'ಮಕ್ಕಳ ಕಳ್ಳರು ಮುಸುಕು ಹಾಕಿಕೊಂಡು ಅಲೆವೂರು, ಬೆಳ್ಳೆ, ಕುಂತಳನಗರ ವ್ಯಾಪ್ತಿಯಲ್ಲಿ ತಿರುಗುತ್ತಿದ್ದಾರೆ. ದಯವಿಟ್ಟು ಮಕ್ಕಳು ಬೆಳಗ್ಗೆ ರಿಕ್ಷಾ ಹತ್ತುವಾಗ ಮತ್ತು ಸಾಯಂಕಾಲ ಇಳಿಯುವಾಗ ಪಾಲಕರು ಕಡ್ಡಾಯವಾಗಿ ಇರಲೇಬೇಕು. ಮಕ್ಕಳನ್ನು ಜೋಪಾನವಾಗಿ ಕಾಪಾಡಿಕೊಳ್ಳುವುದು ನಮ್ಮ ನಿಮ್ಮೆಲ್ಲರ ಜವಾಬ್ದಾರಿ. ದಯಮಾಡಿ ಎಲ್ಲ ಪಾಲಕರು ಗಮನಹರಿಸಿ' ಎಂಬ ಒಕ್ಕಣೆ ಇರುವ ಪೋಸ್ಟ್ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗುತ್ತಿದೆ.