ಇಎಸ್​ಐ ಚಿಕಿತ್ಸೆಗೆ ರೋಗಿಗಳ ಪರದಾಟ

ಇಎಸ್​ಐ ರೋಗಿಗಳಿಗೆ ಚಿಕಿತ್ಸೆಯಲ್ಲಿ ಆಗುತ್ತಿರುವ ತೊಂದರೆ ನಿವಾರಿಸುವಂತೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ದೆಹಲಿಯಲ್ಲಿ ಮನವಿ ನೀಡಿದರು.
ಇಎಸ್​ಐ ರೋಗಿಗಳಿಗೆ ಚಿಕಿತ್ಸೆಯಲ್ಲಿ ಆಗುತ್ತಿರುವ ತೊಂದರೆ ನಿವಾರಿಸುವಂತೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ದೆಹಲಿಯಲ್ಲಿ ಮನವಿ ನೀಡಿದರು.
Published on

* ಉಡುಪಿ ಸಂಸದ ಕೋಟ 

ಶ್ರೀನಿವಾಸ 

ಪೂಜಾರಿ 

ಅಸಮಾಧಾನ

* ಸಮಸ್ಯೆ ನೀಗಿಸುವಂತೆ ಸಚಿವೆ ಕರಂದ್ಲಾಜೆಗೆ ಮನವಿ

ಉಡುಪಿ: ಕರ್ನಾಟಕ ರಾಜ್ಯದಲ್ಲಿ ನೋಂದಾಯಿತ ಖಾಸಗಿ ಆಸ್ಪತ್ರೆಗಳ ಮೂಲಕ ವ್ಯವಸ್ಥಿತವಾಗಿ ನಡೆಯುತ್ತಿದ್ದ ಇಎಸ್​ಐ ಚಿಕಿತ್ಸೆಯು ಇಲಾಖಾಧಿಕಾರಿಗಳ ಗೊಂದಲದ ನಿಲುವಿನಿಂದ ರೋಗಿಗಳಿಗೆ ತೊಂದರೆಯಾಗುತ್ತಿದೆ. ಕೂಡಲೇ ಕೇಂದ್ರ ಕಾರ್ಮಿಕ ಇಲಾಖೆ ಮಧ್ಯಪ್ರವೇಶಿಸಿ ಆಗುತ್ತಿರುವ ಸಮಸ್ಯೆ ನಿವಾರಿಸಿ ಇಎಸ್​ಐ ಫಲಾನುಭವಿಗಳ ನೆರವಿಗೆ ಬರಬೇಕು ಎಂದು ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಆಗ್ರಹಿಸಿದರು.
ದೆಹಲಿಯಲ್ಲಿ ಕಾರ್ಮಿಕ ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ಭೇಟಿಯಾಗಿ ಮನವಿ ನೀಡಿದರು.

ವಿಡಿಯೋ ಕಾನ್ಫರೆನ್ಸ್​ ತೊಡಕು

ಗಂಭೀರ ಸ್ಥಿತಿಯಲ್ಲಿ ಬಂದ ರೋಗಿಗಳನ್ನು ವಿಡಿಯೋ ಕಾನ್ಫರೆನ್ಸ್​ ಮೂಲಕ ಖಾಸಗಿ ಆಸ್ಪತ್ರೆಗಳು ಸಂವಾದ ನಡೆಸಬೇಕೆಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅದರಿಂದ ಹೃದಯಾಘಾತ, ತುರ್ತು ಶಸ್ತ್ರ ಚಿಕಿತ್ಸೆ ಇನ್ನಿತರ ಗಂಭೀರ ಚಿಕಿತ್ಸೆ ನೀಡಲು ಸಾಧ್ಯವಾಗದ ಸ್ಥಿತಿ ಉಂಟಾಗಿದೆ. ಚಿಕಿತ್ಸೆ ನಿರತ ವೈದ್ಯಾಧಿಕಾರಿಗಳು ಆತಂಕ ಸ್ಥಿತಿಯಲ್ಲಿದ್ದಾರೆ. ಮಾರಣಾಂತಿಕ ತುರ್ತು ಪರಿಸ್ಥಿತಿಯಲ್ಲಿ ವಿಡಿಯೋ ಕರೆಗೆ ಪ್ರತಿಕ್ರಿಯೆ ಕೊಡಲಾಗದೆ, ರೋಗಿಗಳಿಗೆ ಚಿಕಿತ್ಸೆಯನ್ನೂ ನೀಡಲಾಗದ ಸ್ಥಿತಿ ನಿಮಾರ್ಣವಾಗಿದೆ ಎಂದು ವಿವರಿಸಿದರು.

