ಕನ್ನಡಿಗರನ್ನೆಲ್ಲ ಸಮ್ಮೇಳನ ಒಗ್ಗೂಡಿಸಲಿ

ಉಡುಪಿಯ ಶಾಸಕರ ಭವನದಲ್ಲಿ ತಾಲೂಕು ಕಸಾಪ ಸಮ್ಮೇಳನದ ಪ್ರಚಾರ ಭಿತ್ತಿಚಿತ್ರವನ್ನು ಯಶ್​ಪಾಲ್​ ಸುವರ್ಣ ಬಿಡುಗಡೆ ಮಾಡಿದರು. ರವಿರಾಜ್​ ಎಚ್​.ಪಿ., ರಂಜಿನಿ ವಸಂತ್​, ಸತೀಶ್​ ಕೊಡವೂರು, ರಾಘವೇಂದ್ರ ಪ್ರಭು ಕರ್ವಾಲು, ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ, ವಸಂತ್​, ಅನಿತಾ ಸಿಕ್ವೇರಾ ಇತರರಿದ್ದರು.

Published on

* ಉಡುಪಿ ಶಾಸಕ ಯಶ್​ಪಾಲ್​ ಸುವರ್ಣ ಆಶಯ

* ಕಸಾಪ ಸಮ್ಮೇಳನದ ಪ್ರಚಾರ ಭಿತ್ತಿಚಿತ್ರ ಬಿಡುಗಡೆ

ಉಡುಪಿ: ಕನ್ನಡ ಭಾಷೆಯ ರಕ್ಷಣೆ, ಉಳಿವು ಮತ್ತು ಜಾಗೃತಿ ಮೂಡಿಸುವಲ್ಲಿ ಉಡುಪಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್​ ನಿರಂತರ ಕಾರ್ಯಕ್ರಮ ನಡೆಸುತ್ತಿರುವುದು ಸಂತಸದ ವಿಚಾರ. ಇದೀಗ  ಭಾಸ್ಕರಾನಂದ ಕುಮಾರ್​ ಅವರ ಸರ್ವಾಧ್ಯಕ್ಷತೆಯಲ್ಲಿ ಮೇ 3ರಂದು ನಡೆಯಲಿರುವ ಉಡುಪಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಯಶ ಕಾಣಲಿ. ಕಾರ್ಯಕ್ರಮವು ಹೊಸತನದೊಂದಿಗೆ ಕನ್ನಡಿಗರನ್ನು ಇನ್ನಷ್ಟು ಒಗ್ಗೂಡಿಸಲಿ ಎಂದು ಶಾಸಕ ಯಶ್​ಪಾಲ್​ ಸುವರ್ಣ ಆಶಯ ವ್ಯಕ್ತಪಡಿಸಿದರು.
ಉಡುಪಿಯ ಶಾಸಕರ ಭವನದಲ್ಲಿ ಉಡುಪಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್​ನ 16ನೇ ಸಮ್ಮೇಳನದ ಪ್ರಚಾರ ಭಿತ್ತಿಚಿತ್ರ ಬಿಡುಗಡೆಗೊಳಿಸಿ ಮಾತನಾಡಿದರು.
ಉಡುಪಿ ತಾಲೂಕು ಕಸಾಪ ಘಟಕದ ಅಧ್ಯಕ್ಷ ರವಿರಾಜ್​ ಎಚ್​.ಪಿ., ಗೌರವ ಕಾರ್ಯದರ್ಶಿ ರಂಜಿನಿ ವಸಂತ್​, ಸಮ್ಮೇಳನ ಸಮಿತಿಯ ಪ್ರಧಾನ ಕಾರ್ಯದರ್ಶಿ ಸತೀಶ್​ ಕೊಡವೂರು, ಸಂಘಟನಾ ಕಾರ್ಯದರ್ಶಿ ರಾಘವೇಂದ್ರ ಪ್ರಭು ಕರ್ವಾಲು, ಸಾಮಾಜಿಕ ಜಾಲತಾಣದ ಮುಖ್ಯಸ್ಥ ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ, ಸಾಂಸ್ಕೃತಿಕ ಕಾರ್ಯದರ್ಶಿ ವಸಂತ್​, ಮಹಿಳಾ ಪ್ರತಿನಿಧಿ ಅನಿತಾ ಸಿಕ್ವೇರಾ, ಸದಸ್ಯರಾದ ದೀಪಾ ಕರ್ಕಿ, ಪ್ರಸನ್ನ ಕುಮಾರ್​ ಹಿರೇಮಠ ಇತರರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net