ಜೀವನದ ಅವಕಾಶದಲ್ಲಿ ಸಮಾಜಕ್ಕೆ ಒಳಿತು ಮಾಡೋಣ

ಕಾರ್ಕಳದಲ್ಲಿ ಚಾತುರ್ಮಾಸ್ಯ ನಿರತ ಪ್ರಸನ್ನ ಸಾಗರ ಮುನಿಗಳಿಗೆ ಕೋಟ ಶ್ರೀನಿವಾಸ ಪೂಜಾರಿ ಅವರು ಪ್ರಧಾನಿ ಮೋದಿ ಸಾಧನೆಯ ಪುಸ್ತಕ ನೀಡಿದರು. ಲಲಿತಕೀರ್ತಿ ಭಟ್ಟಾರಕ ಶ್ರೀ, ನವೀನ್​ ನಾಯಕ್​, ಮಣಿರಾಜ್​ ಶೆಟ್ಟಿ, ಮಹಾವೀರ ಹೆಗ್ಡೆ, ಬೋಳ ಸತೀಶ್​, ಕರುಣಾಕರ್​ ಕೋಟ್ಯಾನ್​ ಇತರರಿದ್ದರು.
ಕಾರ್ಕಳದಲ್ಲಿ ಚಾತುರ್ಮಾಸ್ಯ ನಿರತ ಪ್ರಸನ್ನ ಸಾಗರ ಮುನಿಗಳಿಗೆ ಕೋಟ ಶ್ರೀನಿವಾಸ ಪೂಜಾರಿ ಅವರು ಪ್ರಧಾನಿ ಮೋದಿ ಸಾಧನೆಯ ಪುಸ್ತಕ ನೀಡಿದರು. ಲಲಿತಕೀರ್ತಿ ಭಟ್ಟಾರಕ ಶ್ರೀ, ನವೀನ್​ ನಾಯಕ್​, ಮಣಿರಾಜ್​ ಶೆಟ್ಟಿ, ಮಹಾವೀರ ಹೆಗ್ಡೆ, ಬೋಳ ಸತೀಶ್​, ಕರುಣಾಕರ್​ ಕೋಟ್ಯಾನ್​ ಇತರರಿದ್ದರು.
Published on

* ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಆಶಯ

*  ಪ್ರಸನ್ನ ಸಾಗರ ಮುನಿಗಳಿಗೆ 'ಮೋದಿ ಸಾಧನೆ' ಪುಸ್ತಕ ಪ್ರದಾನ

ಉಡುಪಿ: ಜೈನ ಧರ್ಮದ ದಿಗಂಬರ ಜೀವನ ಪದ್ಧತಿ ಅನುಸರಣೆಯೊಂದಿಗೆ ಕಾಲ್ನಡಿಗೆಯಲ್ಲಿ ದೇಶ ಸಂಚಾರ ಮಾಡುತ್ತ ಜನರಿಗೆ ಜೀವನದ ಸತ್ಯ ಅರುಹುತ್ತಿರುವ ಆಚಾರ್ಯ ಪ್ರಸನ್ನ ಸಾಗರ ಮಹಾಮುನಿಗಳ ಕಾರ್ಯ ಶ್ರೇಷ್ಠವಾದದ್ದು. 'ನೀರ ಮೇಲಿನ ಗುಳ್ಳೆ ನಿಜವಲ್ಲ ಹರಿಯೇ' ಎಂಬ ಮಾತಿನಂತೆ ಕ್ಷಣಿಕ ಜೀವನದ ಅವಕಾಶದಲ್ಲಿ ಸಮಾಜಕ್ಕೆ ಒಳಿತು ಮಾಡಿ ಎಂಬ ಪೂಜ್ಯರ ಸಂದೇಶ ಅನುಸರಿಸೋಣ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
ಕಾರ್ಕಳದ ದಾನಶಾಳೆಯಲ್ಲಿರುವ ಶ್ರೀಕ್ಷೇತ್ರ ಜೈನ ಮಠದಲ್ಲಿ ಚಾತುರ್ಮಾಸ್ಯ ನಿರತ ಪ್ರಸನ್ನ ಸಾಗರ ಮುನಿ ಮಹಾರಾಜ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಕೇಂದ್ರ ಸರ್ಕಾರದ 12 ವರ್ಷಗಳ ಸಾಧನೆ ಒಳಗೊಂಡ ಪುಸ್ತಕ ನೀಡಿ ಸ್ವಾಮೀಜಿಯ ಆಶೀರ್ವಾದ ಪಡೆದರು.
ಪೂಜ್ಯರ ಬದುಕಿನ ಪದ್ಧತಿ ಅಚ್ಚರಿದಾಯಕ. ದಿನಕ್ಕೊಮ್ಮೆ ಕೈಯಲ್ಲೇ ಭಿಕ್ಷೆ ಸ್ವೀಕಾರ. ರಾತ್ರಿ ಮೌನ, ಅಹಿಂಸೆಯ ಜೀವನವೇ ಅವರ ಬದುಕಿನ ಭಾಗವಾಗಿದೆ. ಅಂತಹ ಯತಿಶ್ರೇಷ್ಠರಿಗೆ ಪ್ರಧಾನಿ ಮೋದಿ ಸಾಧನೆಯ ಪುಸ್ತಕ ನೀಡಿರುವುದು ಸಂತಸ ತಂದಿದೆ ಎಂದರು.
ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಕಾರ್ಕಳದ ಬಿಜೆಪಿ ಅಧ್ಯಕ್ಷ ನವೀನ್​ ನಾಯಕ್​, ಪಕ್ಷದ ಪ್ರಮುಖರಾದ ಮಣಿರಾಜ್​ ಶೆಟ್ಟಿ, ಮಹಾವೀರ ಹೆಗ್ಡೆ, ಬೋಳ ಸತೀಶ್​, ಕರುಣಾಕರ್​ ಕೋಟ್ಯಾನ್​, ಶೀತಲ್​ ಜೈನ್​, ಸೂರಜ್​ ಜೈನ್​, ಸುಮಾ ಕೇಶವ್​, ನೀತಾ, ಭಾರತಿ ಅಮೀನ್​, ಕಾಂತಾವರ ರಂಜಿತ್​ ಶೆಟ್ಟಿ, ಪ್ರಭಾಕರ್​ ಕುಲಾಲ್​ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net