ಅಭಿವೃದ್ಧಿಯಲ್ಲಿರಲಿ ಮಹಿಳಾ-ಯುವ ಸಬಲೀಕರಣ

ಉಡುಪಿಯಲ್ಲಿ ಆಯೋಜಿಸಿದ್ದ 'ಉಡುಪಿ ವಿಷನ್​ 20-30-35' ಸಭೆಯಲ್ಲಿ ಪ್ರತೀಕ್​ ಬಾಯಲ್​ ಮಾತನಾಡಿದರು. ಅಮ್ಮುಂಜೆ ಪ್ರಭಾಕರ್​ ನಾಯಕ್​, ಭಗವಾನ್​ ದಾಸ್​, ಸುಧೀರ್​ ಶೆಟ್ಟಿ, ಪ್ರಸಾದ್​ ಶೆಟ್ಟಿ, ಕೋಟ ಶ್ರೀನಿವಾಸ ಪೂಜಾರಿ ಹಾಗೂ ಜಿಲ್ಲೆಯ ಹಾಲಿ-ಮಾಜಿ ಶಾಸಕರು ಇದ್ದರು.
ಉಡುಪಿಯಲ್ಲಿ ಆಯೋಜಿಸಿದ್ದ 'ಉಡುಪಿ ವಿಷನ್​ 20-30-35' ಸಭೆಯಲ್ಲಿ ಪ್ರತೀಕ್​ ಬಾಯಲ್​ ಮಾತನಾಡಿದರು. ಅಮ್ಮುಂಜೆ ಪ್ರಭಾಕರ್​ ನಾಯಕ್​, ಭಗವಾನ್​ ದಾಸ್​, ಸುಧೀರ್​ ಶೆಟ್ಟಿ, ಪ್ರಸಾದ್​ ಶೆಟ್ಟಿ, ಕೋಟ ಶ್ರೀನಿವಾಸ ಪೂಜಾರಿ ಹಾಗೂ ಜಿಲ್ಲೆಯ ಹಾಲಿ-ಮಾಜಿ ಶಾಸಕರು ಇದ್ದರು.
Published on

