಷಕ್​ ಯೋಜನೆಯು ದೇಶಕ್ಕೇ ಮಾದರಿಯಾಗಿದೆ ಎಂದು ಕುಂದಾಪುರ ಶಾಸಕ ಕಿರಣಕುಮಾರ್​ ಕೊಡ್ಗಿ ಶ್ಲಾಘಿಸಿದರು.
ಕುಂದಾಪುರ ತಾಲೂಕಿನ ಜಪ್ತಿಯ ಕುಸುಮಾ ಮತ್ತು ದಿ. ಶಿವರಾಮ ಇವರ ಪುತ್ರ, ಯಕ್ಷಗಾನ ಕಲಾರಂಗ ವಿದ್ಯಾಪೋಷಕ್​ನ ಪ್ರಥಮ ಪಿಯುಸಿ ವಿದ್ಯಾರ್ಥಿ ನಿಖಿಲ್​ ಎಸ್​. ಎಂಬಾತನಿಗೆ ಪಾಂಡೇಶ್ವರ ಮಂಜುನಾಥ್​ ಹೊಳ್ಳ ಸ್ಮರಣಾರ್ಥ ಹಾಗೂ ಸರಸ್ವತಿ ಹೊಳ್ಳ ಗೌರವಾರ್ಥ ಅವರ ಪುತ್ರಿಯರ ಪ್ರಾಯೋಜಕತ್ವದಲ್ಲಿ 7 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ಸಂಸ್ಥೆಯ 91ನೇ ಮನೆ 'ಮಂಜುನಾಥ ನಿಲಯ' ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಂತಸದ ಕಾರ್ಯ

ಶಿವಮೊಗ್ಗದ ರೋಟರಿ ಮಾಜಿ ಗವರ್ನರ್​ ಡಾ. ಪಿ.ನಾರಾಯಣ ಮಾತನಾಡಿ, ಕಲಾರಂಗದ ಚತುಮುರ್ಖ ಸಾಧನೆ ಕಂಡು ಬೆರಗಾಗಿದ್ದೇನೆ. ಯಕ್ಷಗಾನ ಕಲಾವಿದರು ಮತ್ತು ವಿದ್ಯಾರ್ಥಿಗಳ ಸಂಕಷ್ಟಕ್ಕೆ ಸಹಾಯ ಮಾಡುವ ಇಂತಹ ಇನ್ನೊಂದು ಸಂಸ್ಥೆಯಿಲ್ಲ. ನನ್ನ ಅಣ್ಣನ ಹೆಣ್ಣು ಮಕ್ಕಳು ಶೈಕ್ಷಣಿಕ ಸಾಧನೆಯೊಂದಿಗೆ ಒಳ್ಳೆಯ ಉದ್ಯೋಗ ಪಡೆದು ಈ ರೀತಿ ಸಮಾಜಮುಖಿ ಕಾರ್ಯ ಮಾಡುತ್ತಿರುವುದು ಸಂತಸ ತಂದಿದೆ ಎಂದರು.

