

ಮನೆಯ ಎಲ್ಲ ಜವಾಬ್ದಾರಿ ಮಹಿಳೆಯ ಮೇಲಿದೆ. ಅವಳು ಸ್ತಬ್ಧಳಾದರೆ ಮನೆಯೇ ಸ್ತಬ್ಧವಾಗುತ್ತದೆ. ಸಮಾಜದಲ್ಲಿ ನಿತ್ಯ ಟಿಸುತ್ತಿರುವ ದೌರ್ಜನ್ಯ, ತೊಂದರೆಗಳು ಅಂತ್ಯಕಂಡಾಗ ಮಾತ್ರ ಮಹಿಳಾ ಸಬಲೀಕರಣ ಸಾಧ್ಯ. ಕುಡುಕ ಪತಿಯಿಂದಾಗಿ ಮಹಿಳೆ ತೊಂದರೆ ಅನುಭವಿಸುತ್ತಿದ್ದು, ಮಕ್ಕಳು ಹಾಗೂ ಕುಟುಂಬ ನಿರ್ವಹಣೆ ದೊಡ್ಡ ಸವಾಲಾಗಿದೆ. ಹಿಂದೆಂದಿಗಿಂತಲೂ ಹೆಚ್ಚು ಮಹಿಳೆ ಸುಶಿತಳಾಗಿದ್ದು, ಸ್ವಯಂ ತೀರ್ಮಾನ ಮಾಡುವಷ್ಟು ಬೆಳೆದಿದ್ದಾಳೆ. ಆದರೆ, ಇತ್ತೀಚೆಗೆ ಡೈವೋರ್ಸ್ ಕೇಸ್ ಹೆಚ್ಚುತ್ತಿರುವುದು ನಿಜಕ್ಕೂ ನೋವಿನ ಸಂಗತಿ.