ಉಡುಪಿ ಶಂಕರಪುರ ಮಲ್ಲಿಗೆ ದರ ಭಾರಿ ಏರಿಕೆ

ಉಡುಪಿಯ ಶಂಕರಪುರ ಮಲ್ಲಿಗೆ.
ಉಡುಪಿಯ ಶಂಕರಪುರ ಮಲ್ಲಿಗೆ.
Published on: 

* ಶರನ್ನವರಾತ್ರಿ ಹಬ್ಬ ಆರಂಭ ಹಿನ್ನೆಲೆ

* ಅಟ್ಟೆಗೆ 1,600ರೂ. ನಿಗದಿ

ಉಡುಪಿ: ಗಣೇಶೋತ್ಸವದ ಬಳಿಕ ಯಾವುದೇ ಹಬ್ಬದ ಆಚರಣೆ ಇಲ್ಲದ್ದರಿಂದ ಹಾಗೂ ಪಿತೃಪಕ್ಷದ ಹಿನ್ನಲೆಯಲ್ಲಿ ದರದಲ್ಲಿ ಭಾರಿ ಕುಸಿತ ಕಂಡಿದ್ದ ಶಂಕರಪುರ ಮಲ್ಲಿಗೆಯ ದರ ಮತ್ತೆ ಗಗನಮುಖಿ ಆಗುತ್ತಿದೆ.

ಮಾರುಕಟ್ಟೆಯಲ್ಲಿ ಇದೀಗ ಮಲ್ಲಿಗೆಯ ದರ ಗ್ರಾಹಕರ ಕೈ ಸುಡುತ್ತಿದ್ದು, ಭಾನುವಾರ (ಅ.12) ಅಟ್ಟೆಗೆ ದಿಢೀರ್​ ಆಗಿ 1,600ರೂ. ನಿಗದಿಯಾಗಿದೆ. ಕಳೆದ 15 ದಿನದ ಹಿಂದೆ ಅಟ್ಟೆಗೆ 240ರಿಂದ 300 ರೂ. ದರವಿದ್ದು ಈಗ ಐದು ಪಟ್ಟು ಹೆಚ್ಚಿನ ಬೆಲೆ ಲಭಿಸಿದೆ.

ಮಲ್ಲಿಗೆ ಬೆಳೆಗಾರರ ಸಂಘದಲ್ಲಿ ಅಟ್ಟೆಗೆ 570 ರೂ. ದರವಿದ್ದು, ನವರಾತ್ರಿ ಆರಂಭಗೊಂಡ ಹಿನ್ನೆಲೆಯಲ್ಲಿ ಮಲ್ಲಿಗೆಗೆ ಬೇಡಿಕೆ ಹೆಚ್ಚತೊಡಗಿದೆ. ದೇವಿ ಆರಾಧನೆಗೆ ಅತ್ಯಗತ್ಯವಾಗಿ ಈ ಹೂವಿನ ಬಳಕೆ ಇರುವುದರಿಂದ ಬೆಲೆಯಲ್ಲಿ ಗಣನೀಯ ಏರಿಕೆ ಕಂಡಿದೆ. ಇನ್ನೂ ದರ ಏರಿಕೆಯ ಸಾಧ್ಯತೆ ಇದೆ.

ಜಾಜಿ ಹೂವಿನ ದರವೂ ಸಹ ಏರಿಕೆಯಾಗಿದ್ದು, ಮಾರುಕಟ್ಟೆಯಲ್ಲಿ ಅಟ್ಟೆಗೆ 800 ರೂ. ದರವಿದೆ. ಬೆಳೆಗಾಗರರ ಸಂಘದಲ್ಲಿ ಅಟ್ಟೆಗೆ 160 ರೂ. ದರವಿದೆ. ದಸರಾ ಹಬ್ಬದ ಹಿನ್ನೆಲೆಯಲ್ಲಿ ಎಲ್ಲ ಹೂವುಗಳ ಬೆಲೆಯಲ್ಲಿ ಏರಿಕೆ ಕಾಣುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net