ಬಡವರಿಗೆ ಸಹಕಾರ

ಡಾ. ಗೀತಾ ಸಾಮಕ್​ ಮಾತನಾಡಿ, ನಾವು ಐವರು ಹೆಣ್ಣುಮಕ್ಕಳಿದ್ದು ನಮಗೆ ತಂದೆಯೇ ಸ್ಫೂರ್ತಿ. ದೃಷ್ಟಿ ತೊಂದರೆ ನಡುವೆಯೂ ಕೃಷಿ ಕಾರ್ಯ, ಸಮಾಜಪರ ಕಾಳಜಿ ನೋಡಿದರೆ ಅಚ್ಚರಿಯಾಗುತ್ತದೆ. ಆ ಕಾಲಕ್ಕೆ ಹೊಸ ತಂತ್ರಜ್ಞಾನ ಅಳವಡಿಸಿಕೊಂಡ ಮಾದರಿ ಕೃಷಿಕರಾಗಿದ್ದರು. ಹತ್ತಕ್ಕೂ ಹೆಚ್ಚು ಮನೆಗಳನ್ನು ನಿರ್ಮಿಸಿಕೊಟ್ಟು ಬಡವರಿಗೆ ಆಸರೆಯಾಗಿದ್ದರು. ನಾವು ಶಿಕ್ಷಣ ಪಡೆದು ಉದ್ಯೋಗಸ್ಥರಾಗುವಲ್ಲಿ ಅಮ್ಮನ ಕಾಳಜಿಯೂ ಅಷ್ಟೇ ಇತ್ತು. ಅಮ್ಮನೇ ಈ ಮನೆಯನ್ನು ಉದ್ಘಾಟಿಸಿರುವುದು ಪುತ್ರಿಯರಾದ ನಮಗೆ ಧನ್ಯತೆ ತಂದಿದೆ ಎಂದರು.
ಪಿ. ವಾಸುದೇವ್​ಕಾರಂತ ಅವರು ಕಲಾರಂಗದ ಕೆಲಸ, ಸಾಧನೆ ವಿವರಿಸಿದರು. ಉಷಾ ಎನ್​. ಹೆಬ್ಬಾರ್​, ಡಾ. ಗಣೇಶ್​ ಮಧ್ಯಸ್ಥ, ಕಿಶೋರ್​ ಶೆಟ್ಟಿ, ಸಂಧ್ಯಾ ಶಮಾರ್, ರೇಖಾ ಮಕ್ಕಿತ್ತಾಯ, ಡಾ.ತಾರಾ ಕಾರಂತ, ಡಾ. ಎಸ್​.ಜಿ. ಸಾಮಕ್​, ನಾಗರಾಜ ಹೆಬ್ಬಾರ್​, ಅರವಿಂದ ಶರ್ಮಾ, ಡಾ.ಕೃಷ್ಣಮೂರ್ತಿ ಮಕ್ಕಿತ್ತಾಯ, ಡಾ. ಕೃಷ್ಣ ಕಿರಣ್​ ಕಾರಂತ, ಯಶೋದಾ ಹೊಳ್ಳ ಹಾಗೂ ಸರಸ್ವತಿ ಹೊಳ್ಳ ಅವರ ಮೊಮ್ಮಕ್ಕಳು ಉಪಸ್ಥಿತರಿದ್ದರು.
ಸಂಸ್ಥೆಯ ಸದಸ್ಯರಾದ ಯು.ಎಸ್​. ರಾಜಗೋಪಾಲ ಆಚಾರ್ಯ, ಭುವನಪ್ರಸಾದ್​ ಹೆಗ್ಡೆ, ಅನಂತರಾಜ್​ ಉಪಾಧ್ಯಾಯ, ಜಯರಾಮ ಪಡಿಯಾರ್, ರಾಮಚಂದ್ರ ಅಡಿಗ, ನಾಗರಾಜ್​ ಹೆಗಡೆ, ಬಿದ್ಕಲ್​ ಕಟ್ಟೆ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಕರುಣಾಕರ್​ ಶೆಟ್ಟಿ ಇತರರು ಪಾಲ್ಗೊಂಡಿದ್ದರು.
ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ್​ ರಾವ್​ ಸ್ವಾಗತಿಸಿದರು. ನಾರಾಯಣ ಎಂ. ಹೆಗಡೆ ವಂದಿಸಿದರು. ಕಾರ್ಯದರ್ಶಿ ಮುರಳಿ ಕಡೆಕಾರ್​ ಕಾರ್ಯಕ್ರಮ ನಿರೂಪಿಸಿದರು.
"

ಯಕ್ಷಗಾನ ಕಲಾರಂಗದ ಪ್ರತಿಯೊಂದು ಕಾರ್ಯಕ್ರಮವೂ ಅನನ್ಯವಾಗಿರುತ್ತದೆ. ಸದಾ ಕ್ರಿಯಾಶೀಲವಾಗಿರುವ ಈ ಸಂಸ್ಥೆಯ ಕೆಲಸವೇ ಸಮಾಜಕ್ಕೆ ದೊಡ್ಡ ಸಂದೇಶ. ಯಕ್ಷಗಾನ ಕಲಾವಿದರು ಹಾಗೂ ಅವರ ಮಕ್ಕಳಿಗೆ ಆಸರೆ-ಆಶ್ರಯದ ವ್ಯವಸ್ಥೆ ಶ್ರೇಷ್ಠ ಕಾರ್ಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net