ಸ್ಪಂದಿಸದ ಇಲಾಖೆ

ವಾರಾಂತ್ಯದಲ್ಲಿ ಬರುವ ರಜಾ ದಿನ, ರಾತ್ರಿ ಬರುವ ತುರ್ತು ರೋಗಿಗಳಿಗೆ ಚಿಕಿತ್ಸೆ ನೀಡಲು ಇಎಸ್​ಐ ಅಧಿಕಾರಿಗಳು ಸಂಪರ್ಕಕ್ಕೆ ಲಭ್ಯವಾಗುವುದಿಲ್ಲ. ಅದರಿಂದ ರೋಗಿಗಳು ಪರದಾಡುವಂತಾಗಿದೆ. ಆಸ್ಪತ್ರೆಯಲ್ಲಿ ದಾಖಲಾದ ಮತ್ತು ಆಪರೇಷನ್​ ಥಿಯೇಟರ್​ನಲ್ಲಿ ಗಂಭೀರವಾಗಿ ಇರುವ ರೋಗಿಗಳು ವಿಡಿಯೋ ಕಾನ್ಫರೆನ್ಸ್​ನಲ್ಲಿ ಭಾಗವಹಿಸಲಾಗುತ್ತಿಲ್ಲ. ಕೆಲವು ಆಸ್ಪತ್ರೆಗಳಲ್ಲಿ ನೆಟ್​ವರ್ಕ್​ ಸಮಸ್ಯೆಗಳಿಂದ ವಿಡಿಯೋ ಕರೆ ಸಾಧ್ಯವಾಗುತ್ತಿಲ್ಲ. ಉಡುಪಿ, ಮಣಪಾಲದಲ್ಲೂ ಸಹ ವಿವಿಧ ಪ್ರತಿಷ್ಠಿತ ಆಸ್ಪತ್ರೆಗಳು ಚಿಕಿತ್ಸೆ ನೀಡಲು ಕಷ್ಟಪಡುತ್ತಿವೆ. ರೋಗಿಗಳ ಸಂಕಷ್ಟಕ್ಕೆ ಸ್ಪಂದಿಸಿ ಸಂಸದ, ಶಾಸಕರು ಮಾತನಾಡಿದರೂ ಇಲಾಖೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ತಿಳಿಸಿದರು.

ಗೊಂದಲ ಸೃಷ್ಟಿಸಿದರೆ ಸೂಕ್ತ ಕ್ರಮ

ಇದಕ್ಕೆ ಪ್ರತಿಕ್ರಿಸಿದ ಸಚಿವೆ ಶೋಭಾ ಕರಂದ್ಲಾಜೆ, ಕೇಂದ್ರ ಸರ್ಕಾರದ ಇಎಸ್​ಐ ಡೈರೆಕ್ಟರ್​ ಜನರಲ್​ ಅಶೋಕ್​ ಕುಮಾರ್​ ಸಿಂಗ್​ ಅವರಿಗೆ ಕೂಡಲೇ ಕರೆ ಮಾಡಿದರು. ಇಎಸ್​ಐ ಚಿಕಿತ್ಸೆ ಪಡೆಯುವ ರೋಗಿಗಳಿಗೆ ಯಾವುದೇ ತೊಂದರೆ ಆಗದಂತೆ ಇಎಸ್​ಐ ಅನುಷ್ಠಾನ ಮಾಡಬೇಕು. ಯಾವುದೇ ಅಧಿಕಾರಿ ಕಾರಣವಿಲ್ಲದೆ ಗೊಂದಲ ಸೃಷ್ಟಿಸಿದರೆ ಸೂಕ್ತ ಕ್ರಮ ಜರುಗಿಸುವಂತೆಯೂ ನಿರ್ದೇಶನ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net