* ಜಿಪಂ ಸಿಇಒ ಪ್ರತೀಕ್​ ಬಾಯಲ್​ ಆಶಯ

* 'ಉಡುಪಿ ವಿಷನ್​ 20-30-35' ಚಳವಳಿಗೆ ಚಾಲನೆ

ಉಡುಪಿ: ಯಾವುದೇ ಕ್ಷೇತ್ರ ಅಭಿವೃದ್ಧಿಯಾಗಬೇಕಾದರೆ ಅನೇಕ ಸವಾಲುಗಳನ್ನೂ ಎದುರಿಸಬೇಕಾಗುತ್ತದೆ. ಎಲ್ಲರೂ ಒಟ್ಟಾಗಿ ಒಳಿತಿಗಾಗಿ ಮುಂದಡಿಯಿಟ್ಟಾಗ ತೊಡಕುಗಳನ್ನೆಲ್ಲ ನಿವಾರಿಸಿಕೊಂಡು ಯಶಸ್ಸು ಕಾಣಬಹುದು. ಉಡುಪಿಯು ಜಾಗತಿಕವಾಗಿ ಗಮನ ಸೆಳೆಯಬಲ್ಲ ತಾಣವಾಗಿದ್ದು ಇಲ್ಲಿನ ಸಮುದ್ರ, ಪಶ್ಚಿಮ ಘಟ್ಟ ಪ್ರದೇಶಗಳು ಪ್ರವಾಸೋದ್ಯಮಕ್ಕೆ ಪೂರಕವಾಗಿವೆ. ಗ್ರಾಮೀಣ ಭಾಗವೂ ಸಶಕ್ತವಾಗುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯ ಆಗಬೇಕಿದೆ. ಆ ನಿಟ್ಟಿನಲ್ಲಿ ಹೊಸ ವಿಚಾರಧಾರೆಗಳೊಂದಿಗೆ 'ವಿಷನ್​ ಉಡುಪಿ'ಯು ಜಿಲ್ಲೆಯ ಸಂಸ್ಕೃತಿ ಉಳಿಸಿಕೊಂಡು ಮಹಿಳಾ&ಯುವ ಸಬಲೀಕರಣ ಚಳವಳಿಗೆ ವೇದಿಕೆಯಾಗಲಿ ಎಂದು ಜಿಪಂ ಸಿಇಒ ಪ್ರತೀಕ್​ ಬಾಯಲ್​ ಆಶಿಸಿದರು. 
ಉಡುಪಿಯ ಕಿದಿಯೂರು ಹೋಟೆಲ್​ನ ಶೇಷಶಯನ ಸಭಾಂಗಣದಲ್ಲಿ ಉಡುಪಿ ಚೇಂಬರ್​ ಆಫ್​ ಕಾಮರ್ಸ್​ ಆ್ಯಂಡ್​ ಇಂಡಸ್ಟ್ರೀ ವತಿಯಿಂದ ಹಾಗೂ ಅಸೋಸಿಯೇಷನ್​ ಆಫ್​ ಕನ್ಸಲ್ಟಿಂಗ್​ ಸಿವಿಲ್​ ಇಂಜಿನಿಯರ್ಸ್​ ಆ್ಯಂಡ್​ ಆರ್ಕಿಟೆಕ್ಟ್​ ಮತ್ತು ಬಿಲ್ಡರ್ಸ್​ ಅಸೋಸಿಯೇಷನ್​ ಆಫ್​ ಇಂಡಿಯಾ ಉಡುಪಿ ಇವರ ಸಹಕಾರದಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ 'ಉಡುಪಿ ವಿಷನ್​ 20-30-35' ಎಂಬ ಚಿಂತನ-ಮಂಥನ ಚಳವಳಿಗೆ ಚಾಲನೆ ನೀಡಿ ಮಾತನಾಡಿದರು.
ಚೆಂಬರ್​ ಆಫ್​ ಕಾಮರ್ಸ್​ನ ಅಧ್ಯಕ್ಷ ಅಮ್ಮುಂಜೆ ಪ್ರಭಾಕರ್​ ನಾಯಕ್​, ಎಸಿಸಿಇಎ ಅಧ್ಯಕ್ಷ ಭಗವಾನ್​ ದಾಸ್​, ಕ್ರೆಡೈ ಅಧ್ಯಕ್ಷ ಸುಧೀರ್​ ಶೆಟ್ಟಿ, ಬಿಲ್ಡರ್ಸ್​ ಅಸೋಸಿಯೇಷನ್​ ಅಧ್ಯಕ್ಷ ಪ್ರಸಾದ್​ ಶೆಟ್ಟಿ ಉಪಸ್ಥಿತರಿದ್ದರು.
ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಸುನೀಲ್​ ಕುಮಾರ್​, ಯಶ್​ಪಾಲ್​ ಸುವರ್ಣ, ಗುರುರಾಜ ಗಂಟಿಹೊಳೆ, ಕಿರಣ್​ ಕುಮಾರ್​ ಕೊಡ್ಗಿ, ಗುರ್ಮೆ ಸುರೇಶ್​ ಶೆಟ್ಟಿ , ವಿಪ ಸದಸ್ಯ ಧನಂಜಯ್​ ಸರ್ಜಿ, ಮಾಜಿ ಸಂಸದ ಜಯಪ್ರಕಾಶ್​ ಹೆಗ್ಡೆ, ಮಾಜಿ ಸಚಿವ ವಿನಯ ಕುಮಾರ್​ ಸೊರಕೆ, ಮುನಿಯಾಲು ಉದಯ ಕುಮಾರ್​ ಶೆಟ್ಟಿ, ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ., ಅಪರ ಜಿಲ್ಲಾಧಿಕಾರಿ ಆಬೀದ್​ ಗದ್ಯಾಳ್​, ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ.ಗಫೂರ್​, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ್​ ಹೇರೂರು, ಉದ್ಯಮಿ ಪ್ರಸಾದ್​ ರಾಜ್​ ಕಾಂಚನ್​ ಪಾಲ್ಗೊಂಡಿದ್ದರು.
ಸಮನ್ವಯಕಾರರಾಗಿ ಜಯಕರ ಶೆಟ್ಟಿ ಇಂದ್ರಾಳಿ, ಡಾ. ಎ.ಪಿ.ಆಚಾರ್​, ಡಾ. ಶಿವಾನಂದ ನಾಯಕ್​, ಸುರೇಂದ್ರ ನಾಯಕ್​, ಪ್ರಸಾದ್​ ಉಪಾಧ್ಯ, ಕಿರಣ್​ಕುಮಾರ್​ ಸಹಕರಿಸಿದರು.
ಸಭೆಯ ಆರಂಭದಲ್ಲಿ ವಂದೇಮಾತರಂ ಗೀತೆ ಪ್ರಸ್ತುತಪಡಿಸಲಾಯಿತು. ಎಸಿಸಿಇಎ ಮಾಜಿ ಅಧ್ಯಕ್ಷ ಯೋಗೀಶ್ಚಂದ್ರ ದಾರಾ ಸ್ವಾಗತಿಸಿದರು. ಚೇಂಬರ್​ ಆಫ್​ ಕಾಮರ್ಸ್ ನ ಗೌರವ ಕಾರ್ಯದರ್ಶಿ ಹಾಗೂ ಮುಖ್ಯ ಸಂಯೋಜಕ ಡಾ. ವಿಜಯೇಂದ್ರ ವಿ. ರಾವ್​ ಕಾರ್ಯಕ್ರಮ ನಿರೂಪಿಸಿದರು.

