ರಾಷ್ಟ್ರಧ್ವಜಕ್ಕೆ ಅವಮಾನ; ಕಾಕ್ರೋಚ್​ ವಿರುದ್ಧ ಕೇಸ್​ ದಾಖಲಿಸಿ

ಮಣಿಪಾಲದಲ್ಲಿ ಪ್ರತಿಭಟನೆ ನಡೆಸಿ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ ಕಾಕ್ರೋಜ್​ ಹಾಗೂ ಕಾಂಗ್ರೆಸ್​ ಪದಾಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಉಡುಪಿ ನಗರ ಯುವಮೋರ್ಚಾ ವತಿಯಿಂದ ಎಸ್​ಪಿ ಹರಿರಾಮ್​ ಶಂಕರ್​ ಅವರಿಗೆ ಮನವಿ ನೀಡಲಾಯಿತು. ಶ್ರೀವತ್ಸ, ಪೃಥ್ವಿರಾಜ್​ ಶೆಟ್ಟಿ ಬಿಲ್ಲಾಡಿ, ಅಭಿರಾಜ್​ ಸುವರ್ಣ, ಗಣೇಶ್​, ನಿಖಿಲ್​ ಮಡಿವಾಳ, ಭೂಷಣ್​ ಕುಮಾರ್​ ಇತರರಿದ್ದರು.
ಮಣಿಪಾಲದಲ್ಲಿ ಪ್ರತಿಭಟನೆ ನಡೆಸಿ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ ಕಾಕ್ರೋಜ್​ ಹಾಗೂ ಕಾಂಗ್ರೆಸ್​ ಪದಾಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಉಡುಪಿ ನಗರ ಯುವಮೋರ್ಚಾ ವತಿಯಿಂದ ಎಸ್​ಪಿ ಹರಿರಾಮ್​ ಶಂಕರ್​ ಅವರಿಗೆ ಮನವಿ ನೀಡಲಾಯಿತು. ಶ್ರೀವತ್ಸ, ಪೃಥ್ವಿರಾಜ್​ ಶೆಟ್ಟಿ ಬಿಲ್ಲಾಡಿ, ಅಭಿರಾಜ್​ ಸುವರ್ಣ, ಗಣೇಶ್​, ನಿಖಿಲ್​ ಮಡಿವಾಳ, ಭೂಷಣ್​ ಕುಮಾರ್​ ಇತರರಿದ್ದರು.
Published on

* ಯುವಮೋರ್ಚಾ ಉಡುಪಿ ನಗರಾಧ್ಯಕ್ಷ ಶ್ರೀವತ್ಸ ಆಗ್ರಹ

* ಜಿಲ್ಲಾ ಪೊಲೀಸ್​ ವರಿಷ್ಠ ಹರಿರಾಮ್​ ಶಂಕರ್​ಗೆ ಮನವಿ

ಉಡುಪಿ: ವಿದ್ಯಾರ್ಥಿಗಳ ಮುಖವಾಡ ಧರಿಸಿ ಪ್ರತಿಭಟನೆಯ ನಾಟಕವಾಡಿ, ಯುವಜನತೆಯಲ್ಲಿ ಗೊಂದಲ ಮೂಡಿಸುತ್ತಿರುವ ಹಾಗೂ ದೇಶದಲ್ಲಿ ಅರಾಜಕತೆ ಸೃಷ್ಟಿಸುತ್ತಿರುವ ಕಾಕ್ರೋಜ್​ ಜನತಾ ಪಾರ್ಟಿ (ಸಿಜೆಪಿ) ಮತ್ತು ಕಾಂಗ್ರೆಸ್​ ವಿರುದ್ಧ ಕೇಸ್​ ದಾಖಲಿಸಿ ಎಂದು ಉಡುಪಿ ನಗರ ಯುವಮೋರ್ಚಾ ಅಧ್ಯಕ್ಷ ಶ್ರೀವತ್ಸ ಆಗ್ರಹಿಸಿದರು.
ಉಡುಪಿ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿಗಳ ಕಚೇರಿಗೆ ಯುವಮೋರ್ಚಾ ನಿಯೋಗದೊಂದಿಗೆ ಸೋಮವಾರ (ಜು.27) ತೆರಳಿ ಎಸ್​ಪಿ ಹರಿರಾಮ್​ ಶಂಕರ್​ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದರು.

ಪ್ರಧಾನಿಗೆ ಅವಹೇಳನ

ಮಣಿಪಾಲದಲ್ಲಿ ಜು.24ರಂದು ಸಿಜೆಪಿ ಮತ್ತು ಜಿಲ್ಲಾ ಕಾಂಗ್ರೆಸ್​ನ ಪ್ರಮುಖರು ನಡೆಸಿದ್ದ ಪ್ರತಿಭಟನೆಯಲ್ಲಿ ರಾಷ್ಟ್ರ ಧ್ವಜಕ್ಕೆ ಅವಮಾನ ಮಾಡಿದ್ದಾರೆ. ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸರ ಎದುರಿನಲ್ಲೇ ಅಶಾಂತಿ ಉಂಟುಮಾಡುವ ಕೃತ್ಯ ನಡೆಸಿದ್ದಾರೆ. ಅಲ್ಲದೆ, ಭಾರತದ ಪ್ರಧಾನಿಯ ವಿರುದ್ಧ ಅವಾಚ್ಯ ಹಾಗೂ ಅವಹೇಳನಕಾರಿ ಪದ ಬಳಸಿ ಟೀಕಿಸಿದ್ದಾರೆ. ಇದನ್ನೆಲ್ಲ ಪರಿಗಣಿಸಿ ಕಾನೂನಾತ್ಮಕವಾಗಿ ಅವರೆಲ್ಲರ ವಿರುದ್ಧ ಪ್ರಥಮ ತನಿಖಾ ವರದಿ (ಎ್ಎಫ್ಐಆರ್​) ದಾಖಲಿಸಿ ಎಂದು ಮನವಿ ನೀಡಿದರು.
ಜಿಲ್ಲಾ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಅಭಿರಾಜ್​ ಸುವರ್ಣ, ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಗಣೇಶ್​, ನಗರ ಯುವ ಮೋರ್ಚಾ ಉಪಾಧ್ಯಕ್ಷರಾದ ನಿಖಿಲ್​ ಮಡಿವಾಳ, ಭೂಷಣ್​ ಕುಮಾರ್​, ಶ್ರೀಕಾಂತ್​ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ನಿತಿನ್​ ಪೈ, ಮಣಿಪಾಲದ ಪ್ರಸಾದ್​ ಜಿ., ಕಾರ್ಯದರ್ಶಿ ಹರ್ಷರಾಜ್​, ಧನುಷ್​ ಕಡಿಯಾಳಿ, ದೀಕ್ಷಿತ್​ ಶೆಟ್ಟಿ ಇತರರು ಉಪಸ್ಥಿತರಿದ್ದರು.
"

ಮಣಿಪಾಲದಲ್ಲಿ ಪ್ರತಿಭಟನೆ ನಡೆಸಿದ ಕಾಕ್ರೋಜ್​ ಹಾಗೂ ಕಾಂಗ್ರೆಸ್​ ಪದಾಧಿಕಾರಿಗಳ ವಿರುದ್ಧ ತಕ್ಷಣ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಮಣಿಪಾಲ ಪೊಲೀಸ್​ ಠಾಣೆಯ ಎದುರು ಬಿಜೆಪಿ ಯುವಮೋರ್ಚಾ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು.

— ಪೃಥ್ವಿರಾಜ್​ ಶೆಟ್ಟಿ ಬಿಲ್ಲಾಡಿ. ಉಡುಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net