ವಿವಿಧ ಕ್ಷೇತ್ರಗಳ ಪ್ರಮುಖರ ಉಪಸ್ಥಿತಿ

ಸಭೆಯಲ್ಲಿ ಸರ್ಕಾರಿ ಆಡಳಿತಾಧಿಕಾರಿಗಳು, ವಿವಿಧ ಇಲಾಖೆಯ ಪರಿಣತರು, ವಾಸ್ತುಶಿಲ್ಪಿಗಳು, ಇಂಜಿನಿಯರ್ಸ್​, ಉದ್ಯಮಿಗಳು, ಶಿಕ್ಷಣ ತಜ್ಞರು, ವೈದ್ಯರು, ಪರಿಸರವಾದಿಗಳು, ಯುವಜನರು, ಮಹಿಳಾ ಪ್ರತಿನಿಧಿಗಳು ಹಾಗೂ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಪಾಲ್ಗೊಂಡಿದ್ದರು. ಉಡುಪಿ ಜಿಲ್ಲೆಯ ಅಭಿವೃದ್ಧಿಗೆ ಕೈಗೊಳ್ಳಬಹುದಾದ ಹಾಗೂ ಈ ಹಿಂದೆ ಆರಂಭಗೊಂಡು ಕುಂಠಿತಗೊಂಡ ವಿವಿಧ ಅಭಿವೃದ್ಧಿ ಕಾರ್ಯಗಳ ಕುರಿತಾಗಿಯೂ ಹಲವರು ಮಾತನಾಡಿದರು. 
"

ಸ್ವಸಹಾಯ ಗುಂಪುಗಳನ್ನು ಬಲಪಡಿಸುವುದರೊಂದಿಗೆ ಆಗಿರುವ ಅಭಿವೃದ್ಧಿ ಕಾರ್ಯ ಮುಂದಿನ ಪೀಳಿಗೆಗೂ ಅನುಕೂಲ ಆಗುವಂತಿರಬೇಕು. ಹೂಡಿಕೆದಾರರನ್ನು ಆಕರ್ಷಿಸಲು ಸಹೋದರತ್ವ ಮತ್ತು ಪರಸ್ಪರ ಗೌರವ ಭಾವ ಅಗತ್ಯ. ಇದು ಸರ್ಕಾರದ ಯಾವುದೇ ಯೋಜನೆಯಲ್ಲ. ಉಡುಪಿಯ ಅಭಿವೃದ್ಧಿಯಲ್ಲಿ ಶಾಂತಿ ಮತ್ತು ಸೌಹಾರ್ದತೆ ಅಗತ್ಯ. ಕೇವಲ ಕನಸು ಕಾಣುವುದಲ್ಲ. ಅದು ಕಾರ್ಯಗತ ಆಗುವಂತಿರಬೇಕು.

— ಪ್ರತೀಕ್​ ಬಾಯಲ್​. ಜಿಪಂ ಸಿಇಒ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net